Man Kills Mother : ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ! ಕಾರಣವೇನು ಗೊತ್ತಾ?

Man Kills Mother: ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು(Crime News) ವರದಿಯಾಗುತ್ತಲೇ ಇರುತ್ತವೆ.ಕೆಲವೊಂದು ಪ್ರಕರಣಗಳು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಮಕ್ಕಳು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಪ್ರತಿ ಪೋಷಕರು ಬಯಸುವುದು ಸಹಜ. ಅದೇ ರೀತಿ, ಕುಡಿತದ ದಾಸನಾಗಿದ್ದ ಮಗನಿಗೆ ಕುಡಿತ ಬಿಡು ಎಂದು ತಾಯಿ ಬುದ್ಧಿವಾದ ಹೇಳಿದ್ದೇ ತಪ್ಪಾಯಿತೇ? ಹೌದು!! ಇದೊಂದು ಮಾತು ಆಕೆಯನ್ನು ಸಾವಿನ ಸುಳಿಗೆ ಸಿಲುಕುವಂತೆ ಮಾಡಿದೆ.

 

ಮಾರ್ಚ್‌ 9ರಂದು ಮಗನೇ ಜನ್ಮಕೊಟ್ಟ ತಾಯಿಯ ಜೀವ ( Man Kills Mothe ) ತೆಗೆದ ವಿಲಕ್ಷಣ ಪ್ರಸಂಗವೊಂದು ಪುಣೆಯಲ್ಲಿ ವರದಿಯಾಗಿದೆ. ಆರೋಪಿ ಎನ್ನಲಾದ ವ್ಯಕ್ತಿಯನ್ನು ವಿಶ್ವಾಸ್ ಅಶೋಕ್ ಶಿಂಧೆ ಎಂದು ಗುರುತಿಸಲಾಗಿದೆ. ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ನ ಕಸ ತುಂಬುವ ಕೆಲಸ ಮಾಡುತ್ತಿದ್ದ. ಹತ್ಯೆಗೀಡಾದ ಈತನ ತಾಯಿಯನ್ನು ಪ್ರಯಾಗ್ಬಾಯಿ ಅಶೋಕ್ ಶಿಂಧೆ (58) ಎಂದು ಗುರುತಿಸಲಾಗಿದೆ.

ವಿಶ್ವಾಸ್ ಅಶೋಕ್ ಶಿಂಧೆ ಕುಡಿತದ (Drinking Habit)ಚಟವನ್ನು ಮೈಗೂಡಿಸಿ ಕೊಂಡಿದ್ದ. ಕುಡಿತದ(Alchohol)ಚಟದಿಂದ ದಿನನಿತ್ಯ ತಾಯಿಯ ಜೊತೆಗೆ ಜಗಳ ಮಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಹೀಗಾಗಿ, ತಾಯಿ ಕುಡಿಯುವ ಅಭ್ಯಾಸವನ್ನು ತ್ಯಜಿಸಿ ಕೆಲಸದ ಮೇಲೆ ಗಮನ ಕೊಡುವಂತೆ ಬುದ್ಧಿವಾದ ಹೇಳಿದ್ದಾರೆ. ಇದೇ ರೀತಿ, ಮಾರ್ಚ್‌ 9ರಂದು ಬೆಳಗ್ಗೆ ಎಂಟು ಗಂಟೆ ಆಸುಪಾಸಿನಲ್ಲಿ ಮಗ ಆಲ್ಕೋಹಾಲ್‌(Alchohol) ಕುಡಿಯುತ್ತಿದ್ದ. ಇದನ್ನು ಗಮನಿಸಿದ ತಾಯಿ, “ಕುಡಿದದ್ದು ಸಾಕು, ಕೆಲಸಕ್ಕೆ ಹೋಗು” ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಮಗ, ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಸಾಲದೆಂಬಂತೆ ಸಿಮೆಂಟ್ (Cement) ಇಟ್ಟಿಗೆಯಿಂದ ತಾಯಿಯ ತಲೆಗೆ ಹೊಡೆದಿದ್ದು,(Man Kills Mother) ಇದರಿಂದಾಗಿ ಆಕೆಯ ತಲೆಗೆ ತೀವ್ರ ತೆರನಾದ ಪೆಟ್ಟು ಬಿದ್ದಿದ್ದು ಮಹಿಳೆ ಮೃತಪಟ್ಟಿದ್ದಾಳೆ(Death) ಎಂಬುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು (Police)ನೀಡಿದ ಮಾಹಿತಿ ಅನುಸಾರ, ಹತ್ಯೆಗೀಡಾದ ತಾಯಿ ಪ್ರಯಾಗ್ಬಾಯಿ ಅಶೋಕ್ ಶಿಂಧೆ (58) ತನ್ನ ಮಗನ ಜೊತೆಗೆ ನೆಲೆಸಿದ್ದರು ಎನ್ನಲಾಗಿದೆ.ಸದ್ಯ, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 302ರಡಿ ಪ್ರಕರಣ ದಾಖಲಿಸಲಾಗಿದ್ದು, ತಾಯಿಯನ್ನು ಹತ್ಯೆಗೈದ ಆರೋಪದಡಿ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.