Karnataka Assembly Election-2023: AICC ಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ! ಅಚ್ಚರಿ ಮೂಡಿಸಿದ ಕೆಲವು ಅಭ್ಯರ್ಥಿಗಳ ಆಯ್ಕೆ! ಯಾರಿಗೆ ಯಾವ ಕ್ಷೇತ್ರ ಇಲ್ಲಿದೆ ನೋಡಿ

Share the Article

Karnataka Vidhanasabha  Election : ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Vidhanasabha  Election )ರಾಜ್ಯದಲ್ಲಿ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿವೆ. ಅಬ್ಬರದ ಪ್ರಚಾರವನ್ನು ಕೈಗೊಂಡಿವೆ. ರಾಷ್ಟ್ರೀಯ ನಾಯಕರು ಬಂದು ರಾಜ್ಯ ನಾಯಕರಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ಅಭ್ಯರ್ಥಿಗಳ ಪಟ್ಟಿ ನಾಡಿನ ಜನತೆಗೆ ಕುತೂಹಲವಾಗಿಯೇ ಉಳಿದಿದೆ. ಆದರೆ ಈ ನಡುವೆ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಯಾರ್ಯಾರು ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಅಂತೂ ಕಾಂಗ್ರೆಸ್ ಪಾರ್ಟಿಯು ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರ ಸ್ವಲ್ಪ ಮಟ್ಟಿಗೆ ಬಗೆಹರಿದಿದ್ದು, ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮೊದಲ ಪಟ್ಟಿಯಲ್ಲಿ ನೋಡಬಹುದಾಗಿದೆ. ಆದರೆ ಅವರ ಪುತ್ರ ಯತೀಂದ್ರ ನಿನ್ನೆ ತಾನೆ ತಂದೆಯವರು ಕೋಲಾರ ಹಾಗೂ ವರುಣಾ ಎರಡರಲ್ಲೂ ಸ್ಪರ್ಧಿಸುತ್ತಾರೆ ಎಂದಿದ್ದರು. ಕೋಲಾರ ಕ್ಷೇತ್ರದ ಪ್ರಸ್ತಾಪ ಇಲ್ಲಿಲ್ಲ. 2ನೇ ಲಿಸ್ಟ್ ನಲ್ಲಿ ಇದ್ದರೂ ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಕೂಡ ಇಲ್ಲಿದ್ದು ಎಂದಿನಂತೆ ಕನಕಪುರದಿಂದ ಕಣಕಿಳಿಯುತ್ತಾರೆ. ಆದರೆ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಚ್ಚರಿ ಮೂಡಿದೆ. ಟಿ.ನರಸೀಪುರ ದಿಂದ ಹೆಚ್. ಸಿ. ಮಹದೇವಪ್ಪ, ದೇವನಹಳ್ಳಿ ಕ್ಷೇತ್ರದಿಂದ ಕೆ.ಹೆಚ್. ಮುನಿಯಪ್ಪ ಕಣಕ್ಕಿಳಿಯಲಿದ್ದಾರೆ.

 

Leave A Reply