Rashmika and Tamanna : ಐಪಿಎಲ್ ನಲ್ಲಿ ಸೊಂಟ ಬಳುಕಿಸಲು ರೆಡಿಯಾದ ರಶ್ಮಿಕಾ ಮಂದಣ್ಣ!!!

Rashmika and Tamanna: ನಿಮ್ಮನ್ನು ರಂಜಿಸಲು ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಕ್ಷಣಗಣನೆ ಆರಂಭವಾಗಿದ್ದು, ಐಪಿಎಲ್ ಕ್ರಿಕೆಟ್ ಎಂಬ ಮಾಂತ್ರಿಕ ಲೋಕದ ಜಿದ್ದಾಜಿದ್ದಿನ ಪೈಪೋಟಿಯ ಆಟಗಳನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿರುವ ಕ್ರಿಕೆಟ್ ಪ್ರೇಮಿಗಳೇ ಗಮನಿಸಿ, ಈ ಕುರಿತ ಒಂದಿಷ್ಟು ಮಾಹಿತಿ ನಿಮಗಾಗಿ.

ಕೊರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ಸುಧೀರ್ಘ ನಾಲ್ಕು ವರ್ಷಗಳವರೆಗೆ ಬ್ರೇಕ್ ನೀಡಲಾಗಿದ್ದ ಐಪಿಎಲ್ ಕ್ರಿಕೆಟ್ ಮ್ಯಾಚ್ ಓಪನಿಂಗ್ ಸಮಾರಂಭ ಮಾರ್ಚ್ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತನ್ನ 16 ನೇ ಋತುವನ್ನು ಶುರು ಮಾಡಲಿದೆ. ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್​ ಲೀಗ್‌ಗಾಗಿ ಓಪನಿಂಗ್ ಸಮಾರಂಭವನ್ನು ಆಯೋಜಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ನೀಡಿದ್ದು, ಈ ನಿಟ್ಟಿನಲ್ಲಿ ಬಿಸಿಸಿಐ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ಭಾರೀ ತಯಾರಿ ನಡೆಸುತ್ತಿದೆ.

ಈ ವರ್ಣ ರಂಜಿತ ಕಾರ್ಯಕ್ರಮಕ್ಕೆ ಐಪಿಎಲ್ ಲೀಗ್ ಗಳಿಗೆ ಹೆಚ್ಚಿನ ಕಳೆ ತಂದುಕೊಡುವ ಸಲುವಾಗಿ ಬಿಸಿಸಿಐ ಪ್ಲಾನ್ ಮಾಡಿದೆ. ಹೀಗಾಗಿ, ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಈ ಬಾರಿಯ ಲೀಗ್ ನ ಉದ್ಘಾಟನಾ ಸಮಾರಂಭಕ್ಕೆ ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ತಮ್ಮ ಮೋಹಕ ಮೈ ಮಾಟದ ನೃತ್ಯದ ಜೊತೆಗೆ ಎಲ್ಲರನ್ನೂ ರಂಜಿಸಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ 16 ನೆ ಆವೃತ್ತಿಯ ಆರಂಭಿಕ ಪಂದ್ಯವು ದೆಹಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಎಂಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಹಣಾಹಣಿ ನಡೆಯಲಿದೆ. ಬಹುನಿರೀಕ್ಷೆ ಹುಟ್ಟು ಹಾಕಿರುವ ಇಂಡಿಯನ್ ಪ್ರೀಮಿಯರ್ 16ನೇ ಆವೃತ್ತಿಯ ಲೀಗ್​ನಲ್ಲಿ 70 ಲೀಗ್ ಪಂದ್ಯಗಳಿಗಾಗಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಹೀಗಾಗಿ ಈ ವರ್ಷದ ಐಪಿಎಲ್​ ಭಾರೀ ಕುತೂಹಲ ಮೂಡಿಸಿದೆ.

ಕಳೆದ ಡಿಸೆಂಬರ್(December) ಸಂದರ್ಭದಲ್ಲಿ ಐಪಿಎಲ್(IPL Match) ಹಣಾಹಣಿಗೆ ಮಿನಿ ಹರಾಜು ಪ್ರಕ್ರಿಯೆ ನಡೆದಿದ್ದು, ಎಲ್ಲ 10 ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅವಶ್ಯಕವೆನಿಸಿದ ಆಟಗಾರರನ್ನು (Cricket Players) ಖರೀದಿ ಮಾಡಿದ್ದು, ಈ ವಾರ ಕೆಲ ವಿದೇಶಿ ಆಟಗಾರರನ್ನು ಬಿಟ್ಟರೆ ಇನ್ನುಳಿದ ಎಲ್ಲ ಆಟಗಾರರು ತಮ್ಮ ತಮ್ಮ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಐಪಿಎಲ್(IPL) ಒಟ್ಟು 70 ಲೀಗ್ ಹಂತದ ಪಂದ್ಯಗಳು 12 ಸ್ಥಳಗಳಲ್ಲಿ ಜೊತೆಗೆ 52 ದಿನಗಳ ಅವಧಿಯಲ್ಲಿ ಜರುಗಲಿದೆ. ಲೀಗ್ ಹಂತದಲ್ಲಿ ತಂಡಗಳು ಕ್ರಮವಾಗಿ 7 ತವರಿನ ಪಂದ್ಯಗಳನ್ನು ಮತ್ತು 7 ಬೇರೆಡೆ ಪಂದ್ಯಗಳನ್ನು ಅಡಲಿದ್ದು, ಪ್ರತಿ ತಂಡವು ಅದೇ ಗುಂಪಿನ ಇತರ 4 ತಂಡಗಳನ್ನು 2 ಬಾರಿ ಮುಖಾಮುಖಿಯಾಗಲಿದೆ. ಈ ಪಂದ್ಯಗಳಿಗೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಐಪಿಎಲ್‌ ಉದ್ಘಾಟನಾ ಸಮಾರಂಭಕ್ಕೆ ವರ್ಣ ರಂಜಿತ ಕಾರ್ಯಕ್ರಮಕ್ಕೆ ರಂಗು ತಂದುಕೊಡಲು ರಶ್ಮಿಕಾ ತಮನ್ನಾ(Rashmika and Tamanna) ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಇವರ ಜೊತೆಗೆ ಸಾಥ್ ನೀಡಲು ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಈ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್ ಯಾರಿಗಿಲ್ಲ ಹೇಳಿ!! ನಿಮಗೂ ಈ ಮನರಂಜನೆಯ ಜೊತೆಗೆ ಐಪಿಎಲ್ ಹಣಾಹಣಿಯ ಲೈವ್ ನೋಡಬೇಕು ಎಂದಾದರೆ, ನೀವೇನಾದರೂ ಜಿಯೋ ಬಳಕೆದಾರರಾಗಿದ್ದರೆ ಉಚಿತವಾಗಿ ಮ್ಯಾಚ್ ನೋಡಬಹುದು. ಹೌದು!! ಜಿಯೋ ಸಿನಿಮಾ (Reliance Jio Cinema) ಆ್ಯಪ್ನಲ್ಲಿ ನೇರಪ್ರಸಾರದ ಮೂಲಕ ನೋಡಬಹುದು. ಈ ಮೊದಲು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮಾತ್ರ ಸ್ಟ್ರೀಮ್ ಮಾಡಲಾಗುತ್ತಿತ್ತು. ಇದಕ್ಕಾಗಿ ಚಂದಾದಾರಿಕೆ ಹೊಂದಿರುವುದು ಅವಶ್ಯಕವಾಗಿದ್ದು, ಆದರೆ, ನೀವೀಗ, ಜಿಯೋ ಸಿನೆಮಾ ಆ್ಯಪ್ ಮೂಲಕ ಲೈವ್ ನೋಡಬಹುದಾಗಿದೆ.

ಇದನ್ನೂ ಓದಿ : Kichcha Sudeepa : ಉಪೇಂದ್ರ ಕಬ್ಜ ಸಿನಿಮಾ ನೋಡಿದ ಕಿಚ್ಚ ಫ್ಯಾನ್ಸ್ ರಿಂದ ಹೊಸದಾದ ಬೇಡಿಕೆ! ಏನದು?

Leave A Reply

Your email address will not be published.