Sullia assembly election: ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣಪ್ಪ ಆಯ್ಕೆ | ನಂದ ಕುಮಾರ್ ಬೆಂಬಲಿಗರ ಸಭೆ

Sullia constituency : ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ರಿಲೀಸ್‌ ಆಗಿದೆ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್‌ ಘೋಷಿಸಲಾಗಿದೆ.

ಸುಳ್ಯ ಕ್ಷೇತ್ರಕ್ಕೆ (Sullia constituency) ಕೆ.ಪಿ.ಸಿ.ಸಿ ಸಂಯೋಜಕ ಜಿ.ಕೃಷ್ಣಪ್ಪ ಅವರ ಹೆಸರು ಮೊದಲ ಪಟ್ಟಿಯಲ್ಲೇ ಕಾಣಿಸಿದ್ದು,ನಂದ‌ ಕುಮಾರ್ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರ ಅಸಹನೆಗೆ ಕಾರಣವಾಗಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಪ್ರಮುಖವಾಗಿ ನಂದ ಕುಮಾರ್ ಹಾಗೂ ಕೃಷ್ಣಪ್ಪ ಅವರ ಹೆಸರು ಕೇಳಿ ಬಂದಿತ್ತು.

ಈ ಬಾರಿ ಸುಳ್ಯದಿಂದ ನಾನೇ ಸ್ಪರ್ದಿಸಲಿದ್ದೇನೆ ಎಂದು ಜನರ ನಡುವೆ ಓಡಾಟ ಮಾಡಿದ ನಂದಕುಮಾರ್ ಗೆ ಈ ಸಲ ಟಿಕೆಟ್ ಸಿಗಬಹುದು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿತ್ತು ಅಲ್ಲದೇ ಕಾರ್ಯಕರ್ತರು ಅದೇ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದೆಲ್ಲದರ ನಡುವೆ ಜಿ. ಕೃಷ್ಣಪ್ಪ ರವರು ಸುದ್ದಿ ಗದ್ದಲವಿಲ್ಲದೆ ಧಿಡೀರ್ ದೆಹಲಿಗೆ ಹೋಗಿ,ದೆಹಲಿಯಿಂದ ತಮ್ಮ ಹೆಸರಿನ ಪಟ್ಟಿಯೊಂದಿಗೆ ಆಗಮಿಸಿದ್ದರು ಎನ್ನಲಾಗಿದೆ.

ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಿ.ಕೃಷ್ಣಪ್ಪ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಎಂಎಸ್‌ಸಿ ,ಎಂ.ಎ. ಪಧವೀಧರರು.

ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜಿ.ಕೃಷ್ಣಪ್ಪ ಅವರು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಕೆಪಿಸಿಸಿ ಸದಸ್ಯರು, ಕೆಪಿಸಿಸಿ ಸಂಯೋಜಕರಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.ಜಿ.ಕೃಷ್ಣಪ್ಪ ಕಳೆದ 4 ವರ್ಷಗಳಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಈ ಕಾರಣದಿಂದಾಗಿ ಅವರಿಗೇ ಮೊದಲ‌ ಪಟ್ಟಿಯಲ್ಲೇ ಟಿಕೇಟ್ ಪಕ್ಕಾ ಆಗಿದೆ.

ಶನಿವಾರ ಬಿಡುಗಡೆ ಮಾಡಲಾದ ಮೊದಲ ಪಟ್ಟಿಯಲ್ಲಿ(Sullia assembly election) ಸುಳ್ಯ ಕ್ಷೇತ್ರಕ್ಕೆ ಕೃಷ್ಣಪ್ಪ ಅವರ ಹೆಸರು ಕಾಣಿಸಿದೆ.ಇದರಿಂದ ಅಸಹನೆಗೆ ಒಳಗಾಗಿರುವ ನಂದ ಕುಮಾರ್ ಬೆಂಬಲಿಗರು ಮಾ.26ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ಹಾಗೂ ಕಡಬದ ಅನುಗ್ರಹ ಸಭಾಂಗಣದಲ್ಲಿ ಸಭೆ ಕರೆದಿದ್ದು,ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

Leave A Reply

Your email address will not be published.