Fear Phobia : ಜಿರಳೆ ಕಂಡರೆ ನಿಮಗೆ ಭಯನಾ? ಅಷ್ಟಕ್ಕೂ ಹೆಣ್ಮಕ್ಕಳು ಈ ಪುಟ್ಟ ಕೀಟನ ಕಂಡರೆ ಯಾಕಿಷ್ಟು ಹೆದರ್ತಾರೆ?

Fear Phobia: ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ರೀತಿಯ ಭಯ ಇರುವುದು ಸಹಜ. ಕೆಲವರಿಗೆ ರಾತ್ರಿ ಭಯ, ಮತ್ತೆ ಕೆಲವರಿಗೆ ಕತ್ತಲು, ಹಾವು, ಜಿರಳೆ ಎಂದರೆ ಸಾಕು ಭಯದಲ್ಲಿ ಕಿರುಚಾಡುವುದನ್ನು ನೋಡಿರಬಹುದು.

ಜಿರಳೆ(Cockroach)ಎಂದ ತಕ್ಷಣ ಹೆಚ್ಚಿನವರು ಹೆದರುವುದನ್ನು ನೋಡಿರಬಹುದು. ಜಿರಳೆ ಕಚ್ಚುವ ಇಲ್ಲವೇ ವಿಷಕಾರುವುದಿಲ್ಲ. ಅಷ್ಟೆ ಏಕೆ ಇದರಿಂದ ಯಾವುದೇ ಭೀಕರ ಸಮಸ್ಯೆ ಉಂಟಾಗದು. ಆದರೂ ಕೂಡ, ಮಹಿಳೆಯರು ಜಿರಳೆ ಕಂಡರೆ ಭಯಪಡುವುದನ್ನು (Fear)ನೋಡಿರಬಹುದು.ಆದರೆ ಜನರು ಜಿರಳೆ ಕಂಡರೆ (Fear of Cockroach)ಏಕೆ ಹೆದರುತ್ತಾರೆ? ಎಂಬ ಪ್ರಶ್ನೆ ನಿಮ್ಮನ್ನು ಕೂಡ ಕಾಡಿರಬಹುದು.ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಜಿರಳೆ ಒಂದು ಕೀಟವಾಗಿದ್ದು, ಅದು ಮಾನವರಲ್ಲಿ ‘ಅಸಹ್ಯವಾದ ಭಾವನೆಯನ್ನು ಪ್ರಚೋದಿಸುತ್ತದೆ. ಇದರ ಎಣ್ಣೆಯುಕ್ತ ದೇಹ, ಹಾರುವಾಗ ಮಾಡುವ ಬೀಸುವ ಶಬ್ದ, ನೆಲದ ಮೇಲೆ ನಡೆಯುವುದನ್ನು ಕಂಡಾಗ ಕೆಲವರಿಗೆ ಅದು ಏನು ಮಾಡದೇ ಇದ್ದರೂ ಸಹ ಭಯವಾಗುತ್ತದೆ. ಜಿರಳೆಯ ದೇಹವು ಯೂರಿಕ್ ಆಮ್ಲವನ್ನು ಸಂಗ್ರಹ(Storage) ಮಾಡುವ ಜೊತೆಗೆ ಅಹಿತಕರ ವಾಸನೆಯನ್ನು ಹೊರಸೂಸುತ್ತದೆ. ಜಿರಳೆ ಆಹಾರ ಪಡೆಯಲು ಆಶ್ರಯದ ನಿಮಿತ್ತ ಚರಂಡಿಗಳನ್ನು ಆಶ್ರಯಿಸುವುದರಿಂದ ದುರ್ವಾಸನೆಯನ್ನು ಬೀರುತ್ತದೆ. ಜಿರಳೆಯಿಂದ ಉಸಿರಾಟದ(Breathing Problems) ಸಮಸ್ಯೆ ಹೊಂದಿರುವ ಅದರಲ್ಲಿಯೂ ಅಸ್ತಮಾ(Astama) ಸಮಸ್ಯೆಯಿದ್ದವರಿಗೆ ಜಿರಳೆಯಲ್ಲಿರುವ ಅಲರ್ಜಿನ್ಗಳಿಂದಾಗಿ ಉಬ್ಬಸ ಕಂಡುಬರುವ ಸಾಧ್ಯತೆಗಳಿದ್ದು, ಇದರಿಂದ ಕೂಡ ಭಯ ಉಂಟಾಗಬಹುದು.

ಪ್ರಪಂಚದ ಅತ್ಯಂತ ‘ಸಾಮಾನ್ಯ’ ಫೋಬಿಯಾಗಳಲ್ಲಿ(Fear Phobia) ಜಿರಳೆ ಭಯ ಕೂಡ ಒಂದಾಗಿದ್ದು, ಹೆಚ್ಚಿನವರಿಗೆ ಬಾಲ್ಯದಿಂದಲೂ(childhood) ಈ ಭಯವಿರುತ್ತದೆ. ಈ ಭಯ ನಂತರ ನಂತರ ಜೀವನದುದ್ದಕ್ಕೂ ಮುಂದುವರೆಯುತ್ತಾ ಹೋಗುತ್ತದೆ. ಒಂದು ವೇಳೆ ಮನೆಯಲ್ಲಿ ಯಾರಿಗಾದರೂ ಈ ಭಯವಿತ್ತು ಎಂದಾದರೆ ಅವರನ್ನು ನೋಡಿ ಉಳಿದವರು ಅದನ್ನೇ ಅನುಕರಣೆ ಮಾಡುವ ಸಂಭವವಿದೆ. ಸಾಮಾನ್ಯವಾಗಿ ಒಬ್ಬರು ಮಾಡುವಂತೆ ಅವರ ಚಟುವಟಿಕೆಗಳನ್ನು ಅನುಕರಣೆ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಸಹಜವಾಗಿ ದೈಹಿಕ ಸಮಸ್ಯೆಗಳಿದ್ದರೆ, ಹೃದಯ ಬಡಿತ ಜೋರಾಗುತ್ತದೆ. ಕೈಗಳು ಮತ್ತು ಪಾದಗಳು ತಣ್ಣಗಾಗುವ ಅನುಭವ ಉಂಟಾಗಬಹುದು.

ನಿಮಗೂ ಈ ಅಭ್ಯಾಸವಿದ್ದರೆ, ಭಯ ಪಡುವುದನ್ನು ಬಿಡುವುದು ಉತ್ತಮ. ಇದೇ ಅಭ್ಯಾಸ ಮುಂದುವರಿದರೆ ಸಣ್ಣ ಪುಟ್ಟ ವಿಚಾರಕ್ಕೂ ಭಯ ಬೀಳುವ ಅಭ್ಯಾಸ ರೂಡಿಯಾಗಬಹುದು. ಒಂದು ವೇಳೆ ಇದೇ ಆಲೋಚನೆಗಳು ನಿಮ್ಮನ್ನು ಹೆಚ್ಚಾಗಿ ಕಾಡುತ್ತಿದ್ದು, ಸರಿಯಾಗಿ ಆಲೋಚನೆ ಮಾಡಲು ಆಗದೇ ಇದ್ದಾಗ, ನೀವು ಮನೋವೈದ್ಯರನ್ನು ಭೇಟಿ ಮಾಡಬಹುದು.

Leave A Reply

Your email address will not be published.