Karnataka 2nd PU Exam 2023 : ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ- ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ ಪ್ರಕಟ!

Karnataka 2nd PU Exam 2023 : ಈಗಾಗಲೇ ಕರ್ನಾಟಕ (Karnataka )ಪದವಿ ಪೂರ್ವ ಶಿಕ್ಷಣ ಇಲಾಖೆಯು 2023 ಮಾರ್ಚ್ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಆರಂಭಿಸಿದ್ದು, ಮಾರ್ಚ್ 29 ರವರೆಗೆ ಪರೀಕ್ಷೆಗಳು ನಡೆಯಲಿದೆ.

ಸದ್ಯ ಮಾರ್ಚ್ 23ರವರೆಗೆ ನಡೆದಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ( Karnataka Second PUC Examination 2023 ) ಪ್ರಶ್ನೆ ಪತ್ರಿಕೆಗಳ ( Question Paper ) ಮಾದರಿ ಉತ್ತರಗಳನ್ನು ( Model Answer ) ಮಂಡಳಿಯ ವೆಬ್ ಸೈಟ್ ನಲ್ಲಿ ( Website ) ಇಂದು ಪ್ರಕಟಿಸಲಾಗಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ದಿನಾಂಕ 09-03-2023ರಿಂದ ದಿನಾಂಕ 23-03-2023ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ( Karnataka 2nd PU Exam 2023 ) ನಡೆಸಲಾಗಿತ್ತು. ಈ ಪರೀಕ್ಷೆಯ ವಿಷಯವಾರು ಪ್ರಶ್ನೆ ಪತ್ರಿಕೆಗಳ ( Question Paper )ಮಾದರಿ ಉತ್ತರಗಳನ್ನು ( Model Answer ) ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ .

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು https://kseab.karnataka.gov.in ಜಾಲ ತಾಣಕ್ಕೆ ಭೇಟಿ ನೀಡಿ, ಲೇಟೆಸ್ಟ್ ನ್ಯೂಸ್ ಟ್ಯಾಬ್ ನಲ್ಲಿ ದ್ರೇ ದ್ವಿತೀಯ ಪಿಯುಸಿ ಇಲ್ಲಿಯವರೆಗೆ ನಡೆದಂತ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರವನ್ನು ವೀಕ್ಷಿಸಬಹುದಾಗಿದೆ.

ದಿನಾಂಕ 25-03-2023 ರಿಂದ ದಿನಾಂಕ 29-03-2023ರವರೆಗೆ ನಡೆಯಲಿರುವ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸಲಾಗುವುದು.

ಅಂತೆಯೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರುಗಳಿಂದ ಒಂದು ವೇಳೆ ಆಕ್ಷೇಪಣೆಗಳಿದ್ದರೇ ಆನ್ ಲೈನ್ ಮೂಲಕ ಆಕ್ಷೇಪಣೆಗಳನ್ನು ದಿನಾಂಕ 25-03-2023 ರಿಂದ 27-03-2023ರ ಸಂಜೆ 5 ಗಂಟೆ ಒಳಗಾಗಿ ಸಲ್ಲಿಸುವುದು. ಆ ಬಳಿಕ ಸಲ್ಲಿಸಿದಂತ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.