Oneplus Nord CE 3 : ಒನ್ ಪ್ಲಸ್ ನಾರ್ಡ್ CE 3 ಲೈಟ್ ಶೀಘ್ರದಲ್ಲೇ ಮಾರುಕಟ್ಟೆಗೆ!

Oneplus Nord CE 3 :ಒನ್‌ಪ್ಲಸ್‌ ನ (oneplus) ಮೊಬೈಲ್(mobile) ಭಾರತದಲ್ಲಿ ಬೇಡಿಕೆಯನ್ನು ಪಡೆಯುತ್ತಿದ್ದು. ಇದೀಗ ಒನ್ ಪ್ಲಸ್ ಸ್ಮಾರ್ಟ್ ಫೋನ್(oneplus smartphone) ನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಬಳಸುತ್ತಿದ್ದಾರೆ. ಅದರಂತೆ ಈ ವರ್ಷ ಒನ್‌ಪ್ಲಸ್‌ 11 ಮತ್ತು ಒನ್‌ಪ್ಲಸ್‌ 11R ಅನ್ನು ಬಳಕೆದಾರರಿಗೆ ಲಾಂಚ್‌(launch) ಮಾಡಲಾಗಿದ್ದು, ಈ ಫೋನ್‌ನಿನ ಬೇಡಿಕೆ ಕಡಿಮೆಯಾಗುವ ಮುನ್ನವೇ ಮತ್ತೊಂದು ಹೊಸ ರೀತಿಯ ಸ್ಮಾರ್ಟ್ ಫೋನ್ ಅನ್ನು ಬಳಕೆದಾರರಿಗೋಸ್ಕರ ಮಾರುಕಟ್ಟೆಗೆ (market) ಪ್ರದರ್ಶಿಸಲಿದೆ.

 

ಒನ್‌ಪ್ಲಸ್ ಫೋನ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ರೀತಿಯ ಬೇಡಿಕೆ ಇದ್ದು, ಈ ನಡುವೆ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್ (OnePlus Nord CE 3 Lite ) ಇದೀಗ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರದರ್ಶಿಸಲು ದಿನಗಣನೆ ಆರಂಭಿಸುತ್ತಿದೆ. ಈ ಫೋನ್‌ ವೃತ್ತಾಕಾರದ ರಿಯರ್‌ಕ್ಯಾಮೆರಾ ಮಾಡ್ಯುಲ್‌(real camera module) ಹೊಂದಿದ್ದು, ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 695 (call kam Snapdragon)SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಎನ್ನಲಾಗಿದೆ.

ಈ ಫೋನ್ ಲೈಮ್ ಕಲರ್ (lime colour)ಅನ್ನು ಪಡೆಯಲಿದೆ ಎಂದು ತಿಳಿದಿದೆ, ಹಾಗೆಯೇ ಬೇರೆ ಬಣ್ಣದಲ್ಲೂ (different colour) ಸಹ ಕಾಣಿಸಿಕೊಳ್ಳಲಿದೆ ಎಂದು ಈಗ ಇರುವ ಮಾಹಿತಿಯ ಪ್ರಕಾರ ತಿಳಿದು ಬಂದಿದೆ. ಒಟ್ಟಾರೆಯಾಗಿ ಭಾರತದಲ್ಲಿ ಏಪ್ರಿಲ್ 4 ರಂದು ಈ ಒನ್‌ಪ್ಲಸ್ ನಾರ್ಡ್ ಬಡ್ಸ್ (oneplus nord birds) 2 ಜೊತೆಗೆ ಒನ್‌ಪ್ಲಸ್‌ ನಾರ್ಡ್‌ CE 3 ಲಾಂಚ್‌ ಆಗಬಹುದು ಎಂದು ಮಾಹಿತಿ ತಿಳಿದು ಬಂದಿದೆ.

ಹಾಗಾದರೆ ಇಷ್ಟರ ಮಟ್ಟಿಗೆ ತಿಳಿದ ಮಾಹಿತಿಯ ಪ್ರಕಾರ ಈ ಒನ್ ಪ್ಲಸ್ ನಾರ್ಡ್ CE3 ಲೈಟ್ ವೈಶಿಷ್ಟ್ಯಗಳನ್ನು (feature) ತಿಳಿಯೋಣ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ ಡಿಸ್‌ಪ್ಲೇ (display) ಮುಂದೆ ಬರುವ ಈ ವಿಶೇಷ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿರಲಿದ್ದು, ಇದು ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆಯೋ ಅಥವಾ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆಯೋ ಎಂದು ಬಳಕೆದಾರರು ಕಾದು ನೋಡಬೇಕಾಗಿದೆ. ಜೊತೆಗೆ 120Hz ರಿಫ್ರೆಶ್‌ ರೇಟ್‌(refresh rate) ಬೆಂಬಲವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ ಪ್ರೊಸೆಸರ್‌ (ce3 lite processor) ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದ್ದು, ಈ ಪ್ರೊಸೆಸರ್ ಈಗಾಗಲೇ ಲಾಂಚ್‌ ಆಗಿರುವ ಐಕ್ಯೂ Z6, ಮೊಟೊ G62 ಹಾಗೂ ವಿವೋ T1 ನಂತಹ ಮಿಡ್ ರೇಂಜ್‌ ಫೋನ್‌ಗಳಲ್ಲಿ ಕಂಡುಬಂದಿದೆ. ಇನ್ನುಳಿದಂತೆ ಈ ಫೋನ್ 6GB/4GB RAM ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಪ್ರದರ್ಶಿಸಲಿದೆಯಂತೆ.

ಒನ್‌ಪ್ಲಸ್‌ ನಾರ್ಡ್‌ CE 3 ಕ್ಯಾಮೆರಾ ರಚನೆಯ ಬಗ್ಗೆ, ಇದು ದ್ವಂದ್ವದಿಂದ ಕೂಡಿದ್ದು, ಹಾಗೆಯೇ ಕೆಲವು ವರದಿಗಳು 108 ಮೆಗಾಪಿಕ್ಸೆಲ್ (megapixel) ಪ್ರಾಥಮಿಕ ಕ್ಯಾಮೆರಾ (primary camera) ಇದರಲ್ಲಿ ಇರುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ 64 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಆಯ್ಕೆ ಇರಬಹುದು ಎಂದು ಹೇಳುತ್ತಿವೆ. ಅದಾಗ್ಯೂ ಈ ಕ್ಯಾಮೆರಾ ಆಯ್ಕೆಯಲ್ಲಿ ಅಲ್ಟ್ರಾ-ವೈಡ್ ಕ್ಯಾಮೆರಾ (ultra wide camera) ಲೆನ್ಸ್ ಆಯ್ಕೆ ನೀಡಲಾಗುತ್ತದೆಯೋ ಇಲ್ಲವೋ ಎಂದು ಬಳಕೆದಾರರು ಕಾದು ನೋಡಬೇಕಾಗಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಬ್ಯಾಟರಿ (battery) ಸಾಮರ್ಥ್ಯ ಹೇಗಿರಬಹುದು ಎಂದರೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್‌ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಎಲ್ಲ ವೈಶಿಷ್ಟ್ಯಗಳನ್ನು (features) ಹೊಂದಿದೆ. ಆದರೆ ಈ ವಿಭಾಗದಲ್ಲಿ ಒನ್‌ಪ್ಲಸ್‌ನ ಮೊದಲ ಫೋನ್‌ ಆಗಿ ಗುರುತಿಸಿಕೊಳ್ಳಲಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಯ ಬೆಲೆ ಎಷ್ಟರ ಮಟ್ಟಿಗೆ ಇದೆ ಎಂದರೆ ಕಳೆದ ವರ್ಷ ಒನ್‌ಪ್ಲಸ್‌ ನಾರ್ಡ್‌ (oneplus ) CE 2 ಲೈಟ್‌ 5G ಯ 6GB RAM ಮತ್ತು 128GB ಸ್ಟೋರೇಜ್‌ (storage) ಆಯ್ಕೆ ಇರುವ ಫೋನ್‌ ಅನ್ನು 19,999 ರೂ. ಗಳ ಬೆಲೆಯೊಂದಿಗೆ ಲಾಂಚ್ (launch) ಮಾಡಲಾಗಿತ್ತು. ಅದರಂತೆ ಈ ನಾರ್ಡ್‌ CE 3 ಲೈಟ್‌ ಸಹ ಇದಕ್ಕೆ ಹತ್ತಿರವಾಗುವ ಬೆಲೆಯಲ್ಲಿಯೇ ಈ ಮೊಬೈಲ್ (mobile) ಅನ್ನು ಖರೀದಿಸಬಹುದು ಎಂದು ಈಗ ಇರುವ ಮಾಹಿತಿಯ ಪ್ರಕಾರ ತಿಳಿಸಲಾಗಿದೆ.

ಇದನ್ನೂ ಓದಿ: Mercedes-AMG GT 63 S E Performance : ಈ ಮರ್ಸಿಡಿಸ್ ಕಾರಿನ ವೇಗ ಗಂಟೆಗೆ ಎಷ್ಟೆಂದು ತಿಳಿದರೆ ಖಂಡಿತ ಬೆಚ್ಚಿ ಬೀಳ್ತೀರ!!

Leave A Reply

Your email address will not be published.