Home Breaking Entertainment News Kannada RRR Cinema: ಅರೆ! ಆಸ್ಕರ್ ಗೆದ್ದ ‘ನಾಟು ನಾಟು’ ಸಾಂಗ್ ಟಾಮ್ ಆ್ಯಂಡ್ ಜೆರ್ರಿಯ ಕಾಪಿಯೇ?...

RRR Cinema: ಅರೆ! ಆಸ್ಕರ್ ಗೆದ್ದ ‘ನಾಟು ನಾಟು’ ಸಾಂಗ್ ಟಾಮ್ ಆ್ಯಂಡ್ ಜೆರ್ರಿಯ ಕಾಪಿಯೇ? ಭಾರೀ ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!

RRR Cinema

Hindu neighbor gifts plot of land

Hindu neighbour gifts land to Muslim journalist

RRR Cinema :ರಾಜಮೌಳಿ(Rajamouli) ನಿರ್ದೇಶನದ RRR ಚಿತ್ರದ ‘ನಾಟು ನಾಟು’ ಸಾಂಗ್ ಕೇಳದವರಾಗಲಿ, ನೋಡದವರಾಗಲಿ ಯಾರಿದ್ದಾರೆ ಹೇಳಿ? ವಿಶ್ವವೇ ಈ ಹಾಡನ್ನು ಮೆಚ್ಚಿ ಹೊಗಳುತ್ತಿದೆ. ಅದರಲ್ಲೂ ಈ ಹಾಡು 2023ರ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಸೋಷಿಯಲ್ ಮೀಡಿಯಾಗಳಲೆಲ್ಲಾ ಇದರದ್ದೇ ಹವಾ. ಇದಕ್ಕೆ ಸ್ಟೆಪ್ ಹಾಕದವರೇ ಇಲ್ಲ ಅನ್ಬೋದು. ಆದರೀಗ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮೂಡಿಬಂದ ಈ ನಾಟು ನಾಟು ಹಾಡು ಟಾಮ್ ಆ್ಯಂಡ್​​ ಜೆರ್ರಿಯಾ (Tom And Jerry) ಕಾಪಿಯೇ ಎಂಬ ಕುತೂಹಲಕಾರಿ ಪ್ರಶ್ನೆಯೊಂದು ಉದ್ಭವಾಗಿದೆ.

ಹೌದು, ತ್ರಿಬಲ್​ ಆರ್​ ಚಿತ್ರದ (RRR Cinema) ಕೆಲವೊಂದು ಸೀನ್​ಗಳು ಥೇಟ್​ ಟಾಮ್​ ಆ್ಯಂಡ್​ ಜೆರ್ರಿಯ ಸೀನ್​​ಗಳನ್ನೇ ಹೋಲುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಸದ್ಯ ಎಡಿಟ್​ ಮಾಡಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್​ ಆಗುತ್ತಿದೆ. ಇನ್ನು ನಿರ್ದೇಶಕ ರಾಜಮೌಳಿಯವರು ಟಾಮ್ ಅಂಡ್ ಜೆರ್ರಿಯನ್ನೇ ಇನ್ಸ್​​ಪಿರೇಶನ್​ ಆಗಿಟ್ಟುಕೊಂಡು ಕೊಂಡು ತ್ರಿಬಲ್ ಆರ್ ಸಿನಿಮಾವನ್ನು ರಚಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ತ್ರಿಬಲ್​ ಆರ್​ ಚಿತ್ರದ ಕೆಲವೊಂದು ಸೀನ್​ಗಳು ಥೇಟ್​ ಟಾಮ್​ ಆ್ಯಂಡ್​ ಜೆರ್ರಿಯ ಸೀನ್​​ಗಳನ್ನೇ ಹೋಲಿಕೆಯಾಗುತ್ತಿದ್ದು, ಸದ್ಯ ಎಡಿಟ್​ ಮಾಡಿದ ವಿಡಿಯೋ ಒಂದು ಸಖತ್ ವೈರಲ್​ ಆಗುತ್ತಿದೆ. ಜೊತೆಗೆ ಈ ಸಿನಿಮಾದ ಸೀನ್​ಗಳನ್ನು ಮತ್ತು ಟಾಮ್​ ಆಂಡ್​ ಜೆರ್ರಿಯ ಕೆಲವೊಂದು ಸೀನ್​ಗಳನ್ನು ಒಟ್ಟುಗೂಡಿಸಿ ಎಡಿಟ್​ ಮಾಡಿದ್ದು ನೋಡುಗರನ್ನೇ ಅಚ್ಚರಿ ಮೂಡಿಸುವಂತಿದೆ.

ಇನ್ನು @PhunnyRabia ಎಂಬವರು RRR ಚಿತ್ರ ಟಾಮ್​​ ಆ್ಯಂಡ್​ ಜೆರ್ರಿಯ ಕಾಪಿಯಾ? ಎಂದು ಕ್ಯಾಪ್ಷನ್​ ಮೂಲಕ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದು ಮಿಲಿಯನ್​ ಗಟ್ಟಲೇ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲೆ RRR ಮತ್ತು ಟಾಮ್​ ಆ್ಯಂಡ್​ ಜೆರ್ರಿ ಚಿತ್ರದ ಕೆಲವೊಂದು ಸೀನ್​ಗಳು ಒಂದೇ ರೀತಿಯಲ್ಲಿ ಹೋಲಿಯಾಗುತ್ತಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲೂ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ.

ಈ ವಿಡಿಯೋವನ್ನು ನೋಡುವಾಗಲೇ ಮುಖದಲ್ಲಿ ನಗುತರಿಸುತ್ತೆ. ಆದರೆ ಎಡಿಟ್ ಮಾಡಿದವರಿಗಂತೂ ಭೇಷ್ ಎನ್ನಲೇ ಬೇಕು. ಹಾಗೆಯೇ ಈ ವಿಡಿಯೋವನ್ನು ನೋಡಿದ ಹಲವರು ನಗುವಿನ ಎಮೋಜಿಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲೂ ಒಬ್ಬರು ‘ಕೊನೆಗೂ ಟಾಮ್​ ಆಂಡ್​ ಜೆರ್ರಿಗೆ ಆಸ್ಕರ್​ ಪ್ರಶಸ್ತಿ ಪಡೆಯಿತು‘ ಎಂದು ಹೇಳಿದ್ದಾರೆ. ಇನ್ನೊಬ್ಬರು ಎಡಿಟ್​ ಮಾಡಿದವರು ಬ್ರಿಲಿಯೆಂಟ್​ ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ ‘ನಾಟು ನಾಟು’ ಹಾಡನ್ನು ಖ್ಯಾತ ಗೀತಾ ರಚನಾಕಾರ ಚಂದ್ರಬೋಸ್ ಅವರು ಬರೆದಿದ್ದಾರೆ. ಆದರೆ ಈ ಸಾಂಗ್ ಬರೆಯಲು ಬರೋಬ್ಬರಿ 17 ತಿಂಗಳು ಬೇಕಾಯಿತಂತೆ. “ಚಿತ್ರದ ಒಂದು ಪ್ರಮುಖ ದೃಶ್ಯಕ್ಕಾಗಿ ಒಂದು ಹಾಡನ್ನು ಬರೆಯುವಂತೆ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನನ್ನನ್ನು ಕೇಳಿದರು. ನಾನು ಮೂರು ಹಾಡುಗಳನ್ನು ಬರೆದು ಅವರ ಕೈಗಿತ್ತೆ. ಅವರು ‘ನಾಟು ನಾಟು’ ಹಾಡನ್ನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟಪಟ್ಟರು” ಎಂದು ಚಂದ್ರಬೋಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Online Marriage: ಅಮೆರಿಕಾದಲ್ಲಿರುವ ವಧು-ವರರಿಗೆ ಭಾರತದಲ್ಲಿ ಮದುವೆ! ಹಲವು ವಿಶೇಷತೆಗೆ ಸಾಕ್ಷಿಯಾಯ್ತು ಈ ಆನ್ಲೈನ್ ಮ್ಯಾರೇಜ್!