ಟಿಪ್ಪುವನ್ನು ಕೊಂದ ಕ್ರೆಡಿಟ್ ಕೊಡವರಿಗೆ ಹೋಗ್ಬೇಕು: ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿಕೆ

Tippu Sultan : ಟಿಪ್ಪುವನ್ನು (Tippu Sultan) ಕೊಂದಿದ್ದು ಕೊಡವರು. ಟಿಪ್ಪುವನ್ನು ಕೊಂದ ಕ್ರೆಡಿಟ್ ಕೊಡವರಿಗೆ ಸಲ್ಲಬೇಕು. ಒಕ್ಕಲಿಗ ಸಮುದಾಯದ ವೀರ ಪುತ್ರರಾದ ಉರಿಗೌಡ ಮತ್ತು ನಂಜೇಗೌಡ (Uri Gowda and Nanje Gowda) ಟಿಪ್ಪು ಸುಲ್ತಾನ್ ಅನ್ನು ಕೊಂದದ್ದು ಎಂದು ಒಂದು ರಾಜಕೀಯ ಪಕ್ಷ ಹೇಳುತ್ತಿದೆ. ಆದರೆ ಟಿಪ್ಪುವನ್ನು ಕೊಂದಿದ್ದು ಕೊಡವರು. ಆ ಕ್ರೆಡಿಟ್ ಕೊಡವರಿಗೆ ಸಲ್ಲಬೇಕು. ಅದು ಬಿಟ್ಟು ಬಹುಸಂಖ್ಯಾತರ ಹೆಸರು ಹೇಳಿಕೊಂಡು ರಾಜಕೀಯ ಮಾಡಲು ರಾಜಕೀಯ ಪಕ್ಷಗಳು ಹೊರಟಿವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿಕೆ ನೀಡಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಟಿಪ್ಪುವನ್ನು ಕೊಂದದ್ದು ತಮ್ಮ ಸಮುದಾಯದವರೆಂದು ಹಲವು ಜನರು ಮುಂದೆ ಬರುತ್ತಿದ್ದಾರೆ. ಟಿಪ್ಪುವನ್ನು ಮುಗಿಸಿದ್ದು ಒಕ್ಕಲಿಗರೆಂದು ಕೆಲವರು ಹೇಳಿದರೆ ಮತ್ತೆ ಕೆಲವರು ಬ್ರಿಟಿಷರೆಂದು ಹೇಳುತ್ತಿದ್ದಾರೆ. ಈಗ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿಕೆ ನೀಡಿ, ಟಿಪ್ಪುವನ್ನು ಮಲಗಿಸಿದ್ದು ಕೊಡವರು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಡಳಿತದ ಸಮಯದಲ್ಲಿ ಟಿಪ್ಪು ಜಯಂತಿ ಮಾಡಿ ಕೊಡಗಿನಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷವಾಗಿ ಎರಡು ಅಮಾಯಕ ಜೀವಗಳು ಬಲಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂದಿಗೂ ಟಿಪ್ಪು ಅಂದರೆ ಕೊಡಗರು ಅಕ್ರೋಶ ವ್ಯಕ್ತಪಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಟಿಪ್ಪುವನ್ನು ಕೊಂದಿದ್ದು ಕೊಡವರು ಎಂದಿದ್ದಾರೆ ನಾಚಪ್ಪನವರು.

ಕೊಡವರು ಯಾವತ್ತೂಉತ್ತಮ ಗುರಿಕಾರರಾಗಿದ್ದಾರೆ. ಜೊತೆಗೆ ನಾಲ್ಕು ಆಂಗ್ಲೋ ಮೈಸೂರು (ಆಂಗ್ಲೋ Mysore) ಯುದ್ಧದಲ್ಲಿ ಕೊಡವರು ಹೋರಾಡಿದ್ದಾರೆ. ಆದ್ದರಿಂದ ಟಿಪ್ಪುವನ್ನು ಕೊಂದಿದ್ದರೆ ಅದು ಕೊಡವರು ಮಾತ್ರ ಎಂದು ಅವರು ಹೇಳಿದ್ದಾರೆ. ಈಗ ಬಹುಸಂಖ್ಯಾತರ ಹೆಸರು ಹೇಳಿಕೊಂಡು ಕೆಲವರು ರಾಜಕೀಯ ಮಾಡಲು ಹೊರಟಿದ್ದಾರೆ. ಉರಿಗೌಡ, ನಂಜೇಗೌಡ ಒಕ್ಕಲಿಗರು. ಇಲ್ಲಿಒಕ್ಕಲಿಗರು ಬಹುಸಂಖ್ಯಾತರು, ಕೊಡವರು ಅಲ್ಪಸಂಖ್ಯಾತರು. ಕೊಡವರಿಂದ ಯಾರಿಗೂ ಏನೂ ರಾಜಕೀಯ ಲಾಭವಾಗುವುದಿಲ್ಲ. ಅದಕ್ಕಾಗಿ ಉರಿಗೌಡ, ನಂಜೇಗೌಡ ಎನ್ನುವುದು ರಾಜಕೀಯ ಸೃಷ್ಟಿಯಾಗಿದೆ ಎಂದಿದ್ದಾರೆ ನಾಚಪ್ಪ.

ಟಿಪ್ಪುಕೊಡವರನ್ನು ಸಾಮೂಹಿಕ ಹತ್ಯೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಇದೇ ಕಾರಣದಿಂದ ಕೊಡಗು ಜನ ಸಂಖ್ಯೆ ಕಡಿಮೆ ಆಗಿರುವುದು ಇತಿಹಾಸ ದಾಖಲೆಗಳಲ್ಲೇ ಇದೆ. ಅಲ್ಲದೇ, ಟಿಪ್ಪು ಕೊಡಗಿನ ದೇವಟು ಪರಂಬುವಿನಲ್ಲಿ ಮೋಸದಿಂದ ಕೊಡವ ಜನರನ್ನು  ಹತ್ಯೆ ಮಾಡುವಾಗ ಈಗ ಕಾಲ್ಪನಿಕವಾಗಿ ಸೃಷ್ಟಿ ಮಾಡಿರುವ ಉರಿಗೌಡ, ನಂಜೇಗೌಡ ಬಂದು ಹೋಗಿರಬಹದು. ಈಗಲೂ ಟಿಪ್ಪು ಹೆಸರು ಕೇಳಿದ್ರೆ ಕೊಡವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ಬಿಜೆಪಿ ನಾಯಕರುಗಳಿಗೆ ಕೊಡವರ ಬಗ್ಗೆ ನೈಜ ಕಾಳಜಿ ಇದ್ದರೆ ಟಿಪ್ಪುವಿನ ಮೇಲೆ ಅಷ್ಟೊಂದು ರೋಷ ಇದ್ದರೆ ಸುಂಟಿಕೊಪ್ಪದ ಉಲಿಗುಲಿ, ಕುಶಾಲನಗರದ ಮುಳ್ಳುಸೋಗೆಯಲ್ಲಿ ಕೊಡವ ಯುದ್ಧ ಸ್ಮಾರಕ ಮಾಡಬೇಕಾಗಿತ್ತು. ದೇವಟು ಪರಂಬುವಿನಲ್ಲಿ ಹತ್ಯಾಕಾಂಡದ ಸ್ಮಾರಕ ಮಾಡಬೇಕಾಗಿತ್ತು. ಅದರ ಬದಲು ಅದರ ವಿರುದ್ಧ ಪ್ರಕರಣ ಹಾಕಿಸಿ ಅದು ಸುಮ್ಮನೆ ಎಳೆದುಕೊಂಡು ಹೋಗುವಂತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಎಂದಿದ್ದಾರೆ. ನಾಚಪ್ಪ.

ಮುಂದುವರಿದು ಮಾತನಾಡಿದ ನಾಚಪ್ಪಣವರು, ಅಡ್ಡಂಡ ಕಾರ್ಯಪ್ಪನೊಂದಿಗೆ ಒಕ್ಕಲಿಗ ಮತ ಓಲೈಕೆಗಾಗಿ ಸೇರಿಕೊಂಡು ರಾಜಕೀಯಕ್ಕಾಗಿ ಕಾಲ್ಪನಿಕ ಸೃಷ್ಟಿ ಮಾಡಿಕೊಳ್ಳಲಾಗುತ್ತಿದೆ. ಆಗ ಈ ಎರಡು ಪಾತ್ರಗಳು ಸೃಷ್ಟಿಯಾಗಿದೆ. ಆದರೆ ನಿಜವಾಗಿಯೂ ಟಿಪ್ಪುವನ್ನು ಕೊಂದವರು ಕೊಡವರು ಎಂದು ಹೇಳಿದ್ರು. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.

Leave A Reply

Your email address will not be published.