Crime News: 9 ವರ್ಷಗಳ ಹಿಂದಿನ ಕೊಲೆ ಕೇಸ್ ಗೆ ಇಂದು ಸಾಕ್ಷಿ ಹೇಳಿತು ಗಿಳಿ! ಕೊಲೆಗಾರನಿಗೆ ಶಿಕ್ಷೆ ಕೊಡಿಸಲು ಗಿಳಿ ನೀಡಿದ ಸುಳಿವೇನು ಗೊತ್ತಾ?

Parrot witness :ಮುದ್ದಿನಿಂದ ಸಾಕಿದ ಗಿಳಿಯು ಊಟ, ನೀರು ಬಿಡಲು ಆರಂಭಿಸಿತು. ಇದನ್ನೇ ನೋಡಿದ ಶರ್ಮಾ ಅವರು ಈ ಕೊಲೆಗೆ ಗಿಳಿಯೇ ಸಾಕ್ಷಿಯಾಗಿರಬಹುದು ಎಂದು ಅರಿತು, ಅನುಮಾನದಲ್ಲಿದ್ದ ಒಂದೊಂದೇ ಹೆಸರನ್ನು ಗಿಳಿಯ ಮುಂದೆ ಹೇಳಲು ಆರಂಭಿಸಿದರು. ಆದರೆ ಈ ಸಂದರ್ಭದಲ್ಲಿ ಆಶು ಹೆಸರನ್ನು ಹೇಳಿದ ತಕ್ಷಣ ಗಿಳಿಯೂ ಗಾಬರಿಗೊಂಡಿತು ಮತ್ತು ಪದೇ ಪದೇ ಆಶು- ಆಶು ಎಂದು ಕೂಗಲು ಆರಂಭಿಸಿತು.

 

ಆಗ್ರಾದ ಜನಪ್ರಿಯ ಪತ್ರಿಕೆಯೊಂದರ ಮುಖ್ಯ ಸಂಪಾದಕರಾಗಿರುವ ವಿಜಯ್​ ಶರ್ಮಾ (Vijay Sharma) ಅವರ ಪತ್ನಿ ನೀಲಂ ಶರ್ಮಾರ(Neelam Sharma) ನ್ನು 2014 ರ ಫೆಬ್ರವರಿ 20 ರಂದು ಅವರ ಸ್ವಂತ ಮನೆಯಲ್ಲೇ ಹತ್ಯೆ ಮಾಡಲಾಗಿತ್ತು. ಅವರನ್ನು ಕೊಲೆ ಮಾಡಿದ ಬಳಿಕ ಅವರ ಮನೆಯನ್ನು ಸಹ ದರೋಡೆ (Robbery) ಮಾಡಲಾಗಿತ್ತು. ಆದರೆ ಇರುವರೆಗೂ ಅದರ ಬಗ್ಗೆ ವಿಜಯ್​ ಶರ್ಮಾಗಾಗಲಿ, ಪೊಲೀಸರಿಗಾಗಲಿ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಆದರೀಗ ಅವರ ಮನೆಯಲ್ಲಿ ಸಾಕಿದ್ದ ಗಿಳಿಯೇ ಕೊಲೆಗಾರನನ್ನು (Parrot witness) ಹಿಡಿದುಕೊಟ್ಟಿದೆ.

ಹೌದು, ಈ ವರ್ಷಕ್ಕೆ ನೀಲಂ ಶರ್ಮಾ ಅವರ ಕೊಲೆ ನಡೆದು ಬರೋಬ್ಬರಿ 9 ವರ್ಷಗಳಾದವು. ಈ ಬಗ್ಗೆ ತನಿಖೆ ನಡೆಸಿದ ನಂತರ ನ್ಯಾಯಾಧೀಶ ಮೊಹಮ್ಮದ್​ ರಶೀದ್​ ಅವರು ನೀಲಂ ಶರ್ಮಾ ಅವರನ್ನು ಹತ್ಯೆಗೈದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ಆಶು ಅವರ ತಪ್ಪೊಪ್ಪಿಗೆ ಜೊತೆಗೆ ಸಾಕ್ಷಿಯ ಆಧಾರದ ಮೇಲೆ 72 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. ಅಂದಹಾಗೆ ಕಳೆದ 2014ರಲ್ಲಿ ನೀಲಂ ಶರ್ಮಾರನ್ನು ಕೊಲೆ ಮಾಡಿದ್ದ ಆರೋಪಿಗಳಿಗೆ ಗಿಳಿಯು ನೀಡಿದ ಅದೊಂದು ಸುಳಿವಿನಿಂದ ಬರೋಬ್ಬರಿ 9 ವರ್ಷಗಳ ನಂತರ ನ್ಯಾಯಾಧೀಶರು ಜೀವಾವಧಿ ಶಿಕ್ಷೆಯನ್ನು ನೀಡಿದ್ದಾರೆ.

ಈ ಕೊಲೆಯ ಪ್ರಕರಣದ ಹಿನ್ನೆಲೆ ಏನೆಂದು ನೋಡುವುದಾದರೆ ವಿಜಯ್ ಶರ್ಮಾ ಅವರು 2014 ರ ಫೆಬ್ರವರಿ 20 ರಂದು ತಮ್ಮ ಮಗ ರಾಜೇಶ್​(Rajesh) ಮತ್ತು ಮಗಳು ನಿವೇದಿತಾ(Nivedita) ಅವರೊಂದಿಗೆ ಫಿರೋಜಾಬಾದ್​ನಲ್ಲಿ ಮದುವೆಗೆ ಹೊರಟಿದ್ದರು. ಆದರೆ ಈ ಸಂದರ್ಭದಲ್ಲಿ ನೀಲಂ ಶರ್ಮಾ ಅವರು ಮನೆಯಲ್ಲೇ ಇದ್ದರಂತೆ. ಮದುವೆ ಮುಗಿಸಿ ತಡರಾತ್ರಿ ಮನೆಗೆ ವಾಪಸ್ಸಾದಾಗ ಪತ್ನಿ ಹಾಗೂ ಸಾಕು ನಾಯಿಯ ಹತ್ಯೆಯಾಗಿತ್ತು. ಶಾರ್ಪ್​ ವಸ್ತುವಿನಿಂದ ನಾಯಿ ಹಾಗೂ ಶರ್ಮಾ ಅವರ ಹೆಂಡತಿಯನ್ನು ಕೊಲೆ ಮಾಡಲಾಗಿತ್ತು. ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು.

ಆದರೆ ಕೊಲೆಗಡುಕರ ಕುರಿತು ಕಿಂಚಿತ್ತೂ ಸುಳಿವು ದೊರಕಿರಲಿಲ್ಲ. ದಿನಗಳು ಹೋದಂತೆ ವಿಜಯ್​ ಶರ್ಮಾ ಅವರು ಮುದ್ದಿನಿಂದ ಸಾಕಿದ ಗಿಳಿಯೂ ಊಟ, ನೀರು ಬಿಡಲು ಆರಂಭಿಸಿತು. ಇದನ್ನೇ ನೋಡಿದ ಶರ್ಮಾ ಅವರು ಈ ಕೊಲೆಗೆ ಗಿಳಿಯೇ ಸಾಕ್ಷಿಯಾಗಿರಬಹುದು ಎಂದು ಅರಿತು, ಅನುಮಾನದಲ್ಲಿದ್ದ ಒಂದೊಂದೇ ಹೆಸರನ್ನು ಗಿಳಿಯ ಮುಂದೆ ಹೇಳಲು ಆರಂಭಿಸಿದರು. ಆದರೆ ಈ ಸಂದರ್ಭದಲ್ಲಿ ಆಶು ಹೆಸರನ್ನು ಹೇಳಿದ ತಕ್ಷಣ ಗಿಳಿಯೂ ಗಾಬರಿಗೊಂಡಿತು ಮತ್ತು ನಂತರ ಪದೇ ಪದೇ ಆಶು- ಆಶು ಎಂದು ಕೂಗಲು ಆರಂಭಿಸಿತು. ಇದನ್ನು ಕೇಳಿದ ವಿಜಯ್​ ಶರ್ಮಾ ಅವರು ಅನುಮಾನಗೊಂಡು ತಕ್ಷಣ ಪೊಲೀಸರಿಗೆ ದೂರು ನೀಡಿದರು. ಪೊಲೀಸರ ಬಳಿಯೂ ಆಶು ಹೆಸರೆತ್ತಿದಾಗ ಇದೇ ರೀತಿಯ ಪ್ರತಿಕ್ರಿಯೆ ನೀಡಿದ ಗಿಳಿಯನ್ನು ನೋಡಿ ಸೋದರಳಿಯ ಆಶು, ತನ್ನ ಸ್ನೇಹಿತ ರೋನಿ ಮಾಸ್ಸಿ ಸಹಾಯದಿಂದ ನೀಲಂ ಅವರನ್ನು ಕೊಲೆ ಮಾಡಿರುವುದು ಬೆಳಕಿದೆ ಬಂದಿದೆ. ಬಳಿಕ ತಕ್ಷಣ ಆಶುವನ್ನು ಬಂಧಿಸಿದರು.

ನೀಲಂ ಶರ್ಮಾ ಅವರ ಪುತ್ರಿ ನಿವೇದಿತಾ ಶರ್ಮಾ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಆಶು ಮನೆಗೆ ಆಗಾಗ ಬರುತ್ತಿದ್ದರು ಮತ್ತು ಹಲವು ವರ್ಷಗಳ ಕಾಲ ಮನೆಯಲ್ಲಿ ಅವರ ಜೊತೆಗೆ ಇದ್ದರು ಎಂದು ತಿಳಿಸಿದ್ದಾರೆ. ಎಂಬಿಎ ಪದವಿ ಪಡೆಯಲು ಆಕೆಯ ತಂದೆ 80,000 ರೂಪಾಯಿ ಹಣವನ್ನು ನೀಡಿದ್ದರಂತೆ. ಇನ್ನು ಮನೆಯಲ್ಲಿ ಚಿನ್ನಾಭರಣ ಮತ್ತು ನಗದನ್ನೆಲ್ಲಾ ಎಲ್ಲೆಲ್ಲಿ ನಾವು ಇಡುತ್ತೇವೆ ಎಂದು ಆಶುಗೆ ಸರಿಯಾಗಿ ತಿಳಿದಿತ್ತು. ಇದಕ್ಕಾಗಿಯೇ ಅವರು ಸುಲಭದಲ್ಲಿ ದರೋಡೆ ಮಾಡಿದ್ದಾರೆ ಎಂದು ನಿವೇದಿತಾ ಹೇಳಿದ್ದಾರೆ.

ಇದನ್ನೂ ಓದಿ: Disqualification: ಜನಪ್ರತಿನಿಧಿಗಳಾಗಿ ಅನರ್ಹಗೊಂಡವರು ರಾಹುಲ್ ಗಾಂಧಿ ಮಾತ್ರವಲ್ಲ! ಈ ಘಟಾನುಘಟಿಗಳು ಅನರ್ಹವಾಗಿದ್ದರು!

Leave A Reply

Your email address will not be published.