Haunted Railway Station : ಈ ರೈಲ್ವೆ ನಿಲ್ದಾಣ ಅಂದ್ರೆ ಜನ ಬೆಚ್ಚಿ ಬೀಳುತ್ತಿದ್ದರು! ಬರೋಬ್ಬರಿ 42ವರ್ಷಗಳ ಕಾಲ ಮುಚ್ಚಲು ಒಂದು ಬಲವಾದ ಕಾರಣವಿದೆ!
Haunted Railway Station :ಈ ಜಗತ್ತಿನಲ್ಲಿ ಹಲವು ಭಯಾನಕರ ಸ್ಥಳಗಳು ಇದೆ. ಅಂತಹುದೇ ಒಂದು ಭಯಾನಕ ಸ್ಥಳವೇ ಈ ರೈಲು ನಿಲ್ದಾಣ (Haunted Railway Station) . ಈ ರೈಲು ನಿಲ್ದಾಣದ ಹೆಸರು ಹೇಳಿದರೂ ಜನ ಭಯ ಬೀಳುತ್ತಾರೆ ಎಂದರೆ ನೀವು ನಂಬುತ್ತೀರಾ? ಹೌದು, ಬನ್ನಿ ತಿಳಿಯೋಣ ಇದು ಯಾವ ರೈಲು ನಿಲ್ದಾಣ? ಎಲ್ಲಿಯದು? ಇಲ್ಲಿನ ಸಂಪೂರ್ಣ ಕಥೆ ಇಲ್ಲಿದೆ.
ಇಲ್ಲೊಂದು ರೈಲ್ವೆ ನಿಲ್ದಾಣವನ್ನು ನೋಡಿದರೆ ಜನರು ಭಯ ಪಡುತ್ತಾರೆ. ಹೆಚ್ಚಾಗಿ ನಾವೆಲ್ಲರೂ ಹಾರರ್ ಸಿನಿಮಾ ನೋಡಿ ಭಯ ಪಡುತ್ತೇವೆ. ಆದರೆ ಈ ರೈಲ್ವೇ ನಿಲ್ದಾಣ ನೋಡಿ ಜನರು ಯಾಕೆ ಅಷ್ಟು ಭಯ ಪಡುತ್ತಾರೆ ಗೊತ್ತಾ? ಈ ರೈಲ್ವೇ ನಿಲ್ದಾಣ ವನ್ನು 42 ವರ್ಷಗಳ ಕಾಲ ಮುಚ್ಚಲು ಕಾರಣವೇನು ? ಈ ಕುತೂಹಲಕಾರಿ ವಿಷಯದ ಬಗ್ಗೆ ತಿಳಿಯಲು ಮುಂದೆ ಓದಿ.
ಭಾರತದ ಹಲವಾರು ಸ್ಥಳಗಳಲ್ಲಿ ದೆವ್ವಗಳು ಇರುತ್ತವೆ ಎಂದು ಕೇಳಿರಬಹುದು ನೀವು. ಅಂಥದ್ದೇ ಒಂದು ವಿಷಯವು ಪಶ್ಚಿಮಬಂಗಾಳದ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಈ ಕಾರಣದಿಂದಲೇ 42 ವರ್ಷಗಳಿಂದ ಈ ರೈಲ್ವೇ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಜಾರ್ಖಂಡ್ ಗಡಿಯ ಸಮೀಪದ ಪಶ್ಚಿಮ ಬಂಗಾಳದ ಪುರುಲಿಯಾ ಕೋಟ್ಶಿಲಾ ಮುರಿಯಲ್ಲಿರುವ ರೈಲ್ವೇ ನಿಲ್ದಾಣದ ಹೆಸರು ಕೇಳಿದರೆ ಜನರು ಭಯ ಪಡುವಂತೆ ಅಗಿದೆ. ಆದರಿಂದ 42 ವರ್ಷಗಳ ಕಾಲ ಬಂದ್ ಮಾಡಿದ್ದಾರೆ. ಇಲ್ಲಿ ಓಡಾಡುತ್ತಿದ್ದ ಜನರೂ ಮೌನಕ್ಕೆ ಶರಣಾಗಿದ್ದಾರೆ.
ಈ ರೈಲ್ವೇ ನಿಲ್ದಾಣಕ್ಕೆ ಯಾರೂ ಕೂಡ ಹೋಗುವುದಿಲ್ಲ, ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಇಲ್ಲಿ ಕಣಿಸುಕೊಳ್ಳುವುದಿಲ್ಲ. ಈ ರೈಲ್ವೇ ನಿಲ್ದಾಣದ ಹೆಸರು ಬೇಗಂಕೊಡರ್. ಇದು 1960 ರಲ್ಲಿ ನಿರ್ಮಾಣವಾಗಿತ್ತು. ರಾಣಿ ಸಂತಾಲ್ಸ್ ಅವರ ನೆರವಿನಿಂದ ನಿರ್ಮಾಣವಾಗಿದ್ದ ನಿಲ್ದಾಣದಲ್ಲಿ ಜನರು ಖುಷಿಯಾಗಿ ಓಡಾಡುತ್ತಿದ್ದರು. ಆದರೆ 1967ರಲ್ಲಿ ನಿಲ್ದಾಣದ ಸ್ಟೇಷನ್ ಮಾಸ್ಟರ್ ಒಂದು ದಿನ ರಾತ್ರಿ ರೈಲು ಹಳಿ ಮೇಲೆ ದೆವ್ವವನ್ನು ಕಂಡಿರುವುದಾಗಿ ಹೇಳಿದ್ದಾರೆ. ಮಹಿಳೆ ದೆವ್ವ ರೈಲಿನ ಜೊತೆ ಓಡಾಡುತ್ತಾ ಬರುತ್ತದೆ ನಿಲ್ದಾಣ ಬರುತ್ತಿದ್ದಂತೆಯೇ ಮಾಯ ಆಗುತ್ತದೆ ಅಂತೆ.
ರಾತ್ರಿ ವೇಳೆ ರೈಲ್ವೇ ಹಳಿಯ ಮೇಲೆ ಬಿಳಿ ಸಿರೆಯುಟ್ಟು ಮಹಿಳೆ ದೆವ್ವ ಓಡಾಡುತ್ತಿದೆ ಎಂದೂ ನಿಲ್ದಾಣದ ಮಾಸ್ಟರ್ ತಿಳಿಸಿದ್ದರು. ಈ ಸುದ್ದಿಯು ಎಲ್ಲೆಡೆ ಹಬ್ಬಿದೆ. ನಂತರ ಎಲ್ಲರೂ ಭೂತವನ್ನು ಕಂಡಿರುವುದಾಗಿ ಹೇಳಿದ್ದಾರೆ. ಹಿಂದೆ ರೈಲ್ವೇ ಹಳಿಯಲ್ಲಿ ಒಬ್ಬಳು ಯುವತಿಯು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳೇ ದೆವ್ವ ಆಗಿರಬಹುದು ಎಂದು ಹೇಳುತ್ತಿದ್ದರು. ಈ ಎಲ್ಲಾ ಊಹಾಪೋಹಗಳನ್ನು ರೈಲ್ವೇ ಇಲಾಖೆ ನಂಬಲು ನಿರಾಕರಿಸಿತ್ತು. ಇದಾದ ಕೆಲವು ದಿನಗಳ ನಂತರ ಸ್ಟೇಷನ್ ಮಾಸ್ಟರ್ ನ ಕುಟುಂಬ ಸದಸ್ಯರು ಹಾಗೂ ಮಾಸ್ಟರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ನಂತರ ಎಲ್ಲರೂ ಇದು ನಿಜವಾದ ದೆವ್ವ, ಇದು ಊಹಾಪೋಹವಲ್ಲ, ನೈಜ ಎಂದು ನಂಬತೊಡಗಿದರು. ಸ್ಟೇಷನ್ ಮಾಸ್ಟರ್ ಸಾವಿನ ನಂತರ ಯಾರು ಕೂಡ ಈ ಉದ್ಯೋಗಕ್ಕೆ ಬರಲು ಒಪ್ಪಿಕೊಳ್ಳಲಿಲ್ಲ. ಉದ್ಯೋಗಿಗಳನ್ನು ಕಳುಹಿಸಲು ಪ್ರಯತ್ನಿಸಿದರೂ ಕೂಡ ಯಾರೂ ಹೋಗಲು ಮುಂದಾಗಲಿಲ್ಲ. ಕೊನೆಗೆ ರೈಲ್ವೆ ನಿಲ್ದಾಣವನ್ನು ಬಂದ್ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.
1990 ರಲ್ಲಿ ಮತ್ತೆ ನಿಲ್ದಾಣವನ್ನು ಮರು ಪ್ರಾರಂಭಿಸಿ ಎಂದು ಬೇಡಿಕೆ ಇಟ್ಟರೂ, ನಂತರ 42 ವರ್ಷದ ನಂತರ 2009 ರಲ್ಲಿ ಮಮತಾ ಬ್ಯಾನರ್ಜಿ ನಿಲ್ದಾಣವನ್ನು ಪುನರಾರಂಭಿಸಿದ್ದರು. ಇಲ್ಲಿಗೆ ರೈಲುಗಳು ಬರುತ್ತವೆ ಹೊರತು ಒಬ್ಬ ಉದ್ಯೋಗಿಗಳು ಕೂಡ ಕಾರ್ಯ ನಿರ್ವಹಿಸುತ್ತಿಲ್ಲ.