Skin care in summer: ಉರಿ ಬಿಸಿಲಿಗೆ ನಿಮ್ಮ ಚರ್ಮ ಕಾಂತಿಯನ್ನು ಕಳೆದುಕೊಂಡಿದೆಯೇ? : ಆಂತರಿಕವಾಗಿ ದೇಹವನ್ನು ಬಲಗೊಳಿಸುವ ಸಿಂಪಲ್ ಟಿಪ್ಸ್ ಇಲ್ಲಿದೆ

Skin care in summer: ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಅತ್ಯಗತ್ಯ. ಅತಿಯಾದ ಬೆವರುವಿಕೆ, ನಿರ್ಜಲೀಕರಣ ಮತ್ತು ಶಾಖದಿಂದಾಗಿ (Skin care in summer)ಚರ್ಮವು ಹೆಚ್ಚಾಗಿ ಕಪ್ಪಾಗುತ್ತದೆ. ಸ್ಕಿನ್ ಟ್ಯಾನ್, ಮೊಡವೆಯಂತಹ ಹಲವು ಸಮಸ್ಯೆಗಳು ಬೇಸಿಗೆಯಲ್ಲಿ ಕಾಡುತ್ತದೆ. ಸಾಮಾನ್ಯವಾಗಿ ನಾವು ಬಿಸಿಲಿಗೆ ಹೋದಾಗ ಚರ್ಮ ಕಪ್ಪಾಗುವುದನ್ನು ಗಮನಿಸುತ್ತೇವೆ. ಮನೆಯಿಂದ ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚುವುದು ಉತ್ತಮ ಅಭ್ಯಾಸ. ಇದು ಯುವಿ ಕಿರಣಗಳ ಹಿಡಿತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ನಾವು ಎಷ್ಟೇ ಪ್ರಯತ್ನಿಸಿದರೂ, ಸನ್ ಬರ್ನ್ ಮತ್ತು ಸ್ಕಿನ್ ಟ್ಯಾನ್ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಸನ್​ ಸ್ಕ್ರೀನ್​ ಲೋಷನ್​ಗಿಂತಲೂ ಹೆಚ್ಚು ಪ್ರಬಲವಾಗಿ ಸೂರ್ಯನ ಅತಿ ನೇರಳ ಕಿರಣಗಳಿದ್ದು, ಅವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇವುಗಳಿಗೆ ರಾಸಾಯನಿಕಗಳನ್ನು ಬಳಸುವ ಬದಲು ಮನೆಯಲ್ಲಿಯೇ ಕೆಲವು ಪದಾರ್ಥಗಳನ್ನು ಬಳಸಿ ಟ್ಯಾನ್ ಹೋಗಲಾಡಿಸಬಹುದು. ಹೌದು. ಬಾಹ್ಯವಾಗಿ ದೇಹವನ್ನು ರಕ್ಷಣೆ ಮಾಡುವ ಬದಲಾಗಿ ಆಂತರಿಕವಾಗಿ ದೇಹವನ್ನು ಬಲಗೊಳಿಸುವ ಮೂಲಕ ಸೂರ್ಯನ ಅತಿ ನೇರಳೆ ಕಿರಣಗಳ ವಿರುದ್ಧ ಹೋರಾಡಬಹುದು. ಹಾಗಿದ್ರೆ ಬನ್ನಿ ಚರ್ಮದ ಕಾಳಜಿಗೆ ಯಾವ ಆಹಾರ ಸೇವನೆ ಸಹಕರಿಸುತ್ತದೆ ಎಂಬುದನ್ನು ತಿಳಿಯೋಣ.

ಹಣ್ಣುಗಳು:
ಹಣ್ಣುಗಳು ಸನ್​ ಬರ್ನ್​ನಿಂದ ರಕ್ಷಿಸುತ್ತದೆ. ವಿಶೇವಾಗಿ ಪೌಷ್ಟಿಕಾಂಶಯುಕ್ತ ಹಣ್ಣುಗಳಾದ ದಾಳಿಂಬೆ, ಸ್ಟ್ರಾಬೆರಿ, ಸೀಬೆ ಮುತ್ತಾದವರು ಬೇಸಿಗೆ ಕಾಲದಲ್ಲಿ ಹೆಚ್ಚು ಸಹಕಾರಿಯಾಗಿದೆ. ದಾಳಿಂಬೆಯಲ್ಲಿ ಎಲಾಜಿಕ್​ ಆಸಿಡ್​ ಹೆಚ್ಚಿರುತ್ತದೆ. ಇದು ಅತಿನೇರಳೆ ಕಿರಣಗಳು ದೇಹದೊಳಗೆ ಪ್ರವೇಶ ಮಾಡದಂತೆ ತಡೆಯುತ್ತದೆ. ಬೆರಿ ಹಣ್ಣುಗಳು ಕೂಡ ಸೂರ್ಯನಿಂದ ಚರ್ಮವನ್ನು ರಕ್ಷಿಸುತ್ತದೆ. ಸೀಬೆ ಹಣ್ಣಿನಲ್ಲಿ ಆಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್​ ಸಿ ಇದ್ದು, ಈ ಹಣ್ಣು ವರ್ಷ ಪೂರ ಲಭ್ಯವಿದೆ. ಇದರ ಜೊತೆಗೆ ಕಲ್ಲಂಗಡಿ, ಕಿವಿ ಮತ್ತು ಸೇಬು ಹಣ್ಣು ಬಳಕೆಯು ಉತ್ತಮ ಫಲಿತಾಂಶ ನೀಡುತ್ತದೆ. ಚರ್ಮವೂ ಅತಿ ಹೆಚ್ಚು ಅತಿ ನೇರಳ ಕಿರಣಗಳಿಗೆ ಒಳಗಾಗುವುದರಿಂದ ಚರ್ಮದ ಕ್ಯಾನ್ಸರ್​ ಅಥವಾ ಚರ್ಮ ಸಂಬಂಧಿತ ಇನ್ನಿತರ ಸಮಸ್ಯೆಗೆ ಕಾರಣವಾಗುತ್ತದೆ.

ಟೊಮೆಟೊ ಬಳಕೆ:
ಟೊಮೆಟೊ ಅಡುಗೆ ರುಚಿ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನೆನಪಿನ ಶಕ್ತಿಗೂ ಇದು ಸಹಾಯಕ. ಇದರಲ್ಲಿ ಇರುವ ಕಾರ್ಬೋಹೈಡ್ರೇಟ್​​ ಚರ್ಮ ಸುಡದಂತೆ ಕಾಪಾಡುತ್ತದೆ. ಟೊಮೆಟೊ ಬದಲಾಗಿ ಆಲೂಗಡ್ಡೆ ಯನ್ನು ಕೂಡ ಮುಖಉರಿ ಬಿಸಿಲಿಗೆ ನಿಮ್ಮ ಚರ್ಮ ಕಾಂತಿಯನ್ನು ಕಳೆದುಕೊಂಡಿದೆಯೇ? : ಆಂತರಿಕವಾಗಿ ದೇಹವನ್ನು ಬಲಗೊಳಿಸುವ ಸಿಂಪಲ್ ಟಿಪ್ಸ್ ಇಲ್ಲಿದೆಕ್ಕೆ ಹಚ್ಚುಬಹುದು. ಇದರಿಂದ ಮುಖದ ಸೌಂದರ್ಯ ಕೂಡ ಹೆಚ್ಚಾಗುತ್ತದೆ.

ಗ್ರೀನ್​ ಟೀ ಸೇವನೆ:
ತಜ್ಞರ ಪ್ರಕಾರ ಪ್ರತಿನಿತ್ಯ ಗ್ರೀನ್​ ಟೀ ಸೇವಿಸುವುದರಿಂದ ಸನ್​ಬರ್ನ್​ ಸಮಸ್ಯೆ ಕಡಿಮೆ ಮಾಡಬಹುದಾಗಿದೆ. ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಆರೋಗ್ಯಯುತ ಜೀವನಶೈಲಿಗೆ ಈ ಟೀ ಬೆಸ್ಟ್​. ಇದರಲ್ಲಿನ ಪೋಷಕಾಂಶಗಳು ಆರೋಗ್ಯ ಮತ್ತು ಫಿಟ್​ನೆಸ್​​ಗೆ ಮಾತ್ರವಲ್ಲ. ಸೂರ್ಯನಿಂದ ಚರ್ಮದ ಆರೋಗ್ಯ ಕಾಪಾಡಲು ಉಪಯುಕ್ತವಾಗಿದೆ. ವಿಶೇಷವಾಗಿ ಟ್ಯಾನಿಂಗ್​ ಮತ್ತಿತರ ರೀತಿಯ ಸನ್​ಬರ್ನ್​ಗೆ ಇದು ಪರಿಹಾರ ನೀಡುತ್ತದೆ. ಹಾಗಿದ್ರೆ ಇನ್ಯಾಕೆ ತಡೆ ಈ ಉತ್ತಮ ಸಲಹೆಯನ್ನು ಪಡೆದುಕೊಂಡು, ಕಾಂತಿಯುತ ಚರ್ಮ ನಿಮ್ಮದಾಗಿಸಿಕೊಳ್ಳಿ.

ಇದನ್ನೂ ಓದಿ: ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೇ ಕಷ್ಟ ಪಟ್ಟ ಮಹಿಳೆ! ಇದೆಂಥಾ ಖಾಯಿಲೆ?

Leave A Reply

Your email address will not be published.