Madhyapradesh : ಈ ಮರದ ಭದ್ರತೆಗೆ ಇದುವರೆಗೂ 64 ಲಕ್ಷ ರೂ ಖರ್ಚಾಗಿದೆಯಂತೆ! ದಿನಂಪ್ರತಿ ಇಬ್ಬರು ಪೋಲೀಸರು ಕಾವಲು ಕಾಯುತ್ತಾರಂತೆ! ಏನಿದರ ವಿಶೇಷತೆ?

Security of the tree : ಕೆಲವೊಂದು ಚಿಕ್ಕ ಚಿಕ್ಕ ವಿಚಾರಗಳು ನಮಗೆ ತುಂಬಾ ಪ್ರಮುಖವಾದುವು ಆಗಿರುತ್ತವೆ. ಕೆಲವೊಮ್ಮೆ ಅವು ನಮ್ಮ ಬಳಿಯೇ ಇದ್ದರು ಮುಖ್ಯವಾದವು ಎಂದು ತಿಳಿಯದಾಗುತ್ತೇವೆ. ನಂತರ ಅವುಗಳ ರಕ್ಷಣೆಗೆ ಹರಸಾಹಸ ಪಡುತ್ತೇವೆ. ಅಂತೆಯೆ ಮಧ್ಯಪ್ರದೇಶ(Madhyapradesh) ದಲ್ಲಿ ಒಂದು ಮರವಿದ್ದು, ಈ ಮರದ ಭದ್ರತೆಗಾಗಿ ಕಳೆದ 20 ವರ್ಷಗಳಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ! ಹಾಗಿದ್ರೆ ಈ ಮರದ ವಿಶೇಷತೆ ಏನು? ಯಾಕಿಷ್ಟು ಭಧ್ರತೆ?

 

ಹೌದು, ಮಧ್ಯಪ್ರದೇಶದ ರಾಯ್​ಸೇನ್(Raysen) ಜಿಲ್ಲೆಯಲ್ಲಿರುವ ಸಾಂಚಿ ಸ್ತೂಪದ ಬಳಿ ವಿಶೇಷವಾದ ಮರವೊಂದಿದೆ. ಈ ಮರ ಕುತೂಹಲಕಾರಿ ಇತಿಹಾಸವನ್ನು (Security of the tree) ಹೊಂದಿದ್ದು, ಬೋಧಿ ವೃಕ್ಷ ಎಂದು ಕರೆಯಲಾಗುತ್ತದೆ. ಈದರ ರಕ್ಷಣೆಗಾಗಿ, ಭದ್ರತೆಗಾಗಿ ದಿನದ 24 ಗಂಟೆಯೂ ನಾಲ್ವರು ಗೃಹರಕ್ಷಕರನ್ನು ನೇಮಿಸಲಾಗಿದೆ. ಇಷ್ಟೊಂದು ಪ್ರೊಟೆಕ್ಟ್ ಹೊಂದಿರುವ ಈ ಮರದ ವಿಶೇಷತೆ ಏನು ಗೊತ್ತಾ?

ಗೌತಮ ಬುದ್ಧನಿಗೆ(Gowtama Buddha) ಜ್ಞಾನೋದಯವಾದದ್ದು ಎಲ್ಲಿ ಎಂದು ಕೇಳಿದರೆ ಎಲ್ಲರೂ ಮೋದಿ ವೃಕ್ಷದ ಕೆಳಗೆ ಎಂದು ಹೇಳುತ್ತಾರೆ. ಅಂದಹಾಗೆ ಸುಮಾರು 2500 ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಮರದ ಕೆಳಗೆ ಧ್ಯಾನ ಮಾಡುವಾಗ ಬುದ್ಧನಿಗೆ ಜ್ಞಾನೋದಯವಾಯಿತು. ಈ ಮರವು ಮುಂದೆ ಬೋಧಿ ವೃಕ್ಷ ಅಥವಾ ಜ್ಞಾನೋದಯದ ವೃಕ್ಷ ಎಂದು ಹೆಸರುವಾಸಿಯಾಯಿತು. ಅಂದು ಅಶೋಕ ಚರ್ಕವರ್ತಿ ತನ್ನ ರಾಜಧಾನಿಯಾದ ಅನುರಾಧಪುರದಲ್ಲಿ ನೆಟ್ಟಿದ್ದ ಈ ಬೋಧಿ ವೃಕ್ಷದ ಕೊಂಬೆಯನ್ನು ದೇವನಂಪಿಯ ರಾಜ ತಿಸ್ಸನಿಗೆ ಉಡುಗೊರೆಯಾಗಿ ಶ್ರೀಲಂಕಾಕ್ಕೆ ಕಳುಹಿಸಿದ್ದ ಎಂದು ಇತಿಹಾಸದಲ್ಲಿ ದಾಖಲಾಗಿದೆ.

2012 ರಲ್ಲಿ ಶ್ರೀಲಂಕಾ(Shreelanka) ದ ಅಧ್ಯಕ್ಷರಾಗಿದ್ದ ಮಹಿಂದಾ ರಾಜಪಕ್ಸೆ(Mahinda Rajapakse) ಅವರು ಆ ಮರದಿಂದ ಕೊಂಬೆಯನ್ನು ತಂದು ಅಂದಿನ ಸಂಸದ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಸಲಾಮತ್‌ಪುರ ಬಳಿಯ ಬೆಟ್ಟದ ಮೇಲೆ ನೆಟ್ಟಿದ್ದರು. ಹೀಗಾಗಿ ಬುದ್ಧನಿಗೆ ಜ್ಞಾನೋದಯವಾದ ಮರದ ಒಂದು ಭಾಗ ಇದೆಂದು ಪ್ರತೀತಿ ಇದೆ.

ಇದೀಗ ಈ ಮರವು 6 ಮೀಟರ್ ಎತ್ತರಕ್ಕೆ ಬೆಳೆದಿದೆ. ಆದರೆ ಸರಿಯಾದ ಪಾಲನೆ ಇಲ್ಲದರಿಂದ ಮರವು ನೀರಿಲ್ಲದೆ ಒಣಗುತ್ತಿದೆ. ಸದ್ಯ ಪ್ರತಿ ವಾರ ಮಧ್ಯಪ್ರದೇಶದ ಕೃಷಿ ಇಲಾಖೆಯ ಸಸ್ಯಶಾಸ್ತ್ರಜ್ಞರು ಭೇಟಿ ನೀಡಿ ಪರೀಕ್ಷಿಸುತ್ತಾರೆ. ಇದೀಗ ಈ ಮರದ ಭದ್ರತೆ ಮತ್ತು ನಿರ್ವಹಣೆಗಾಗಿ ಈವರೆಗೆ 64 ಲಕ್ಷ ರೂ. ಖರ್ಚಾಗಿದೆ ಎಂದು ವರದಿಯಾಗಿದೆ. ಸದ್ಯ ಮರವು ಲೀಫ್ ಕ್ಯಾಟರ್ಪಿಲ್ಲರ್ ಎಂಬ ಕೀಟ ಬಾಧೆಗೊಳಗಾಗಿದ್ದು, ಮರದ ಎಲೆಗಳು ಒಣಗುತ್ತಿದೆ. ಕೀಟಗಳ ದಾಳಿಗೆ ತೋಟಗಾರಿಕಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭದ್ರತಾ ಸಿಬ್ಬಂದಿ ಆರೋಪಿಸಿದ್ದಾರೆ.

Leave A Reply

Your email address will not be published.