Wake up in morning : ಬೆಳಗ್ಗೆ ಯಾವ ಬದಿಯಿಂದ ಏಳುವ ಅಭ್ಯಾಸ ನೀವು ಹೊಂದಿದ್ದೀರಿ? : ಬಲ ಅಥವಾ ಎಡ ಬದಿಯಲ್ಲಿ ಯಾವುದು ಸೂಕ್ತ ಎಂಬುದು ಇಲ್ಲಿದೆ ನೋಡಿ
Wake-up in morning :ನಮ್ಮ ಆರೋಗ್ಯಕ್ಕಾಗಿ ಸರಿಯಾದ ಕ್ರಮದಲ್ಲಿ ಒಳ್ಳೆಯ ನಿದ್ದೆಯನ್ನು ನಾವು ಮಾಡಲೇಬೇಕು. ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಬೇಕಾಗುತ್ತದೆ. ಅದು ಆರಾಮದಾಯ ನಿದ್ದೆಯಿಂದ ಸಾಧ್ಯ. ಒಂದು ರಾತ್ರಿ ಸರಿಯಾದ ನಿದ್ದೆ ಮಾಡದ ಮನುಷ್ಯ ಯಾವುದೇ ರೀತಿಯಲ್ಲೂ ಚಟುವಟಿಕೆಯಿಂದ ಇರಲು ಸಾಧ್ಯ ಆಗುವುದಿಲ್ಲ.
ನಿದ್ದೆ ಮನುಷ್ಯನಿಗೆ ಎಷ್ಟು ಉತ್ತಮವೊ ಅಷ್ಟೇ ಆತ ನಡೆದುಕೊಳ್ಳುವ ಕ್ರಮ ಕೂಡ ಮುಖ್ಯವಾಗಿರುತ್ತದೆ. ಅಂದರೆ, ಒಬ್ಬ ಮನುಷ್ಯ ನಿದ್ದೆಯಿಂದ ಏಳುವುದು (Wake-up in morning) ಕೂಡ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಹಿರಿಯರ ಅಭಿಪ್ರಾಯದಂತೆ ಬಲ ಗಡೆಯಿಂದ ಏಳುವುದು ಒಳ್ಳೆಯದು ಎಂಬುದಷ್ಟೇ ಅನೇಕರಿಗೆ ತಿಳಿದಿದೆ. ಆದ್ರೆ ಅದರ ಹಿಂದಿರುವ ಕಾರಣ ಮಾತ್ರ ತಿಳಿಯದೆ ಹೋಗಿದೆ.
ಹೌದು. ಬೆಳಗ್ಗಿನ ಜಾವ ಏಳೋದು ಕೂಡ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗೆ ಬಲಬದಿಯಿಂದ ಏಳುವುದು ಒಳ್ಳೆಯ ಅಭ್ಯಾಸ. ಆಯುರ್ವೇದ ಹಾಗೂ ಆಧುನಿಕ ವಿಜ್ಞಾನದಲ್ಲೂ ಕೂಡ ಈ ಅಭ್ಯಾಸ ಒಳ್ಳೆಯದೆಂದು ಸಾಭೀತಾಗಿದೆ. ಈ ಅಭ್ಯಾಸ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಅಪಾಯಗಳಿಂದ ಪಾರು ಮಾಡುತ್ತದೆ. ನಮ್ಮ ಮೆದುಳಿನ ಬಲಭಾಗವು ಸೃಜನಶೀಲ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಹಾಗೂ ನಮ್ಮ ಮೆದುಳಿನ ಎಡಭಾಗವು ತಾರ್ಕಿಕ ಮೌಖಿಕ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಬೆಳಗ್ಗೆ ಬಲ ಬದಿಯಿಂದ ಏಳುವುದರಿಂದ ನಿಮ್ಮ ಅಂದಿನ ದಿನ ಶಾಂತಿಯುತವಾಗಿಯೂ ಹಾಗೂ ಒತ್ತಡವಿಲ್ಲದೇ ಕಳೆಯಬಹುದು.
ಕುಡಿದ ಮತ್ತಿನಲ್ಲಿ ಎಡಬದಿಯಿಂದ ಎದ್ದರೆ ಖಂಡಿತ ಅಪಾಯವಿರುತ್ತದೆ. ಕುಡಿದ ಮತ್ತಿನಲ್ಲಿ ಬೆಳಗ್ಗೆ ಎಡಬದಿಯಿಂದ ಎದ್ದರೆ ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚು. ಕುಡಿಯದಿದ್ದವರು ಕೂಡ ಎಡಬದಿಯಿಂದ ಎದ್ದಾಗ ತಲೆ ಸುತ್ತುವುದು, ಏಕಾಏಕಿ ಕೆಳಗೆ ಬೀಳುವುದು ಇಂತಹ ಅನುಭವ ಆಗುತ್ತದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ.
ಹಾಗೆಯೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿ ಮಲಗುವಾಗ ಕೂಡ ಗಮನಿಸಬೇಕಾಗುತ್ತದೆ. ಯಾಕಂದ್ರೆ, ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ನಂತರ ನೀವು ಹಾಸಿಗೆಯ ಎಡಭಾಗದಲ್ಲಿ ಏಳಲು ಪ್ರಯತ್ನಿಸಿದರೆ, ಅದು ಬಲಭಾಗದಲ್ಲಿ ಇನ್ನೂ ಹೆಚ್ಚಿನ ಒತ್ತಡವನ್ನು ಉಂಟುಮಾಡುವ ಸಾಧ್ಯತೆಯಿದೆ. ಅಸಮರ್ಪಕ ಲೈಂಗಿಕ ಭಂಗಿಗಳನ್ನು ಪ್ರಯೋಗಿಸಲು ಪ್ರಯತ್ನಿಸಿದಾಗ ಗಾಯಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸಿದೆ.
ಇನ್ನು ಇಂಜೆಕ್ಷನ್ ಪ್ರಭಾವ ನೋಡುವುದಾದರೆ, ಹೆಚ್ಚಿನವರು ಬಲಗೈಯವರಾಗಿರೋದ್ರಿಂದ ಇನ್ಸುಲಿನ್, ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಎಡಗೈಗೆ ಚುಚ್ಚಿಸಿಕೊಳ್ಳುತ್ತಾರೆ. ಎಡಗೈಯಲ್ಲಿನ ಸ್ನಾಯುಗಳು ಮತ್ತು ನರಗಳು ನಿರಂತರ ಔಷಧ ಚುಚ್ಚುಮದ್ದಿನಿಂದ ಕ್ಷೀಣಗೊಂಡಿರುತ್ತದೆ. ಹಾಗೂ ಅದಕ್ಕೆ ಬಲಗೈಗೆ ಇರುವಷ್ಟು ಶಕ್ತಿ ಇರೋದಿಲ್ಲ. ನೀವು ಒಂದು ವೇಳೆ ಎಡ ಬದಿಯಿಂದ ಏಳುವುದಾದರೆ ನಿಮ್ಮ ದೇಹದ ತೂಕವೆಲ್ಲಾ ಒಂದು ಭಾಗಕ್ಕೆ ಬೀಳುತ್ತದೆ. ನಿಮಗೆ ಏಳಲು ಕೂಡ ಇದರಿಂದ ಕಷ್ಟವಾಗಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಲ ಬದಿಯಿಂದಲೇ ಏಳುವುದು ಉತ್ತಮ.
ಇದನ್ನೂ ಓದಿ: Family Secret : ನಿಮ್ಮ ಮುದ್ದಿನ ಮಡದಿ ಮುನಿಸಿಕೊಂಡರೆ ಹೀಗೆ ರಮಿಸಿ ಮಾಡಿ ನೋಡಿ!!