IPhone Charger: ಐಫೋನ್‌ನಲ್ಲಿ ದೊರಕಲಿದೆ ​ಟೈಪ್​-ಸಿ ಚಾರ್ಜರ್! ಫೋನ್ ಮಾಹಿತಿ ಇಲ್ಲಿದೆ!

IPhone Charger: ಇದೀಗ ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಕಂಪೆನಿ ಐಫೋನ್ 15 ಸೀರಿಸ್​​ನ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡಲಿದ್ದು, ಬಿಡುಗಡೆಗೂ ಮೊದಲೇ ತನ್ನ ಗ್ರಾಹಕರಿಗೆ ಅಚ್ಚರಿಯ ಸುದ್ದಿಯೊಂದನ್ನು ಹೇಳಿದೆ.

ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ಆ್ಯಪಲ್​ ಕಂಪೆನಿ ಪ್ರತೀ ವರ್ಷ ಹೊಸ ಹೊಸ ಸ್ಮಾರ್ಟ್​​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಅದೇ ರೀತಿ ಈ ಕಂಪೆನಿಯ ಸ್ಮಾರ್ಟ್​ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇದೆ

ಇನ್ನು ಆ್ಯಪಲ್ ಕಂಪೆನಿ ಕಳೆದ ಬಾರಿ ಐಫೋನ್​ 14 ಸೀರಿಸ್​​ ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಅದೇ ರೀತಿ 2021 ರಲ್ಲಿ ಬಿಡುಗಡೆಯಾದ ಐಫೋನ್ 13 ಸೀರಿಸ್​​ ಸ್ಮಾರ್ಟ್​​​ಫೋನ್​ಗಳಿಗೆ ಈಗಲೂ ಭಾರೀ ಬೇಡಿಕೆಯಿದೆ

ಇದೀಗ ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಕಂಪೆನಿ ಐಫೋನ್ 15 ಸೀರಿಸ್​​ನ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡಲಿದ್ದು, ಬಿಡುಗಡೆಗೂ ಮೊದಲೇ ತನ್ನ ಗ್ರಾಹಕರಿಗೆ ಅಚ್ಚರಿಯ ಸುದ್ದಿಯೊಂದನ್ನು ಹೇಳಿದೆ.

ಹೌದು, ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವಂತಹ ಐಫೋನ್​ 15 ಸ್ಮಾರ್ಟ್​​​ಫೋನ್​ನಲ್ಲಿ ಯುಎಸ್​​ಬಿ ಟೈಪ್​ ಸಿ ಚಾರ್ಜರ್​ಗಳು ಬರಲಿದೆ ಎಂದು ವರದಿಯಾಗಿದೆ. ಐಫೋನ್ 15 ಯುಎಸ್​ಬಿ ಟೈಪ್-ಸಿಯ ಫಾಸ್ಟ್ ಚಾರ್ಜರ್​ನೊಂದಿಗೆ ಬರಲಿದೆ.

ಇನ್ನು ಆ್ಯಪಲ್ ಕಂಪೆನಿ ಪರಿಚಯಿಸಿರುವ ಈ ಹೊಸ ಟೈಪ್​ ಸಿ ಚಾರ್ಜರ್​​ ಕೇವಲ ಆ್ಯಪಲ್​ ಕಂಪೆನಿಯ ಫೋನ್​ಗಳಿಗೆ ಸೀಮಿತವಾಗಿರುತ್ತದೆ.ಆ್ಯಪಲ್ ಪ್ರಮಾಣೀಕೃತ ನೀಡಿದ ಟೈಪ್-ಸಿ ಚಾರ್ಜರ್ ಮಾತ್ರ ಐಫೋನ್ 15 ನಲ್ಲಿ ಫಾಸ್ಟ್ ಚಾರ್ಜರ್ (IPhone Charger)ಆಗಿ ಕಾರ್ಯ ನಿರ್ವಹಿಸುತ್ತಂತೆ. ಇನ್ನು ಆಂಡ್ರಾಯ್ಡ್ ಅಥವಾ ಇತರೆ ಟೈಪ್-ಸಿ ಚಾರ್ಜರ್ ಮೂಲಕ ಐಫೋನ್ ಚಾರ್ಜ್ ಮಾಡಿದರೆ ನಿಧಾನವಾಗಿ ಬ್ಯಾಟರಿ ಫುಲ್ ಆಗುತ್ತದೆ ಎಂದು ಕಂಪೆನಿ ಹೇಳಿದೆ

ಸದ್ಯ ಆ್ಯಪಲ್ ಕಂಪೆನಿ ನೀಡಿರುವ ಚಾರ್ಜರ್​ಗಳು ಅವುಗಳ ಮಾಡೆಲ್​ಗಳಿಗೆ ಅನುಗುಣವಾಗಿ 20W ಅಥವಾ 27 ವೋಲ್ಟ್​ನದ್ದಾಗಿದೆ. ಯುಎಸ್​ಬಿ ಟೈಪ್-ಸಿ ಚಾರ್ಜರ್ ಮಾತ್ರ 20W ವೇಗದ ಚಾರ್ಜರ್​​ ಫೀಚರ್​ ಅನ್ನು ಹೊಂದಿರಲಿದೆ ಎನ್ನಲಾಗಿದೆ.
ಎಲ್ಲಾ ಸ್ಮಾರ್ಟ್​​ಫೋನ್​ಗಳು ಸಹ ಒಂದೇ ಚಾರ್ಜರ್ ವಿಧವನ್ನು ಹೊಂದಿರುವ ನಿಟ್ಟಿನಲ್ಲಿ ಮತ್ತು ಇ-ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೂರೋಪ್​ ಮಾರುಕಟ್ಟೆಯಲ್ಲಿರುವಂತಹ ಎಲ್ಲಾ ಗ್ಯಾಜೆಟ್​​ಗಳಿಗೆ ಟೈಪ್​ ಸಿ ಚಾರ್ಜರ್​ಗಳನ್ನು ಹೊಂದಿರಬೇಕು ಎಂದು ನಿಯಮ ಜಾರಿ ಮಾಡಿತ್ತು. ಆದರೆ ಪ್ರಾರಂಭದಲ್ಲಿ ಈ ನಿಯಮವನ್ನು ಆ್ಯಪಲ್​ ವಿರೋಧಿಸಿದ್ದರೂ, ಈಗ ಅದಕ್ಕೆ ಒಪ್ಪಿಗೆ ನೀಡಿದೆ.

ಯುರೋಪಿಯನ್ ಕಮಿಷನ್ ಪ್ರಸ್ತಾಪಿಸಿದ್ದ ಹೊಸ ನಿಯಮದ ಪ್ರಕಾರ, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಪೋನ್‌ಗಳು 2024 ರ ವೇಳೆಗೆ ಯುಎಸ್​​ಬಿ ಟೈಪ್​ ಸಿ ಮಾದರಿಯ ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು. ಅದರಂತೆ ಇದೀಗ ಆ್ಯಪಲ್ ಕಂಪೆನಿ ತನ್ನ ಮುಂಬರುವ ಐಫೋನ್ 15ನಲ್ಲಿ ಟೈಪ್​-ಸಿ ಚಾರ್ಜರ್​​ ಬರಲಿದೆ ಎಮದು ಹೇಳಿದೆ.

ಇದನ್ನೂ ಓದಿ: Maruti Suzuki Nexa : ಭರ್ಜರಿ 20 ಲಕ್ಷ ಕಾರುಗಳ ಮಾರಾಟ ಕಂಡ Nexa!!!

Leave A Reply

Your email address will not be published.