Weekend With Ramesh : ಡಾ.ಬ್ರೋ ರನ್ನು ಕಾರ್ಯಕ್ರಮಕ್ಕೆ ಕರೆಯದಿರಲು ಕಾರಣ ಏನು? ಕಾರಣ ಹೇಳಿದ್ರು ನೋಡಿ ಜೀ ಎಂಟರ್‌ಟೈನ್‌ಮೆಂಟ್‌ ಹೆಡ್‌!

Weekend-With Ramesh : ಕಿರುತೆರೆಯ ಜನಪ್ರಿಯ ಶೋಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ ಶೋ ( Weekend-With Ramesh ) ಕೂಡ ಒಂದು. ಇದು ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Season 5) ಮಾರ್ಚ್ 25 ರಿಂದ (ಇಂದು) ಪ್ರಸಾರವಾಗಲಿದೆ. ಈ ಹಿಂದೆ ಯಾರೆಲ್ಲಾ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಹಾಗೆಯೇ ಫೇಮಸ್ ಯುಟ್ಯೂಬರ್ ಡಾ.ಬ್ರೋ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಈ ಬಗ್ಗೆ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಉತ್ತರ ನೀಡಿದ್ದಾರೆ. Weekend With Ramesh ಶೋಗೆ ಡಾ.ಬ್ರೋ ರನ್ನು ಕರೆಯುತ್ತಿಲ್ಲ. ಇದಕ್ಕೆ ಕಾರಣವಿದೆ!!. ಆ ಕಾರಣ ಏನು ಎಂದು ಎಂಟರ್‌ಟೈನ್‌ಮೆಂಟ್‌ ಹೆಡ್‌ ಹೇಳಿದ್ದಾರೆ.

 

ಈ ಬಾರಿಯ ಸೀಸನ್ ನಲ್ಲಿ ಮೊದಲ ಅತಿಥಿಯಾಗಿ ಸದ್ಯ ಕನ್ನಡದಲ್ಲಿ ಮನೆಮಾತಾಗಿರೋ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ರಿಷಬ್ ಮೊದಲ ಅತಿಥಿಯಾಗಿ ಬರುತ್ತಿಲ್ಲ. ಬದಲಾಗಿ, ಮೊದಲ ಎಪಿಸೋಡ್​ಗೆ ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ (actress ramya) ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಜೀ ಕನ್ನಡ ವಾಹಿನಿಯು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಮೊವೊಂದನ್ನು ಬಿಡುಗಡೆ ಮಾಡುವ ಮೂಲಕ ರಮ್ಯಾ ಮೊದಲ ಅತಿಥಿಯಾಗಿ ಬರಲಿದ್ದಾರೆ ಎಂದು ಉತ್ತರ ನೀಡಿದೆ.

ಪ್ರತಿ ಬಾರಿ ವೀಕ್ಷಕರು ತಮ್ಮ ಮೆಚ್ಚಿನ ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಕರೆ ತರುವಂತೆ ಬೇಡಿಕೆ ಇಡುತ್ತಿದ್ದರು. ಈ ಬಾರಿ ಕೂಡಾ ಅದೇ ರೀತಿ ಅಭಿಮಾನಿಗಳು ಕೆಲವೊಂದು ಹೆಸರುಗಳನ್ನು ಸೂಚಿಸಿದ್ದರು. ಪುನೀತ್‌ ರಾಜ್‌ಕುಮಾರ್‌ (Punith Rajkumar) ಪತ್ನಿ ಅಶ್ವಿನಿ (Ashwini) ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಖ್ಯಾತ ಯೂಟ್ಯೂಬರ್‌ ಡಾ ಬ್ರೋ (Dr.bro) ಅವರನ್ನು ಕೂಡಾ ವೀಕೆಂಡ್ ವಿತ್ ರಮೇಶ್ ನಲ್ಲಿ ಅತಿಥಿಯಾಗಿ ನೋಡಲು ಬಯಸಿದ್ದಾರೆ. ಆದರೆ ಅಭಿಮಾನಿಗಳು ಆಸೆ ಪಟ್ಟರು ಇವರು ಈ ಬಾರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ.

ಈ ಹಿಂದೆ ಡಾ ಬ್ರೋ ಎಂದೇ ಖ್ಯಾತಿಯನ್ನು ಪಡೆದಿರುವ ಕನ್ನಡದ ಟ್ರಾವೆಲರ್ ಯುಟ್ಯೂಬರ್ ಗಗನ್ (youtuber gagan) ಅವರನ್ನು ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಕರೆಸಲಾಗುತ್ತದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಅಲ್ಲದೇ ಡಾ ಬ್ರೋ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಸಬೇಕು ಎಂಬ ಬೇಡಿಕೆಯೂ ಸಹ ಹೆಚ್ಚಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ರೋಲ್ ಕೂಡ ಆಗುತ್ತಲಿದೆ. ಈ ಬಗ್ಗೆ ಕೆಎಫ್‌ಐ ಇನ್‌ಸೈಡರ್ ಎಂಬ ಯುಟ್ಯೂಬ್ ಚಾನೆಲ್‌ ನಡೆಸಿದ ಸಂದರ್ಶನದಲ್ಲಿ ನಿರೂಪಕ ಜೀ ಎಂಟರ್‌ಟೈನ್‌ಮೆಂಟ್ ಹೆಡ್ ರಾಘವೇಂದ್ರ ಹುಣಸೂರು ಅವರ ಬಳಿ ಕೂಡ ಕೇಳಿದರು. ಇದಕ್ಕೆ ರಾಘವೇಂದ್ರ ಹುಣಸೂರು ಅವರು ಉತ್ತರ ನೀಡಿದ್ದು, ಡಾ ಬ್ರೋ ಬಗ್ಗೆ ಹೇಳಿರುವ ಹೇಳಿಕೆ ಸಖತ್ ವೈರಲ್ ಆಗಿದೆ.

ಡಾ ಬ್ರೋ ಅವರನ್ನು ವೀಕೆಂಡ್ ವಿತ್ ರಮೇಶ್‌ಗೆ ಕರೆಸಬೇಕು ಎಂದು ಟ್ರೋಲ್ ಆಗ್ತಿದೆ ಹಾಗೂ ಬೇಡಿಕೆ ಇದೆ, ಏಕೆಂದರೆ ಈವತ್ತು ಒಂದೊಂದು ಏರಿಯಾಗಳಿಗೆ ಹೋಗಲು ಜನ ಹೆದರುವಾಗ ಅಪಾಯವಿರುವ ಹಲವು ದೇಶಗಳಿಗೆ ಹೋಗಿ ಅದನ್ನು ಕರ್ನಾಟಕದ ಜನತೆಗೆ ತೋರಿಸುತ್ತಿದ್ದಾರೆ, ಇದರ ಬಗ್ಗೆ ನೀವು ಏನು ಹೇಳ್ತೀರ ಎಂದು ರಾಘವೇಂದ್ರ ಹುಣಸೂರು (raghavendra hunsur) ಅವರಿಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, “ನಿಮ್ಮ ತಾಯಿಗೆ ಡಾ ಬ್ರೋ ಗೊತ್ತಾ?, ನಿಮ್ಮ ಅಜ್ಜಿಗೆ ಡಾ ಬ್ರೋ ಗೊತ್ತಾ?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಆ ನಿರೂಪಕ ಗೊತ್ತಿಲ್ಲ ಸರ್ ಎಂದು ಮರುಉತ್ತರ ನೀಡಿದರು.

ನಂತರ ಹುಣಸೂರು “ಟಿವಿ ಮಾಧ್ಯಮ ತುಂಬಾ ವಿಭಿನ್ನ. ನಾವೇನು ಟ್ರೆಂಡಿಂಗ್ ಹಾಗೂ ಟ್ರೋಲಿಂಗ್ ಅಂತ ಕರೆಯುತ್ತೇವೋ ಅದು ತುಂಬಾ ಚಿಕ್ಕ ಪ್ರಪಂಚ. ಟಿವಿ ಅನ್ನೋದು ಗ್ರಾಮೀಣ ಪ್ರದೇಶಗಳಿಗೆ ಒಂದು ದೊಡ್ಡ ಸಾಗರ. ಆ ಮೌಲ್ಯ ವ್ಯವಸ್ಥೆಯಲ್ಲಿ ಅವರಿಂದ ಏನಾದರೂ ಕಲಿಯೋಕೆ ಇದ್ದರೆ ಖಂಡಿತವಾಗಿಯೂ ಅವರನ್ನು ಆಹ್ವಾನಿಸುತ್ತೇವೆ. ಅವರನ್ನು ಆಯ್ಕೆ ಮಾಡದಿರಲು ಬೇರೆ ಏನೂ ಉದ್ದೇಶವಿಲ್ಲ” ಎಂದು ಹೇಳಿದರು.

ಅಂದ್ರೆ, ಹಿರಿಯರಿಗೆ, ಟಿವಿಯಿಂದ ಮಾತ್ರ ಮನರಂಜನೆ ಪಡೆಯುವವರಿಗೆ ಡಾ ಬ್ರೋ ಯಾರು ಎಂದು ಗೊತ್ತಿಲ್ಲ. ಯುವ ಜನತೆಗೆ ಮೊಬೈಲ್ ನ ಕಾರಣದಿಂದ ಗೊತ್ತಿದೆ. ಈ ಕಾರಣದಿಂದ
ಅವರನ್ನು ವೀಕೆಂಡ್ ವಿತ್ ರಮೇಶ್‌ಗೆ ಕರೆಸುತ್ತಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು. ಸದ್ಯ ರಾಘವೇಂದ್ರ ಹುಣಸೂರು ಅವರು ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ರೋ ಅಭಿಮಾನಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ. ಡಾ ಬ್ರೋ ಸಹ ಒಬ್ಬ ಸಾಧಕ ಅವರ ಬಗ್ಗೆ ಈ ರೀತಿ ಹೇಳಿಕೆಗಳನ್ನು ನೀಡಬಾರದು ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ: Prewedding Photoshoot in Mud : ಎಲ್ಲಾ ಆಯಿತು, ಇನ್ನು ಈ ಮಣ್ಣಿನಲ್ಲಿ ನಡೆಯಿತು ಈ ಪ್ರೀ ವೆಡ್ಡಿಂಗ್‌ ಫೊಟೋ ಶೂಟ್‌!

Leave A Reply

Your email address will not be published.