A village of celibates : ಅಯ್ಯೋ ದೇವ್ರೇ 50 ವರ್ಷಗಳಿಂದ ಈ ಊರಲ್ಲಿ ಮದುವೆಗಳೇ ನಡೆದಿಲ್ಲ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Bachelor :ಮದುವೆ(Marriage) ವಯಸ್ಸು ಬಂತೆಂದರೆ ಸಾಮಾನ್ಯವಾಗಿ ಹುಡುಗನಾಗಲಿ, ಹುಡುಗಿಯಾಗಲಿ ಮದುವೆ ಆಗಲೇ ಬೇಕು. ಆಗೇ ಆಗುತ್ತಾರೆ. ಅದು ಪ್ರಕೃತಿ ನಿಯಮ. ಎಲ್ಲೋ ಕೆಲವೊಬ್ಬರು ಆ ಜನ್ಮ ಬ್ರಹ್ಮಚಾರಿಗಳಾಗಿ (Bachelor) ಉಳಿಯುತ್ತಾರೆ. ಆದರಿಂದು ಮದವೆಯೇ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಯಾಕೆಂದರೆ ಗಂಡಿಗೆ ಹೆಣ್ಣು ಕೊಡೋರೇ ದಿಕ್ಕಿಲ್ಲದಂತಾಗಿದ್ದಾರೆ. ಅದ್ರಲ್ಲೂ ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆ ಅಂದ್ರೆ ಅದು ಅಪರೂಪ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಒಂದು ಹಳ್ಳಿಯಲ್ಲಿ ಮಾತ್ರ ಮದವೆಯ ಸಂಭ್ರಮ ನಡೆದು ಎಷ್ಟೋ ವರ್ಷಗಳಾಗಿವೆಯಂತೆ. ಮದುವೆ ಅಂದ್ರೆ ಏನು ಅಂತ ಕೇಳೋ ಕಾಲ ಬಂದಿದ್ಯಂತೆ!

ಹೌದು, ಭಾರತ (India) ದ ಅದೆಷ್ಟೂ ಹಳ್ಳಿಗಳಲ್ಲಿ ಮದುವೆ ವಯಸ್ಸು ಮೀರಿದರೂ ಇನ್ನೂ ಮದುವೆ (Marriage) ಯಾಗದ ಅನೇಕ ಹುಡುಗರಿದ್ದಾರೆ. ಕೆಲವು ಹಳ್ಳಿಗಳಲ್ಲಿ ವರ್ಷಕ್ಕೆ ಒಂದೋ ಎರಡೋ ಮದುವೆ ನಡೆಯುತ್ತಿರುತ್ತದೆ. ಆದ್ರೆ ಬಿಹಾರದ ಪಾಟ್ನಾ(Patna)ದಿಂದ 300 ಕಿಲೋಮೀಟರ್ ದೂರದಲ್ಲಿರುವ, ಕೈಮೂರ್(Kaimure) ಜಿಲ್ಲೆಯ ತೆಹಸಿಲ್ ಅಧೌರಾದ ಬರ್ವಾನ್ ಕಾಲಾ ಎಂಬ ಗ್ರಾಮ ಈ ಹಳ್ಳಿಯಲ್ಲಿ ಮದುವೆ ನಡೆಯದೆ ಅದೆಷ್ಟೋ ವರ್ಷವಾಗಿದೆ. ಇದನ್ನು ಬ್ರಹ್ಮಚಾರಿಗಳ ಊರು ಎಂದೇ ಕರೆಯಲಾಗುತ್ತದೆ. ಇಲ್ಲಿ ಮಂಗಳ ವಾದ್ಯ ಮೊಳಗಿ ಎಷ್ಟೋ ವರ್ಷ ಕಳೆದಿದೆ.

ಅಂದಹಾಗೆ ಇಲ್ಲಿನ ಹುಡುಗರು ಬ್ರಹ್ಮಚಾರಿಗಳೇನಲ್ಲ. ಬ್ರಹ್ಮಚರ್ಯವನ್ನು ಪಾಲಿಸುವವರೂ ಅಲ್ಲ. ಇಲ್ಲಿ ಅದನ್ನು ಪಾಲಿಸಬೇಕೆಂಬ ನಿಯಮವೇನೂ ಇಲ್ಲ. ಈ ಹಳ್ಳಿಯ ಹುಡುಗರಿಗೆ ಮದುವೆ ಅಂದ್ರೆ ಇಷ್ಟವೆ. ಮದುವೆಯಾಗಲು ಸದಾ ಇಷ್ಟಪಡುತ್ತಾರೆ. ಆದ್ರೆ ಮದುವೆಯಾಗೋಕೆ ಹೆಣ್ಮಕ್ಕಳು ಸಿಗ್ತಿಲ್ಲ. ಹೆಣ್ಣಿಲ್ಲದೆ ಮದುವೆ ಹೇಗೆ ಆಗೋದು? ಹೆಣ್ಣು ಕೊಡೋರೇ ದಿಕ್ಕಿಲ್ಲದಂತಾಗಿದ್ದಾರೆ. ಹೀಗಾಗಿ ಇಲ್ಲಿನ್ನು ಸುಮಾರು 121 ಪುರುಷರಿಗೆ ಮದುವೆನೇ ಆಗಿಲ್ಲ! ಮದುವೆ ನಡೆದದ್ದೂ ಕೂಡ ಎಷ್ಟೋ ವರ್ಷಗಳ ಹಿಂದೆ.

ಇಲ್ಲಿ ಸುಮಾರು 50 ವರ್ಷಗಳಿಂದ ಯಾವುದೇ ಮದುವೆ ನಡೆದಿರಲಿಲ್ಲವಂತೆ. ಇತ್ತೀಚೆಗೆ 6 ವರುಷಗಳ ಹಿಂದೆ ಅಂದರೆ 2017ರಲ್ಲಿ ಒಂದು ಮದುವೆ ನಡೆದಿತ್ತು ಎನ್ನಲಾಗಿದೆ. ಯಾಕೆಂದರೆ ಈ ಊರಿನ ಹುಡುಗನನ್ನು ಮದುವೆಯಾಗಲು ಸುತ್ತಮುತ್ತಲ ಊರಿನ ಹುಡುಗಿಯರು ಹಿಂದೇಟು ಹಾಕ್ತಾರೆ. ಈ ಊರಲ್ಲಿ ಮದುವೆಯಾಗೋದು ಸುಲಭವಲ್ಲ. ಹುಡುಗ ಮದುವೆಗೆ ಮುನ್ನವೇ ಗ್ರಾಮವನ್ನು ತೊರೆಯಬೇಕು. ಯಾವುದಾದ್ರೂ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳಬೇಕು. ಕಾರಣ ಈ ಗ್ರಾಮದಲ್ಲಿ ಮದುವೆಗೆ ಅವಶ್ಯವಿರುವ ಸೌಲಭ್ಯವಿಲ್ಲ.

ಇನ್ನು ಮೊದಲೇ ಹೇಳಿದಂತೆ ಸುಮಾರು 50ವರ್ಷಗಳ ನಂತರ ಅಂದ್ರೆ 2017ರಲ್ಲಿ ನಡೆದ ವಿವಾಹ ಸಮಾರಂಭವು ಅನೇಕ ವರ್ಷಗಳ ನಂತರ ನಡೆಯುತ್ತಿರುವ ಮದುವೆ ಎಂಬ ಕಾರಣಕ್ಕೆ ಬಹಳ ಅದ್ಧೂರಿಯಾಗಿ ನೆರವೇರಿಸಿದ್ಧರು. ವರನ ಸ್ವಾಗತವು ಹೀರೋಗಿಂತ ಕಡಿಮೆಯಿರಲಿಲ್ಲ. ಗ್ರಾಮಸ್ಥರು ಗುಡ್ಡ-ಕಾಡು ಕಡಿದು 6 ಕಿ.ಮೀ ರಸ್ತೆ ಮಾಡಿ, ಮದುವೆಗೆ ತಯಾರಿ ನಡೆಸಿದ್ದರು. ಆದರೆ ನಂತ್ರ ಯಾವುದೇ ಮದುವೆ ಇಲ್ಲಿ ನಡೆದಿಲ್ಲ.

ಈ ಗ್ರಾಮದ ಹುಡುಗರನ್ನು ಮದುವೆ ಯಾಕೆ ಆಗಲ್ಲ ಗೊತ್ತಾ? ಈ ಹಳ್ಳಿಯ ಹುಡುಗರು ಮದುವೆಯಾಗದೆ ಇರೋದಕ್ಕೆ ಅನೇಕ ಕಾರಣವಿದೆ. ಈ ಗ್ರಾಮವನ್ನು ಬಿಹಾರದ ಹಿಂದುಳಿದ ಹಾಗೂ ಅವಿವಾಹಿತ ಗ್ರಾಮವೆಂದು ಪರಿಗಣಿಸಲಾಗಿದೆ. ಇಲ್ಲಿ ಸರಿಯಾದ ಮೂಲಸೌಕರ್ಯವಿಲ್ಲ, ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ. ಗ್ರಾಮಕ್ಕೆ ಬರಲು 2 ಕಿ.ಮೀ ನಡೆಯಬೇಕು. ಹಾಗಾಗಿ ಇಲ್ಲಿಗೆ ಹೋಗಲು ಹರಸಾಹಸ ಮಾಡ್ಬೇಕು. ಸರಿಯಾಗಿ ಶಾಲೆಯಿಲ್ಲ, ಶಿಕ್ಷಣ ವ್ಯವಸ್ಥೆ ಇಲ್ಲ. ಇಲ್ಲಿನ ಜನರ ಆರ್ಥಿಕ ಸ್ಥಿತಿ ತುಂಬಾ ಕೆಳಮಟ್ಟದಲ್ಲಿದೆ. ಇಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ನೀರಿಗಾಗಿ ಇಲ್ಲಿನ ಜನರು 1.5 ಕಿಲೋಮೀಟರ್ ನಡೆಯಬೇಕು. ಹಳ್ಳಿಯಿಂದ ಪೊಲೀಸ್ ಸ್ಟೇಷನ್ 45 ಕಿಲೋಮೀಟರ್ ದೂರದಲ್ಲಿದೆ. ಈ ಎಲ್ಲ ಕಾರಣಗಳಿಂದಾಗಿ ಇಲ್ಲಿನ ಹುಡುಗರಿಗೆ ಮದುವೆಯಾಗ್ತಿಲ್ಲ.

ಇದನ್ನೂ ಓದಿ: BJP is world’s most important party : ವಿಶ್ವದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ! 2024ರಲ್ಲೂ ಮೋದಿ ಪ್ರಧಾನಿ ಎಂದ ಅಮೇರಿಕಾ ವರದಿ!

Leave A Reply

Your email address will not be published.