Samudra Shastra : ಮಹಿಳೆಯರ ದೇಹದ ಈ ಭಾಗಗಳಲ್ಲಿ ರೋಮಗಳಿದ್ದರೆ ಇದೊಂದು ಶುಭ ಸಂಕೇತ!

Samudra Shastra: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ (vastu shastra) ವಿಶೇಷ ಮಹತ್ವವಿದೆ. ನಮ್ಮ ಸುತ್ತಲಿನ ವಿಷಯಗಳು ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಸದ್ಯ ಪ್ರತಿಯೊಬ್ಬರೂ ಪ್ರತಿನಿತ್ಯ ಯಾವುದೇ ಕೆಲಸಗಳನ್ನು ಮಾಡುವ ಮುನ್ನ ಅದು ಶುಭವೋ ಅಥವಾ ಅಶುಭವೋ ಎನ್ನುವುದರ ಕುರಿತು ಹೆಚ್ಚು ಗಮನ ಹರಿಸಬೇಕು. ಇನ್ನು Samudra Shastraದ ಪ್ರಕಾರ, ಮಹಿಳೆಯರ ದೇಹದ ಈ ಭಾಗಗಳಲ್ಲಿ ರೋಮಗಳಿದ್ದರೆ (Women Body Hair Astrology) ಇದೊಂದು ಶುಭ ಸಂಕೇತ ಎನ್ನಲಾಗಿದೆ.

ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರ ದೇಹದ ಮೇಲೆ ಹೆಚ್ಚು ರೋಮಗಳಿರುತ್ತವೆ. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಈ ಕುರಿತು ಚರ್ಚಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಶರೀರದ ಕೆಲ ಭಾಗಗಳ ಮೇಲೆ ರೋಮಗಳಿರುವುದು ಅತ್ಯಂತ ಶುಭಕರ ಎಂದು ಹೇಳಲಾಗಿದೆ. ಹಾಗೆಯೇ ಕೆಲ ಭಾಗಗಳ ಮೇಲೆ ರೋಮಗಳಿರುವುದು ಅಶುಭ ಸಂಕೇತ ಹೇಳಲಾಗಿದೆ. ಯಾವುದು ಶುಭ? ಯಾವುದು ಅಶುಭ? ನೋಡೋಣ.

ಮಹಿಳೆಯರ ಶರೀರದ ಮೇಲೆ ರೋಮಗಳಿರುವುದು ಶುಭ ಸಂಕೇತವಾಗಿದೆ. ಮಹಿಳೆಯರು ತಮ್ಮ ಕಂಕುಳ ಭಾಗದಲ್ಲಿ ಹೆಚ್ಚು ಕೂದಲನ್ನು ಹೊಂದಿದ್ದರೆ, ಶುಭ. ಇವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಣಕಾಸಿನ ವಿಷಯದಲ್ಲಿ ಇವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಮತ್ತು ಇವರ ಬಳಿ ಅಪಾರ ಹಣವಿರುತ್ತದೆ. ಇಂತಹ ಮಹಿಳೆಯರಿಗೆ ಒಪ್ಪಿಸಿದ ಕೆಲಸವನ್ನು ಅವರು ಸಂಪೂರ್ಣ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಿವಿಗಳ ಮೇಲೆ ರೋಮಗಳಿರುವುದು ಶುಭ ಸಂಕೇತ. ಇವರು ಬಹಳ ಕಡಿಮೆ ಪ್ರಯತ್ನದಿಂದ ಎಲ್ಲವನ್ನೂ ಪಡೆಯುತ್ತಾರೆ. ತುಂಬಾ ಪ್ರತಿಭಾವಂತರಾಗಿರುತ್ತಾರೆ. ಸಾಕಷ್ಟು ಹಣವನ್ನು ಹೊಂದಿರುತ್ತಾರೆ ಮತ್ತು ಐಶಾರಾಮಿ ಜೀವನವನ್ನು ನಡೆಸುತ್ತಾರೆ. ಅವರ ಮೇಲೆ ಯಾವಾಗಲೂ ದೇವರ ವಿಶೇಷ ಕೃಪೆ ಇರುತ್ತದೆ.

ಕೆಲವು ಮಹಿಳೆಯರಿಗೆ ಎದೆಯ ಮೇಲೆ ಕೂಡ ರೋಮಗಳಿರುತ್ತವೆ. ಇದನ್ನು ಸಮುದ್ರಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಸ್ವಭಾವದಿಂದ ತುಂಬಾ ತೃಪ್ತರಾಗಿರುತ್ತಾರೆ ಎನ್ನಲಾಗಿದೆ. ಆರ್ಥಿಕವಾಗಿ ಸಬಲರಾಗಿರುತ್ತಾರೆ.

Leave A Reply

Your email address will not be published.