Ant Facts : ಮನುಷ್ಯರಂತೆ ಇರುವೆ ಯಾಕೆ ನಿದ್ದೆ ಮಾಡುವುದಿಲ್ಲ? ಇಂಟೆರೆಸ್ಟಿಂಗ್‌ ಮಾಹಿತಿ ನಿಮಗಾಗಿ ಇಲ್ಲಿದೆ!

Ant Facts : ಭೂಮಿಯ ಮೇಲೆ ವಾಸಿಸುವ ಎಲ್ಲ ಜೀವಿಗಳಿಗೂ ನಿದ್ದೆ ಬೇಕೇ ಬೇಕು. ಅದರಂತೆ, ಮಾನವರು ಮತ್ತು ಪ್ರಾಣಿಗಳು ಉನ್ನತ ಮಟ್ಟದ ನಿದ್ದೆಯನ್ನು ಮಾಡುತ್ತವೆ. ಆದರೆ, ಇರುವೆಗಳು ನಿದ್ರೆ ಮಾಡುವುದಿಲ್ಲ. ದಿನವೂ ನಾವು ಇರುವೆಗಳನ್ನು ಗಮನಿಸುತ್ತೇವೆ. ಆದರೆ ಅದರ ವೈಶಿಷ್ಟ್ಯಗಳ ಬಗ್ಗೆ (Ant Facts) ನಮಗೆ ತಿಳಿದಿರುವುದಿಲ್ಲ. ಇರುವೆಗಳು ತಮ್ಮ ಜೀವನವಿಡೀ ನಿದ್ರೆ ಮಾಡುವುದಿಲ್ಲ. ಹಾಗಾದರೆ ಅವು ವಿಶ್ರಾಂತಿ ಪಡೆಯುವುದು ಹೇಗೆ ಎಂಬ ಗೊಂದಲಗಳಿಗೆ ಉತ್ತರ ಇಲ್ಲಿದೆ.

 

ವೈಜ್ಞಾನಿಕ ಮಾಹಿತಿಯ ಪ್ರಕಾರ, ಇಡೀ ಜಗತ್ತಿನಲ್ಲಿ 10 ಸಾವಿರಕ್ಕೂ ಹೆಚ್ಚು ಇರುವೆಗಳ ಜಾತಿಗಳು ಕಂಡುಬರುತ್ತವೆ. ಅವುಗಳ ಗಾತ್ರ 2 ರಿಂದ 7 ಮಿಲಿಮೀಟರ್ ಉದ್ದವಿರಬಹುದು. ಒಂದು ಚಿಕ್ಕ ಇರುವೆಯಲ್ಲಿಯೂ ಸುಮಾರು 2.5 ಲಕ್ಷ ಮೆದುಳಿನ ಜೀವಕೋಶಗಳಿವೆ. ಈ ಜೀವಕೋಶಗಳ ಕಾರಣದಿಂದಾಗಿ, ಇರುವೆ ನಿದ್ದೆ ಮಾಡದೆ ತನ್ನ ಮೆದುಳನ್ನು ಸಕ್ರಿಯವಾಗಿರಿಸಿಕೊಳ್ಳುತ್ತದೆ ಎನ್ನಲಾಗುತ್ತದೆ.

ಮುಖ್ಯವಾಗಿ ಇರುವೆಗಳು ಕೇಂದ್ರ ನರಮಂಡಲದ ಬದಲಿಗೆ ಗ್ಯಾಂಗ್ಲಿಯಾ ಸಮೂಹವನ್ನು ಹೊಂದಿರುತ್ತವೆ. ಇವುಗಳನ್ನು ನರ ಕೋಶಗಳು ಎಂದು ಕರೆಯಲಾಗುತ್ತದೆ. ಇವು ಇರುವೆಯ ದೇಹದಾದ್ಯಂತ ಇರುತ್ತವೆ. ಹಾಗಾಗಿ ಇರುವೆಗಳು ನಮ್ಮಂತೆ ಮಲಗುವುದಿಲ್ಲ.

ಆದರೆ ಇರುವೆಗಳು ಮಲಗುವ ಬದಲು ವಿಶ್ರಾಂತಿ ಪಡೆಯುತ್ತವೆ. ಆ ಸಮಯದಲ್ಲಿ ಅವು ಸಕ್ರಿಯವಾಗಿರುವುದಿಲ್ಲ. ಇದು ಒಂದು ರೀತಿಯ ನಿದ್ರೆ ಎಂದು ಭಾವಿಸಬಹುದು. ಹಾಗಾಗಿ ಶತ್ರುಗಳು ದಾಳಿ ಮಾಡಲು ಮುಂದಾದರೂ ಅಥವಾ ಆಹಾರವು ಒಂದು ನಿರ್ದಿಷ್ಟ ಸ್ಥಳದಲ್ಲಿದೆ ಎಂದು ತಿಳಿದಿದ್ದರೂ, ಇರುವೆಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವೇಳೆ ಕೆಲಸ ಮಾಡುವುದಿಲ್ಲ.

ಇರುವೆ ಗೂಡಿನಲ್ಲಿ ವಿವಿಧ ಇರುವೆಗಳು ವಿಭಿನ್ನ ಜವಾಬ್ದಾರಿಗಳನ್ನು ಹೊಂದಿವೆ. ಅದೇನೆಂದರೆ ಕಾವಲು ಕಾಯುವುದು, ಮರಿ ಇರುವೆಗಳ ಆರೈಕೆ, ಶತ್ರುಗಳಿಗೆ ಆಹಾರ ಸಿಗದಂತೆ ತಡೆಯುವುದು ಮತ್ತು ಇನ್ನೂ ಅನೇಕ. ಆದ್ದರಿಂದ ನಿದ್ರೆ ಅದರ ಜೀವನದಲ್ಲಿ ಒಂದು ವಿಷಯವೇ ಅಲ್ಲ. ಅದು ತನ್ನ ಬಳಗಕ್ಕಾಗಿ ಕೆಲಸ ಮಾಡುತ್ತಲೇ ಇರುತ್ತದೆ . ಒಂದು ರೀತಿಯಲ್ಲಿ ಒಗ್ಗಟ್ಟಿಗೆ ಬಲವಿದೆ ಎಂದು ಇರುವೆಗಳ ಮೂಲಕ ತಿಳಿಯಬಹುದು.

ವಾಸ್ತವವಾಗಿ, ಇರುವೆಗಳು ಎಲ್ಲಿ ಬೇಕಾದರೂ ವಾಸಿಸುತ್ತವೆ. ಹೆಚ್ಚಾಗಿ ಅವುಗಳು ಮನೆಯಲ್ಲಿಯೇ ಇರುತ್ತದೆ. ಏಕೆಂದರೆ ಅಲ್ಲಿ ವಸತಿ, ಆಹಾರ ಮತ್ತು ನೀರು ಎಲ್ಲವೂ ಇರುತ್ತದೆ. ಆದರೆ ತೇವ ಇರುವ ಮಣ್ಣುಗಳ ಅಡಿಯಲ್ಲಿ ವಾಸಿಸುತ್ತವೆ.

ಅದಲ್ಲದೆ ಇರುವೆಗಳು ವಿಶ್ರಾಂತಿ ಪಡೆಯದಿದ್ದರೆ ಸಾಯುತ್ತವೆ. ಇರುವೆಗಳು ವಿಶ್ರಾಂತಿ ಸಮಯದಲ್ಲಿ ಶಕ್ತಿಯನ್ನು ಉಳಿಸುತ್ತವೆ. ನಂತರ ಅದು ಗೂಡು ನಿರ್ಮಿಸುವಾಗ, ಅಗತ್ಯವಿದ್ದಾಗ ತನ್ನ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ವಿಶೇಷ ಎಂದರೆ ಇರುವೆಗಳು ತಮ್ಮ ತೂಕಕ್ಕಿಂತ 20 ಪಟ್ಟು ಹೆಚ್ಚು ಎತ್ತಬಲ್ಲವು. ಒಟ್ಟಿನಲ್ಲಿ ಇರುವೆ ಒಂದು ಕ್ರಿಯಾಶೀಲವಾಗಿರುವ ಜೀವಿ ಎನ್ನಲಾಗುತ್ತದೆ.

Leave A Reply

Your email address will not be published.