LGBTQ : ಈ ದೇಶದಲ್ಲಿ ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ ಕಟ್ಟಿಟ್ಟ ಬುತ್ತಿ: ವಿವಾದಾತ್ಮಕ ಕಾನೂನು ಹೊಡಿಸಿದ ದೇಶ
LGBTQ : ಸದ್ಯ ಭಾರತದಲ್ಲಿ ಸಲಿಂಗಿಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಇವರ ಮುದುವೆಗಳನ್ನು ಸಿಂಧು ಎನ್ನಲು ಹಿಂದೆ ಮುಂದೆ ನೋಡುತ್ತಿದೆ. ಆದರೆ ಈ ನಡುವೆಯೇ ಉಗಾಂಡ (Uganda) ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತ (LGBTQ) ಸಮುದಾಯದ ವಿರುದ್ಧ ವಿವಾದಾತ್ಮಕ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ.
ಹೌದು, ಉಗಾಂಡ (Uganda) ದೇಶದಲ್ಲಿ ಸಲಿಂಗಿಗಳ ಕುರಿತಾಗಿ ಒಂದು ವಿವಾದಾತ್ಮಕ ಕಾನೂನನ್ನು ಹೊರಡಿಸಲಾಗಿದ್ದು, ಸಲಿಂಗಿಗಳ ಸಂಬಂಧಗಳಿಗೆ, ಸಲಿಂಗಿಗಳು ಎಂದು ಸ್ವತಃ ಘೋಷಿಸಿಕೊಂಡವರಿಗೆ ಇನ್ನು ಮುಂದೆ 10 ವರ್ಷ ಜೈಲು ಶಿಕ್ಷೆ ಹಾಗೂ ಮರಣದಂಡನೆಯಂತಹ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು.
ಈ ಮಸೂದೆಯ ಅನ್ವಯ ಅಧಿಕಾರಿಗಳಿಗೆ, ಸಲಿಂಗ ಸಂಬಂಧದಲ್ಲಿರುವವರನ್ನು ಗುರುತಿಸಿ ವರದಿ ಮಾಡಲು ಅವಕಾಶ ನೀಡಲಾಗಿದೆ. ಎಲ್ಜಿಬಿಟಿ ಸಮುದಾಯಗಳ ಹಕ್ಕುಗಳಿಗೆ ಹೋರಾಡುವ ಹಾಗೂ ಅಂತಹ ಸಂಸ್ಥೆಗಳಿಗೆ ಬೆಂಬಲ ನೀಡಿ ಹಣಕಾಸಿನ ನೆರವು ನೀಡುವ ವ್ಯಕ್ತಿಗಳನ್ನು ಅಥವಾ ಸಂಸ್ಥೆಗಳನ್ನು ಕೂಡ ಶಿಕ್ಷೆಗೆ ಗುರಿಪಡಿಸಲು ಸೂಚಿಸಲಾಗಿದೆ.
ಮಸೂದೆ ಮಂಡಿಸಿರುವ ಶಾಸಕ ಅಸುಮಾನ್ ಬಸಲಿರ್ವಾ ಅವರು ಮಾತನಾಡಿ “ಚರ್ಚ್ ಸಂಸ್ಕಂತಿ ರಕ್ಷಿಸುವ ಗುರಿಯಿಂದ ಮಸೂದೆ ರಚಿಸಿ ಮಂಡಿಸಲಾಗಿದೆ. ಕೌಟುಂಬಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದು ಲೈಂಗಿಕ ಅಶ್ಲೀಲತೆಯಿಂದ ದೇಶವನ್ನು ಕಾಪಾಡಬೇಕಿದೆ. 389 ಸದಸ್ಯರು ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಯನ್ನು ಅಧ್ಯಕ್ಷ ಯೊವೆರೆ ಮುಸೆವೆನಿಯವರ ಸಹಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಮಸೂದೆಯನ್ನು ವಿರೋಧಿಸಿ ಕಂಪಾಲಾ (Kampala) ಮೂಲದ ವಕೀಲೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ (Lawyer and human rights activist) ಸಾರಾ ಕಸಂಡೆ ಟ್ವೀಟ್ ಮಾಡಿ, ಉಗಾಂಡದ ಇತಿಹಾಸದಲ್ಲಿ ದುರಂತದ ದಿನವಾಗಿದೆ. ದ್ವೇಷಕ್ಕೆ ಮಹತ್ವ ಕೊಟ್ಟು ಎಲ್ಜಿಬಿಟಿಐಕ್ಯೂ ಸಮುದಾಯದ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನಾಗಿದೆ ಎಂದು ಟೀಕಿಸಿದ್ದಾರೆ.
ಅಂದಹಾಗೆ ಈಗಾಗಲೇ ಆಫ್ರಿಕನ್(African) ದೇಶಗಳು ಸಲಿಂಗ ಸಂಬಂಧಗಳನ್ನು ನಿಷೇಧಿಸಿ ಕಾನೂನು ರೂಪಿಸಿವೆ. ಆದರೆ ನೂತನ ಮಸೂದೆಯು ಹಿಂದಿನ ನಿಯಮಗಳನ್ನು ಮತ್ತಷ್ಟು ಭದ್ರಪಡಿಸುತ್ತವೆ.