Cashew Nut Rate : ‘ಗೋಡಂಬಿʼಯ ಬೆಲೆ ಇಲ್ಲಿ ಕೆಜಿಗೆ ರೂ.30! ಅಂದ ಹಾಗೆ ಇದು ಭಾರತದಲ್ಲಿಯೇ ಸಿಗುತ್ತೆ ಈ ರೇಟಿಗೆ!

Cashew Nut Rate :ಗೋಡಂಬಿಯನ್ನು (cashew) ಭಾರತದ ಒಂದು ಭಾಗದಲ್ಲಿ ತರಕಾರಿ (vegetable) ಬೆಲೆಗೆ ನೀಡಲಾಗುತ್ತಿದೆ. ಈ ಮಾಹಿತಿಯನ್ನು ಜನರಿಗೆ ನಂಬಲು ಕಷ್ಟವಾಗಬಹುದು ಆದರೆ ಇದು ಸತ್ಯ. ಹಾಗೆಯೇ, ಭಾರತದ ಆ ಒಂದು ಭಾಗಕ್ಕೆ ನೀವೇನಾದರೂ ಪ್ರಯಾಣಿಸಿದರೆ 2-3 ಕಿಲೋಗ್ರಾಂ ಗೋಡಂಬಿಯನ್ನು (cashew nut rate) ಖರೀದಿಸಿ (purchase) ಈ ಗೋಡಂಬಿ ನಿಮಗೆ ವರ್ಷಕ್ಕೆ ಸಾಕಾಗುತ್ತದೆ. ಇದಕ್ಕೆ ಕೇವಲ ನೂರು ರೂಪಾಯಿ ನೀಡಬೇಕಾಗುತ್ತದೆ. ಹಾಗಾದರೆ ಆ ನೂರು ರೂಪಾಯಿ ವೆಚ್ಚದ ಗೋಡಂಬಿಯ ಮಾಹಿತಿಯನ್ನು ತಿಳಿಯೋಣ ಬನ್ನಿ.

 

ಜಾರ್ಖಂಡ್‌ನ ಜಂತರಾ (Jharkhand jantara) ಜಿಲ್ಲೆಯ ನಾಲಾ (Nala)ಎಂಬ ಹಳ್ಳಿಯಲ್ಲಿ ಮಾತ್ರ ಗೋಡಂಬಿಯನ್ನ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವೇ ಹೌದು.ಹಾಗೆಯೇ ಇದನ್ನ ‘ಜಾರ್ಖಂಡ್‌ನ ಗೋಡಂಬಿ (Jharkhand cashew) ನಗರ’ ಎಂದು ಕರೆಯಲಾಗುತ್ತದೆ. ಈ ಗ್ರಾಮಕ್ಕೆ ಹೋದರೆ ಕಿಲೋ ಗೋಡಂಬಿಗೆ ಕೇವಲ 20ರಿಂದ 30 ರೂಪಾಯಿಗೆ ಸಿಗುತ್ತದೆ. ಸಾಮಾನ್ಯವಾಗಿ ನಾವು ಖರೀದಿಸುವ ತರಕಾರಿಗಳು ಕೆಜಿಗೆ 80 ರೂಪಾಯಿ ಇದ್ದರೂ, ನಾಲಾ ಗ್ರಾಮದಲ್ಲಿ ಗೋಡಂಬಿ ಕಡಿಮೆ ಬೆಲೆಗೆ ನಾವು ಖರೀದಿಸಬಹುದು.

ಸುತ್ತಮುತ್ತಲಿನ ಪ್ರದೇಶಗಳು ಮತ್ತು ನಗರಗಳಿಂದ (urban area) ಅನೇಕ ಜನರು ಬಂದು ನಾಲಾ ಗ್ರಾಮದಲ್ಲಿ ಗೋಡಂಬಿಯನ್ನು ತೆಗೆದುಕೊಳ್ಳುತ್ತಾರೆ. ದಲ್ಲಾಳಿಗಳು ಕಡಿಮೆ ಬೆಲೆಗೆ ತೆಗೆದುಕೊಂಡು ಬೇರೆ ಪ್ರದೇಶದಲ್ಲಿ ನೂರು ಪಟ್ಟು ಹೆಚ್ಚಿನ ಬೆಲೆಗೆ ಜನರಿಗೆ ಗೋಡಂಬಿಯನ್ನು ಮಾರಾಟ ಮಾಡುತ್ತಾರೆ.

ಹಾಗಾದರೆ ಗೋಡಂಬಿಯ ಬೆಲೆ ನಾಲಾ ಗ್ರಾಮದಲ್ಲಿ ಏಕೆ ಅಗ್ಗವಾಗಿದೆ?
ಯಾಕೆಂದರೆ ಈ ಗ್ರಾಮದಲ್ಲಿ 50 ಎಕರೆ ಪ್ರದೇಶದಲ್ಲಿ ಗೋಡಂಬಿ ತೋಟಗಳನ್ನು ಹಾಕಿ ಅವರು ಅದನ್ನು ಅಭಿವೃದ್ಧಿ (development) ಮಾಡಿ ತಮ್ಮ ತಮ್ಮ ಜೀವನವನ್ನು (life) ಸಾಗಿಸುತ್ತಿದ್ದಾರೆ. 2010ರಲ್ಲಿ ಅರಣ್ಯ ಇಲಾಖೆಯು ನಾಲಾ ಗ್ರಾಮದ ಹವಾಗುಣ ಹಾಗೂ ಮಣ್ಣು ಗೋಡಂಬಿ ಕೃಷಿಗೆ ತುಂಬಾನೇ ಯೋಗ್ಯವಾಗಿದೆ ಎಂದು ಪತ್ತೆ ಹಚ್ಚಿತ್ತು. ಈ ವಿಷಯದ ಬಗ್ಗೆ ಇನ್ನಷ್ಟು ವಿಷಯವನ್ನು ಗ್ರಾಮಸ್ಥರೆಲ್ಲರಿಗೂ ತಿಳಿಸಿ ಗೋಡಂಬಿ ತೋಟ ಹೆಚ್ಚು ರೀತಿಯಲ್ಲಿ ಬೆಳೆಸುವಂತೆ ಪ್ರೋತ್ಸಾಹಿಸಿದರು. ಅದೇ ರೀತಿಯ ಬೆಂಬಲದಲ್ಲಿ ನಾಲಾ ಗ್ರಾಮದವರು ಹೆಚ್ಚಿನ ರೀತಿಯ ಗೋಡಂಬಿ ತೋಟವನ್ನು ಬೆಳೆಸಲು ಮುಂದುವರಿದರು.

ಹಾಗೆಯೇ ಜಂತಾರ ಜಿಲ್ಲೆಯ (jantara district) ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಕೃಪಾನಂದ ಝಾ (kripananda zaa) ಇದಕ್ಕಾಗಿ ಎಲ್ಲಾ ಸಮಯದಲ್ಲೂ ತುಂಬಾನೇ ಶ್ರಮಿಸಿದ್ದರು. ಈ ನಾಲಾ ಗ್ರಾಮದ ವಿಶಿಷ್ಟ ಹವಾಮಾನ ಪರಿಸ್ಥಿತಿಗಳನ್ನ ಅವರು ಅರ್ಥಮಾಡಿಕೊಂಡರು. ಮಣ್ಣು ಮತ್ತು ನೀರಿನ (soil and water) ಬಗ್ಗೆ ಕೃಷಿ ವಿಜ್ಞಾನಿಗಳು (agriculture scientist) ಪರಿಶೀಲನೆ ನಡಿಸಿ ನಂತರ ನಾಲಾ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಗೋಡಂಬಿಯನ್ನು ಬೆಳೆಯುವಂತೆ ಮುಂದಾದರು. ಆದರೆ ಅರಣ್ಯ ಇಲಾಖೆಯವರು (department) ಗೋಡಂಬಿ ಬೆಳೆಯುವ ಯೋಚನೆಯಿಂದ ರೈತರಿಗೆ (farmers) ಯಾವುದೇ ಪ್ರಯೋಜನವಾಗಿಲ್ಲ.

ಯಾಕೆಂದರೆ ಎಲ್ಲರೂ ಬಂದು ಕಡಿಮೆ ಬೆಲೆಗೆ ಗೋಡಂಬಿ (cashew) ಖರೀದಿಸುತ್ತಿದ್ದಾರೆ. ರಸ್ತೆ ಬದಿಯಲ್ಲೂ (roadside) ಮಾರಾಟ (market) ಮಾಡುತ್ತಿರುವುದರಿಂದ ಕೆ.ಜಿ.ಗೆ 30ರಿಂದ 50 ರೂ.ಗೆ ಮಾರಾಟ ಮಾಡಬೇಕಾಗಿದೆ. ಇಷ್ಟು ಗೋಡಂಬಿ ಬೆಳೆದರೂ ಅಲ್ಲಿ ಸಂಸ್ಕರಣಾ ಘಟಕ ಇಲ್ಲ. ಅಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾದರೆ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ (work) ಸಿಗಲಿದೆ. ಅವರ ಜೀವನ ಸಂತೋಷದಿಂದ ಸಾಗಲಿದೆ ಹಾಗೆ ಗೋಡಂಬಿ (cashew)ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಬಹುದು.

ಇದನ್ನೂ ಓದಿ: Health Tips: ಒಂದೇ ಲೋಟದಲ್ಲಿ ಹಲವಾರು ಬಾರಿ ನೀರು ಕುಡಿಯೋದು ಒಳ್ಳೆಯದಲ್ಲ ; ಯಾಕೆ?

Leave A Reply

Your email address will not be published.