Family Secret : ನಿಮ್ಮ ಮುದ್ದಿನ ಮಡದಿ ಮುನಿಸಿಕೊಂಡರೆ ಹೀಗೆ ರಮಿಸಿ ನೋಡಿ!!

Family Secret: ಮದುವೆ (Marriage) ಎನ್ನುವುದು ಗಂಡು ಅಥವಾ ಹೆಣ್ಣಿನ ಬಾಳಿಗೆ ಒಂದು ದೊಡ್ಡ ತಿರುವು ಎಂದರೆ ತಪ್ಪಾಗದು. ದಾಂಪತ್ಯ ಜೀವನ ಎಂದಾಗ ಸತಿ ಪತಿಗಳ ನಡುವೆ ಯೋಚನೆ, ಜೀವನ ಶೈಲಿಯಲ್ಲಿ ಭಿನ್ನತೆ ಇರಬಹುದು. ಒಬ್ಬ ವ್ಯಕ್ತಿ ಇದ್ದ ಹಾಗೇ ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಕೆಲವರಿಗೆ ಮದುವೆ ಬಳಿಕ ಸುಖವಾದ (Happy Life)ಜೀವನ ಸಿಕ್ಕಿದರೆ ಮತ್ತೆ ಕೆಲವರಿಗೆ ಮದುವೆಯ ನಂತರದ ಜೀವನ ನರಕದಂತೆ ಭಾಸವಾಗಬಹುದು.ಮದುವೆಯ ಬಳಿಕ ಹೊಂದಿಕೊಂಡು ಹೋಗುವ ಸಂಗಾತಿ ಸಿಕ್ಕರೆ ಅದೃಷ್ಟ ಎಂದುಕೊಂಡರೆ, ಮದುವೆಯ ಬಳಿಕದ ಜೀವನ ಸುಖಮಯವಾಗಿಲ್ಲ ಎಂದಾದರೆ ಕೆಲವರು ಹಣೆಬರಹ ಎಂದುಕೊಂಡು ಸುಮ್ಮನಾಗುತ್ತಾರೆ.

ದಾಂಪತ್ಯ ಎಂಬ ವಿಚಾರಕ್ಕೆ ಬಂದಾಗ ಹೆಣ್ಣಿನ (women)ತಾಳ್ಮೆ, ಹೊಂದಾಣಿಕೆ, ಸಂಬಂಧದ ಕೊಂಡಿಯನ್ನು ನಿಭಾಯಿಸಿಕೊಂಡು ಹೋಗುವ ಮಡದಿಗೆ(Wife) ಪತಿಯ(Husband) ಸಹಕಾರ ಕೂಡ ಅಷ್ಟೇ ಮುಖ್ಯ. ಸಂಸಾರದಲ್ಲಿ ಕಷ್ಟ- ಸುಖ, ನೋವು-ನಲಿವು ಇದ್ದಾಗ ಅದನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಕಲೆ ಕರಗತ ಮಾಡಿಕೊಂಡರೆ ಸಾಕು. ಸಂಸಾರ( family) ಎಂಬ ಬಂಡಿಯನ್ನು ಸರಾಗವಾಗಿ ಯಾವುದೇ ಸಮಸ್ಯೆ(Problems) ಎದುರಾದರು ಮುನ್ನಡೆಸಿಕೊಂಡು ಹೋಗುವಲ್ಲಿ ಪುರುಷರ ಪಾತ್ರದಷ್ಟೇ ಮಹಿಳೆಯ ಪಾತ್ರ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಗಂಡ ಹೆಂಡತಿ ಎಂದ ಮೇಲೆ ಕೋಪ, ಜಗಳ ಮಾಮೂಲಿ. ಆದರೆ, ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಎಂಬಂತೆ ಇದ್ದರೆ ಚೆನ್ನ. ಇಲ್ಲ ಎಂದಾದರೆ ಕೋಪ ಮುನಿಸು ಹೆಚ್ಚಾಗಿ ವೈಮನಸ್ಸು ಉಂಟಾಗಬಹುದು.

ಜಗಳ, ಹಠದ ವಿಷಯದಲ್ಲಿ ಪುರುಷರು ಬೇಗ ಕೋಪ ಮುರಿದು ಮಾತಾಡುವ ಪ್ರಯತ್ನ ನಡೆಸಿದರು ಕೂಡ ಮಹಿಳೆಯರು ಕೋಪದ ವಿಷಯದಲ್ಲಿ ಒಂದು ಕೈ ಮುಂದು ಎಂದರೂ ತಪ್ಪಾಗಲಾರದು. ಮುನಿಸಿಕೊಂಡ ಪತ್ನಿಯನ್ನು ಹೊಗಳಿ ಕೊಂಡಾಡಿ ಆಕೆಯ ಮನ ಗೆಲ್ಲುವ ಪ್ರಯತ್ನ ನಡೆಸುವುದು ಸುಲಭದ ಮಾತಲ್ಲ. ಹಾಗಿದ್ದರೆ ನಿಮ್ಮ ಮುದ್ದಿನ ಮಡದಿ ಮುನಿಸಿಕೊಂಡರೆ ಆಕೆಯ ಕೋಪವನ್ನು ತಗ್ಗಿಸಲು ಏನು ಮಾಡೋದು? ಎಂದು ನೀವು ಯೋಚಿಸುತ್ತಿದ್ದರೆ ನಿಮಗೆ ನಾವು ಕೆಲ ಸರಳ ಸಲಹೆ( Family Secret)ಹೇಳ್ತೀವಿ ಕೇಳಿ!

ಯಾರು ಕೂಡ ಸುಮ್ಮನೇ ಮುನಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಕೋಪ ಬರುವುದು ಸಹಜ. ಸಣ್ಣ ಪುಟ್ಟ ವಿಚಾರಕ್ಕೂ ಜಗಳ ತಕರಾರು ಮಾಡುವ ಬದಲಿಗೆ ಆಕೆಯ ಕೆಲಸಗಳಿಗೆ ನೆರವಾಗುವ ಪ್ರಯತ್ನ ಮಾಡಿ. ಮನೆ, ಮಕ್ಕಳು ಸಂಸಾರ ಎಂದು ಹಗಲಿರುಳು ಮನೆಯವರ ಬಗ್ಗೆ ಚಿಂತೆ ಮಾಡುವ ಮಡದಿಯ ಇಷ್ಟ ಕಷ್ಟಗಳ ಬಗ್ಗೆ ಗಮನ ಕೊಡಿ. ಮನೆಯವರ ಖುಷಿಗಾಗಿ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನ ಬದಿಗಿಡುವ ಆಕೆ ನಿಮ್ಮಿಂದ ಹೆಚ್ಚೇನು ಬಯಸುವುದಿಲ್ಲ. ನಿಮ್ಮ ಒಂದು ಹೊಗಳಿಕೆಯ ಮಾತಿನಿಂದ ಆಕೆಯನ್ನು ಖುಷಿ ಪಡಿಸಬಹುದು. ತನ್ನ ಮಕ್ಕಳು ಬಯಸಿದ್ದನ್ನು ಕೊಡಿಸುವಾಗ ಆಕೆಯ ಇಷ್ಟಗಳನ್ನ ಪಕ್ಕಕ್ಕಿರಿಸಿ ಮನೆಯವರ ಮೊಗದಲ್ಲಿ ಖುಷಿ ಕಾಣಲು ತನ್ನ ಖುಶಿ, ಆಸೆಗಳನ್ನೂ ತ್ಯಾಗ ಮಾಡುವ ಮಡದಿಗೆ ನೀನು ಎಲ್ಲರ ಪಾಲಿನ ಪ್ರೀತಿಗೆ ಅರ್ಹಳು ಎಂದು ಒಂದು ಒಳ್ಳೆಯ ಮಾತಾಡಿ.

ಒಂದು ಮನೆಯನ್ನು ಸಂಸಾರದಲ್ಲಿ ಅದೆಷ್ಟೇ ಸಮಸ್ಯೆ ಇದ್ದರೂ ನಿಭಾಯಿಸಿಕೊಂಡು ಹೋಗುವುದು ಮಹಿಳೆಯ ಶಕ್ತಿ ಬುದ್ಧಿವಂತಿಕೆಗೆ ಹಿಡಿದ ಕೈಗನ್ನಡಿ. ಅದೇ ಸಂಸಾರ ಒಡೆದರೆ ಮನೆಯ ಘನತೆ ಗೌರವ ಬೀದಿ ಪಾಲಾಗುತ್ತದೆ. ಹೀಗಾಗಿ, ಮನೆಯ ಗೌರವ ಕಾಪಾಡುವಲ್ಲಿ ಪತಿ -ಪತ್ನಿಯ ಇಬ್ಬರ ಸಹಕಾರ ಅತ್ಯಗತ್ಯ. ಪತ್ನಿಯ ಘನತೆ, ಗೌರವ ಕಾಪಾಡೋದು ಪತಿಯಾದವನ ಕರ್ತವ್ಯವಾಗಿದ್ದು, ಜೀವನದ ಪ್ರತಿ ಹಂತದಲ್ಲೂ ಪತ್ನಿಗೆ ಪತಿಯ ಪ್ರೋತ್ಸಾಹ ಮುಖ್ಯ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಆಕೆಯ ವಿದ್ಯಾರ್ಹತೆಗೆ ಆಸಕ್ತಿಗೆ ಕೆಲಸ ಗಿಟ್ಟಿಸಿಕೊಳ್ಳಬೇಕು ತಾನು ತನ್ನ ಕಾಲ ಮೇಲೆ ನಿಲ್ಲಬೇಕು ಎಂಬ ಹಂಬಲವಿರುತ್ತದೆ. ಆಗ ಪತಿಯ ಪೋಷಕರು ಒಪ್ಪದೇ ಇದ್ದಾಗ ಆಕೆಯ ಕನಸು ಆಸೆ ನೀರ ಮೇಲಿನ ಗುಳ್ಳೆಯಂತೆ ಆಗಿ ಬಿಡುತ್ತೆ. ಆಗ ಪತಿಯ ಸಹಕಾರ ಇದ್ದರೆ ಆಕೆಯ ಕನಸನ್ನೂ ನನಸು ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ.

ಮನೆಯ ಒಳಗಿನ ಕೆಲಸ, ಸಂಸಾರದ ಜೊತೆಗೆ ಹೊರಗೆ ದುಡಿಯುವುದು ಎಂದರೆ ಸುಲಭವಲ್ಲ. ಆಗ ಪತಿ ಆಕೆಯ ಕೆಲಸಗಳಿಗೆ ನೆರವಾದರೆ ಆಕೆಯ ಕೆಲಸದ ಹೊರೆ ಕೊಂಚ ಮಟ್ಟಿಗೆ ತಗ್ಗುತ್ತದೆ. ಮನೆಯ ಒಳಗಿನ ಎಲ್ಲ ಕೆಲಸ ನಿಭಾಯಿಸುವ ಮಡದಿಗೆ ನೀನು ಬುದ್ದಿವಂತೆ ಎಂಬ ಹೊಗಳಿಕೆಯ ಮಾತುಗಳನ್ನು ಹೇಳಿ. ಆಕೆ ಮನೆಯ ಜವಾಬ್ದಾರಿ ಸಂಭಾಲಿಸಿ ಹೊರಗೆ ದುಡಿದು ಬಂದಾಗ ತುಚ್ಚವಾಗಿ ಮಾತಾಡುವ ಬದಲಿಗೆ ಆಕೆ ಮಾಡುವ ಕೆಲಸ ಸಣ್ಣದೇ ಆಗಿದ್ದರೂ ಹೆಮ್ಮೆ ಪಡುವ ಮೆಚ್ಚುಗೆಯ ಮಾತುಗಳನ್ನು ಹೇಳಿ. ಪತಿಯ ಸಂಬಳದ ಜೊತೆಗೆ ಪತ್ನಿಯ ಆರ್ಥಿಕ ಸಹಾಯ ಕೂಡ ಕೆಲವೊಮ್ಮೆ ಕಷ್ಟದ ಸಮಯದಲ್ಲಿ ನೆರವಿಗೆ ಬರಬಹುದು.ಹೀಗಾಗಿ ಮೆಚ್ಚುಗೆ ಸಲ್ಲಿಸೋದು ತಪ್ಪಲ್ಲ.

ಮನೆ ಸಂಸಾರ ಎಂದು ನಾಲ್ಕು ಗೋಡೆಗಳ ನಡುವೆ ಇರುವಾಗ ಎಷ್ಟೋ ಬಾರಿ ಆಕೆಯ ಒಳಗೆ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಆಗದೇ ಇರಬಹುದು. ಆಕೆಯಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ ವಿದ್ದರು ಮನೆಯವರಿಗಾಗಿ ತ್ಯಾಗ ಮಾಡುವ ಮನೋಭಾವ ಇರುತ್ತದೆ. ಆದರೆ, ಇಂತಹ ಸಂದರ್ಭ ಪತಿಯಾದವನು ಆಕೆಯ ಪ್ರತಿಭೆಗೆ ನೆರಳಾಗಿ ಬೆಂಬಲ ಕೊಟ್ಟರೆ ಸಾಕು. ಆಕೆ ಅಂದುಕೊಂಡದನ್ನು ಸಾಧಿಸಬಹುದು.

ಜಗತ್ತಿನಲ್ಲಿ ಪ್ರತಿಯೊಬ್ಬ ಮಹಿಳೆಯು ಖಂಡಿತ ಓರ್ವ ಶ್ರೇಷ್ಠ ತಾಯಿಯಾಗಿರುತ್ತಾಳೆ. ಆದರೆ ಕೆಲವೊಂದು ಬಾರಿ ಆಕೆಗೆ ತಾನು ಒಳ್ಳೆಯ, ಸಮರ್ಥ ತಾಯಿಯಲ್ಲ ಎಂಬ ಭಾವನೆ ಮೂಡಿ ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತಾಳೆ. ಮಕ್ಕಳ ಗಲಾಟೆ, ಮಕ್ಕಳನ್ನು ಆಕೆಯಿಂದ ನಿಭಾಯಿಸಲು ಸೆಣಸಾಡುವ ಸಂದರ್ಭ ನೀನು ಶ್ರೇಷ್ಠ ತಾಯಿ ಎಂದು ಸ್ಪೂರ್ತಿದಾಯಕ ಮಾತುಗಳನ್ನು ಆಡಿದರೆ ಸಾಕು. ಮಹಿಳೆ ಸಣ್ಣ ಪುಟ್ಟ ವಿಚಾರದಲ್ಲಿ ಖುಶಿ ಕಾಣಲು ಬಯಸುತ್ತಾಳೆ. ಹೀಗಾಗಿ, ಸಣ್ಣ ಪುಟ್ಟ ಸರ್ಪ್ರೈಸ್ ನೀಡಿ ಖುಷಿ ಪಡಿಸಬಹುದು.

ಇದನ್ನೂ ಓದಿ: Love Proposal Video : ತರಗತಿಯಲ್ಲಿ ಎಲ್ಲರೆದುರೇ ವಿದ್ಯಾರ್ಥಿಯೋರ್ವನಿಂದ ಪ್ರೇಮ ನಿವೇದನೆ ? ನಂತರ ನಡೆದದ್ದು ತಿಳಿದರೆ ನಕ್ಕು ನಕ್ಕು ಸುಸ್ತಾಗ್ತೀರ!

Leave A Reply

Your email address will not be published.