Upcoming Cars : ಏಪ್ರಿಲ್‌ನಲ್ಲಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ ಈ ಟಾಪ್ ಕಾರುಗಳು!!

Upcoming Cars: ಜನಪ್ರಿಯ ಕಾರು (car) ತಯಾರಿಕಾ ಕಂಪನಿಗಳು ಮಾರುಕಟ್ಟೆಗೆ ಹಲವು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯುತ್ತಮ ವೈಶಿಷ್ಟ್ಯತೆ, ಕಣ್ಮನ ಸೆಳೆಯುವ ಬಣ್ಣಗಳ ಆಯ್ಕೆ ಹೊಂದಿರುವ ಕಾರುಗಳನ್ನು ಪರಿಚಯಿಸುತ್ತಿದೆ. ಅಂತೆಯೇ ಜನರು ಆಕರ್ಷಿತರಾಗಿ ಕಾರು ಕೊಳ್ಳಲು ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿದರೂ ಪೆಟ್ರೋಲ್ (petrol) ಕಾರುಗಳಿಗೆ ಬೇಡಿಕೆ ಏನೂ ತಗ್ಗಿಲ್ಲ. ಇದೀಗ ದೇಶೀಯ ಮಾರುಕಟ್ಟೆಗೆ ಟಾಪ್ ಕಾರುಗಳು ಲಗ್ಗೆ ಇಡಲಿವೆ (Upcoming Cars).

MG comet: ಬಹುನಿರೀಕ್ಷಿತ ಎಂಜಿ Comet ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋರೂಂ ರೂ.15 ಲಕ್ಷದೊಳಗೆ ಖರೀದಿಗೆ ಸಿಗಬಹುದು. ಮುಂಬರುವ MG Comet ಸ್ಮಾರ್ಟ್ ಇವಿ ಚೀನಾ-ಸ್ಪೆಕ್ ವುಲಿಂಗ್ ಏರ್ ಎಲೆಕ್ಟ್ರಿಕ್ ಕಾರನ್ನು ಆಧರಿಸಿದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು (MG comet electric car) 20kWh – 25kWh ನಡುವಿನ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರಲಿದ್ದು, ಇದು ಸುಮಾರು 40 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಾರು 200 ಕಿ.ಮೀ ಮೈಲೇಜ್ ನೀಡಲಿದೆ. MG Comet ಎಲೆಕ್ಟ್ರಿಕ್ ಕಾರಿನಲ್ಲಿ FWD (ಫ್ರಂಟ್-ವೀಲ್-ಡ್ರೈವ್) ಸಿಸ್ಟಂ ಇದ್ದು, ಇದು ಸುಮಾರು 2.9 ಮೀಟರ್ ಉದ್ದವನ್ನು ಹೊಂದಿರುತ್ತದೆ. ಇದನ್ನು ಬ್ರ್ಯಾಂಡ್‌ನ ಹೊಸ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಪುಟ್ಟ ಎಲೆಕ್ಟ್ರಿಕ್ ಕಾರು ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇಯಂತಹ ವೈಶಿಷ್ಟ್ಯಗಳನ್ನು ಪ ಡೆದಿರಲಿದೆ.

ಮರ್ಸಿಡಿಸ್, ಪವರ್ ಫುಲ್ ಸೆಡಾನ್ ‘AMG GT 63 S E ಪರ್ಫಾರ್ಮೆನ್ಸ್’ ಅನ್ನು ಏಪ್ರಿಲ್ 11 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು 4.0-ಲೀಟರ್, ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್‌ 834.5 bhp ಗರಿಷ್ಠ ಪವರ್, 1,400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೇವಲ 2.9 ಸೆಕೆಂಡುಗಳಲ್ಲಿ 100km/h ವೇಗವನ್ನು ಪಡೆಯಲಿದೆ.

ಉರಸ್ ಎಸ್’ ಎಸ್‌ಯುವಿ: ಇಟಾಲಿಯ ಸೂಪರ್ ಕಾರು ತಯಾರಕ ಕಂಪನಿ ಲಂಬೋರ್ಗಿನಿ ದೇಶೀಯ ಮಾರುಕಟ್ಟೆನಲ್ಲಿ ಏಪ್ರಿಲ್ ಅಂತ್ಯದೊಳಗೆ ಎಂಟ್ರಿ ಲೆವೆಲ್ ‘ಉರಸ್ ಎಸ್’ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಇದು 4.0-ಲೀಟರ್, ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್‌ ಹೊಂದಿದ್ದು, 659 bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 305 km/h ಟಾಪ್ ಸ್ವೀಡ್ ಹೊಂದಿದ್ದು, ಕೇವಲ 3.5 ಸೆಕೆಂಡುಗಳಲ್ಲಿ 0-100 km/h ವೇಗವನ್ನು ಪಡೆಯಲಿದೆ.

ಫ್ರಾಂಕ್ಸ್ ಎಸ್‍ಯುವಿ: ಮಾರುತಿ ಸುಜುಕಿ (maruti suzuki) ಫ್ರಾಂಕ್ಸ್ ಎಸ್‍ಯುವಿ, ರೂ.7.50 ಲಕ್ಷ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಲಿದೆ. ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಅಧಿಕೃತ ಮಾಹಿತಿ ಪ್ರಕಾರ, ಫ್ರಾಂಕ್ಸ್ 15,500 ಬುಕಿಂಗ್‌ ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ನಿರೀಕ್ಷೆಯಲ್ಲಿದೆ. ಇದು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 98.6 bhp ಗರಿಷ್ಠ ಪವರ್ ಹಾಗೂ 147.6 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್, ಸಿಕ್ಸ್ ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 88.5 bhp ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ವೀಡ್ MT/AMT ಗೇರ್ ಬಾಕ್ಸ್ ಪಡೆದಿದೆ.

ಇದನ್ನೂ ಓದಿ: Mahindra Thar : ಹೊಸದಾಗಿ ಗ್ರಾಹಕರನ್ನು ಮನಸೂರೆಗೊಳ್ಳಲು ಬರುತ್ತಿದೆ ಮಹೀಂದ್ರಾ ಥಾರ್!!!

4 Comments
  1. MichaelLiemo says

    ventolin medication: Ventolin inhaler best price – generic ventolin price
    ventolin 2.5 mg

  2. Josephquees says

    where to buy neurontin: neurontin 900 mg – neurontin prescription medication

  3. Timothydub says

    online canadian pharmacy: Canadian Pharmacy – best canadian online pharmacy

  4. Timothydub says

    reputable canadian pharmacy: canadian drug pharmacy – canadian pharmacy review

Leave A Reply

Your email address will not be published.