Health Tips: ಒಂದೇ ಲೋಟದಲ್ಲಿ ಹಲವಾರು ಬಾರಿ ನೀರು ಕುಡಿಯೋದು ಒಳ್ಳೆಯದಲ್ಲ ; ಯಾಕೆ?

Drink water : ಪ್ರತಿಯೊಬ್ಬರೂ ದಿನಕ್ಕೆ ಹಲವಾರು ಬಾರಿ ನೀರನ್ನು ಕುಡಿಯುತ್ತಾರೆ ಮತ್ತು ದೇಹದ ದೊಡ್ಡ ಭಾಗವು ಸಹ ನೀರನ್ನು ಹೊಂದಿದೆ. ನೀರನ್ನು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು, ಪ್ರತಿದಿನ ಸಾಕಷ್ಟು ನೀರು (drink water) ಕುಡಿಯುವುದು ಅತ್ಯಗತ್ಯ. ನೀರು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ (Health Tips). ಆದರೆ, ಒಂದೇ ಲೋಟದಲ್ಲಿ ಮತ್ತೆ ಮತ್ತೆ ನೀರು ಕುಡಿಯೋದು ಒಳ್ಳೆಯದಲ್ಲವಂತೆ ಯಾಕೆ ಗೊತ್ತಾ?

ಒಂದೇ ಲೋಟದಲ್ಲಿ ಮತ್ತೆ ಮತ್ತೆ ನೀರು (Water) ಕುಡಿಯುವ ಕೆಟ್ಟ ಅಭ್ಯಾಸದಿಂದಲೇ ಅನೇಕ ರೀತಿಯ ರೋಗಗಳು (Disease) ಅಂಟಿಕೊಳ್ಳುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳು (Bacteria) ದೇಹವನ್ನು ಪ್ರವೇಶಿಸುತ್ತವೆ. ಸಂಪೂರ್ಣವಾಗಿ ಶುಚಿಯಾಗದ ಲೋಟದಲ್ಲಿ ನೊರೊವೈರಸ್ ಇರುತ್ತದೆ. ಕಲುಷಿತ ಆಹಾರ (food) ಮತ್ತು ಪಾನೀಯದ (drinks) ಮೂಲಕವೇ ಇದು ಹರಡುತ್ತದೆ. ಈ ವೈರಸ್ ಒಂದು ವಾರಕ್ಕಿಂತ ಹೆಚ್ಚು ಕಾಲ ಬದುಕಿರುತ್ತದೆ. ನೊರೊ ವೈರಸ್ ದೇಹ ಪ್ರವೇಶಿಸಿದ 12 ಗಂಟೆಯ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು ಅಥವಾ 1-2 ದಿನಗಳ ನಂತರವೂ ರೋಗ ಲಕ್ಷಣ ಕಾಣಿಸಬಹುದು. ಕೆಲವೊಮ್ಮೆ ನೊರೊವೈರಸ್ (noro virus) ಸೋಂಕಿತ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣ ಕಾಣಿಸಿದಿದ್ದರೂ ಅವರಿಂದ ಇನ್ನೊಬ್ಬರಿಗೆ ವೈರಸ್ ಹರಡಬಹುದು. ಶಿಶುಗಳಲ್ಲಿ ಮತ್ತು ವಯಸ್ಸಾದವರಿಗೆ ಈ ವೈರಸ್ ಪ್ರಬಲ ಮತ್ತು ಅಪಾಯಕಾರಿಯಾಗಿದೆ.

ಒಂದು ವಾರದ ತನಕ ನೀರಿನ ಲೋಟವನ್ನು ತೊಳೆಯದೆ ಹಾಗೇ ಇಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾ ಉದ್ಭವವಾಗುತ್ತದೆ. ತೊಳಯದೇ ಇರುವ ಲೋಟದಲ್ಲಿ ನೀವು ಶುದ್ಧವಾದ ನೀರನ್ನು ಹಾಕಿದರು ಕೂಡ ಅದರಲ್ಲಿನ ಬ್ಯಾಕ್ಟೀರಿಯಾ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ನೀವು ನೀರಿನ ಲೋಟವನ್ನು ತೊಳೆಯದೇ ಇಟ್ಟಾಗ ಅದರಲ್ಲಿ ಬೆಳೆಯುವ ವೈರಸ್ ನಿಂದ ವಾಂತಿ, ಭೇದಿ, ಹೊಟ್ಟೆ ಸೆಳೆತ, ತಲೆನೋವು (headache), ಸ್ನಾಯುಗಳ ನೋವು ಮುಂತಾದವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

ನಿಮ್ಮ ನೀರಿನ ಬಾಟಲಿ (water bottle) ಮತ್ತು ಲೋಟವನ್ನು (glass) ತೊಳೆಯಿರಿ. ಜೊತೆಗೆ ನೀರಿನ ಕಂಟೇನರ್ ನಲ್ಲಿ ಕೂಡ ಪ್ರತಿನಿತ್ಯ ತಾಜಾ ನೀರನ್ನೇ ತುಂಬಿಟ್ಟುಕೊಳ್ಳಬೇಕು. ಕಂಟೇನರ್ ನಲ್ಲಿ ಹೆಚ್ಚು ದಿನ ನೀರು ಸಂಗ್ರಹವಾದರೆ ಅದರಲ್ಲಿ ಕೂಡ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತವೆ. ಕೇವಲ ಒಂದೇ ಒಂದು ಲೋಟ ನೀರು ನಮ್ಮ ಆರೋಗ್ಯವನ್ನು ಹೇಗೆ ಬೇಕಾದರೂ ಹದಗೆಡಿಸಬಹುದು. ಹಾಗಾಗಿ ನೀರಿನ ಲೋಟವನ್ನು ಶುಭ್ರವಾಗಿ ತೊಳೆಯುವುದು ಹಾಗೂ ನೀರಿನ ಕಂಟೇನರ್ ನಲ್ಲಿರುವ ನೀರನ್ನು ಆಗಾಗ ಬದಲಿಸುವುದು ಮುಖ್ಯವಾಗಿದೆ. ಇದರಿಂದ ಕೀಟಾನುಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬಹುದು.

ನೀರಿನ ಲೋಟವನ್ನು ಬರೀ ನೀರಿನಿಂದ ತೊಳೆಯಬೇಡಿ. ಬದಲಾಗಿ ಸೋಪು ಬಳಸಿ ತೊಳೆಯಿರಿ. ಆಗ ಕೀಟಾಣುಗಳು ಪೂರ್ತಿಯಾಗಿ ಹೋಗುತ್ತವೆ. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಲೋಟದಲ್ಲಿ ಬಯೋಫಿಲ್ಮ್ ಅನ್ನು ನಿರ್ಮಿಸುತ್ತವೆ. ಹಾಗೆಯೇ ಕೆಲವರು ನೀರಿನ ಲೋಟವನ್ನು ತೆರೆದಿಡುತ್ತಾರೆ. ಹೀಗೆ ತೆರೆದಿಟ್ಟ ನೀರಿನಲ್ಲಿ ಸುತ್ತಲಿನ ಧೂಳು ಮತ್ತು ಇತರ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ.

ಇದನ್ನೂ ಓದಿ: Chanakya Niti : ಮಹಿಳೆಯರು ಈ ವಿಚಾರದಲ್ಲಿ ಗಂಡಸರಿಗಿಂತ ಮುಂದು!

Leave A Reply

Your email address will not be published.