EPFO Withdraw Cash : ಈ 8 ಸಂದರ್ಭದಲ್ಲಿ ಪಿಎಫ್‌ ವಿತ್‌ಡ್ರಾ ಮಾಡಲು ಸಾಧ್ಯ!

EPFO Withdraw Cash :ಭಾರತೀಯ ನಾಗರಿಕರಿಗೆ ಉದ್ಯೋಗಿಗಳ(work) ಭವಿಷ್ಯನಿಧಿಯನ್ನು ನಿರ್ವಹಣೆ ಮಾಡುವ ಸಂಸ್ಥೆಯಾದ ಇಪಿಎಫ್ಒ (EPFO) ನಿಧಿ ಹಣಕಾಸು ಸುರಕ್ಷತೆಯನ್ನು ಜನರಿಗೆ ನೀಡುತ್ತದೆ. ಈ ಯೋಜನೆಯಲ್ಲಿ ನಾವು ಹಣವನ್ನು ಹೂಡಿಕೆ ಮಾಡುವುದು ಮಾತ್ರವಲ್ಲದೆ ನಾವು ಹೂಡಿಕೆ ಮಾಡಿದ ಮೊತ್ತವು ತುಂಬಾನೇ ಸುರಕ್ಷಿತವಾಗಿರುತ್ತದೆ.

ನೀವು ಉದ್ಯೋಗ, ಅಂದರೆ ಕೆಲಸ ಮಾಡುವ ಸಂಸ್ಥೆ ಅಥವ ಉದ್ಯೋಗಿಗಳಿಗೂ ಈ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬಹುದು. ಈ ನಿಧಿಯು ನಿಮ್ಮ ಕೆಲಸದ ನಿವೃತ್ತಿಯ ಬಳಿಕ ನೀಡುವ ಸುರಕ್ಷತೆಯಾಗಿದೆ (safe). ಈ ಹೂಡಿಕೆಯಿಂದ (investment) ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಇಪಿಎಫ್‌ (EPF) ಹಣ ಉಳಿತಾಯ (savings) ಯೋಜನೆಯಾಗಿದೆ. ನಿವೃತ್ತಿಗೂ ಮುನ್ನ ಅಂದರೆ ನೀವು ಕೆಲಸ ಮಾಡುವಾಗ ಕೆಲವೊಂದು ಸಂದರ್ಭಗಳಲ್ಲಿ ಹಣವನ್ನು ವಿತ್‌ಡ್ರಾ(EPFO Withdraw Cash) ಮಾಡುವ ಅವಕಾಶವಿದೆ. ಹಣವನ್ನು ವಿತ್ ಡ್ರಾ ಮಾಡುವುದಕ್ಕಾಗಿ ಕೆಲವು ನಿಯಮಗಳು(rules) ಅನ್ವಹಿಸುತ್ತದೆ.

ಯಾವ ರೀತಿಯ ನಿಯಮಗಳು ಇದೆ ಎಂದು ನೋಡೋಣ ಬನ್ನಿ; ಸಾಮಾನ್ಯವಾಗಿ ಹೇಳಬೇಕೆಂದರೆ ಒಬ್ಬ ವ್ಯಕ್ತಿಯು ತನ್ನ ಕೆಲಸ ಮುಗಿದ ನಂತರ ಅಂದರೆ ನಿವೃತ್ತಿ (Retirement) ಹೊಂದಿದ ನಂತರ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶ ಇರುತ್ತದೆ. ಕೆಲವು ಸಂದರ್ಭದಲ್ಲಿ ಪ್ರಭುದ್ಧತೆಗೂ ಮುನ್ನ ನೀವು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ನೀವು 8 ಸಂದರ್ಭದಲ್ಲಿ ಇಪಿಎಫ್‌ ಮೊತ್ತವನ್ನು(money) ವಿತ್ ಡ್ರಾ ಮಾಡುವ ಅವಕಾಶವಿದೆ.

ಪಿಎಫ್‌ ಖಾತೆಯನ್ನು ಹೊಂದಿರುವ ವ್ಯಕ್ತಿಯು ನಿರುದ್ಯೋಗಿಯಾದರೆ ಪಿಎಫ್ ಮೊತ್ತವನ್ನು ನಡುವಲ್ಲಿ ವಿತ್‌ಡ್ರಾ ಮಾಡುವ ಅವಕಾಶವಿರುತ್ತದೆ. ಒಂದು ತಿಂಗಳಿಗೂ ಅಧಿಕ ಕಾಲ ನಿರುದ್ಯೋಗಿಯಾಗಿದ್ದರೆ, ಶೇಕಡ 75ರಷ್ಟು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನು ನೀಡಲಾಗುತ್ತದೆ. 2 ತಿಂಗಳಿಗೂ ಅಧಿಕ ಕಾಲ ನಿರುದ್ಯೋಗಿಗಳಾಗಿದ್ದರೆ, ನೀವು ಉಳಿದ ಶೇಕಡ 25ರಷ್ಟು ಮೊತ್ತವನ್ನು ಕೂಡಾ ವಿತ್‌ಡ್ರಾ ಮಾಡುವ ಅವಕಾಶವನ್ನು ಇದೆ.

ಹಾಗೆಯೇ ಇತ್ತೀಚೆಗೆ ಮಾಡಿದ ನಿಯಮದ ಬಳಿಕ ಪಿಎಫ್‌ ಮೊತ್ತದಿಂದ ಶೇಕಡ 50ರಷ್ಟು ಮದುವೆಯ ಖರ್ಚಿಗಾಗಿ ಬಳಕೆ ಮಾಡಬಹುದಾಗಿದೆ. ಈ ಪಿಎಫ್ ಅನ್ನು ಪಡೆದುಕೊಳ್ಳುವ ವಧು (bride) ಅಥವಾ ವರ ಪಿಎಫ್ ಖಾತೆ ಹೊಂದಿರುವವರ ಪುತ್ರ, ಪುತ್ರಿ, ಸಹೋದರ, ಸಹೋದರಿಯಾಗಿರಬೇಕಾಗುತ್ತದೆ. ಆದರೆ 7 ವರ್ಷಗಳವರೆಗೆ ಯಾವುದೇ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ವಿಶೇಷ ಚೇತನ ವ್ಯಕ್ತಿಗಳು ಪಿಎಫ್‌ ನಿಯಮ ಪ್ರಕಾರ 6 ತಿಂಗಳ ಮೌಲ್ಯದ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಅಥವಾ ಬಡ್ಡಿಯೊಂದಿಗೆ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಯಾವುದೇ ಅಪಘಾತದಿಂದ ಏನಾದರೂ ಅಂಗಾಂಗಗಳ ಬಗ್ಗೆ ಸಮಸ್ಯೆ ಉಂಟಾದಾಗ ಈ ಮೊತ್ತವನ್ನು ವಿತ್‌ಡ್ರಾ ಮಾಡಬಹುದಾಗಿದೆ.

ನೀವು ನೀಡಿದ ಒಟ್ಟು ಮೊತ್ತದಲ್ಲಿ ಶೇಕಡ 50ರಷ್ಟು ಮೊತ್ತವನ್ನು ನಿಮ್ಮ ಮಕ್ಕಳ ಉನ್ನತ ಕಲಿಕೆಗಾಗಿ ಬಳಕೆ ಮಾಡಬಹುದು. ಅಂದರೆ ಹತ್ತನೇ ತರಗತಿಯ (10th class) ಬಳಿಕದ ಶಿಕ್ಷಣಕ್ಕೆ ಪಿಎಫ್ ಮೊತ್ತವನ್ನು ಬಳಕೆ ಮಾಡಬಹುದು. ಕನಿಷ್ಠ 7 ವರ್ಷಗಳ ಕಾಲ ಇಪಿಎಫ್(EPF) ಖಾತೆಗೆ ಹೂಡಿಕೆ ಮಾಡಿದ ಬಳಿಕ ಮಾತ್ರವೇ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ.

ಪಿಎಫ್‌ ಅಥವಾ ಇಪಿಎಫ್ ಖಾತೆ ಹೊಂದಿರುವವರು ಬಹಳ ಕಷ್ಟದ ಸಮಯದಲ್ಲಿ ಅಥವಾ ಅನಿವಾರ್ಯವಾಗಿ ಪಿಎಫ್ ಮೊತ್ತವನ್ನು ವಿತ್‌ಡ್ರಾ(withdraw) ಮಾಡುವ ಅವಕಾಶವಿದೆ. ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದಾಗ ಅಥವಾ ತಮ್ಮ ಕುಟುಂಬದವರ ಆರೋಗ್ಯದವರ (family health)ಆರೋಗ್ಯದ ಚಿಕಿತ್ಸೆಗಾಗಿ(health treatment) ಮೊತ್ತವನ್ನು ವಿತ್‌ಡ್ರಾ ಮಾಡಬಹುದು.

ಗೃಹ ಸಾಲದ( house debth) ಇಎಂಐ ಅನ್ನು ಮರುಪಾವತಿ ಮಾಡಲು ಸಂಪೂರ್ಣ ಮೊತ್ತವನ್ನು ಅಥವಾ 36 ತಿಂಗಳ ಮೊತ್ತವನ್ನು ವಿತ್‌ಡ್ರಾ(withdraw) ಮಾಡುವ ಅವಕಾಶವಿದೆ. ಈ ತರಹ ನೀವು ಮೊತ್ತವನ್ನು ವಿತ್ ಡ್ರಾ ಮಾಡಬೇಕಾದರೆ ನೀವು ಇಪಿಎಫ್ ಖಾತೆಗೆ ಕನಿಷ್ಠ 10 ವರ್ಷಗಳ ಕಾಲ ಇಪಿಎಫ್‌ ಹೂಡಿಕೆ ಮಾಡಬೇಕಾಗುತ್ತದೆ.

ಹೊಸ ಜಾಗವನ್ನು(site) ಖರೀದಿ ಮಾಡಲು ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಾಗಿದೆ. ಇನ್ನು ನೀವು ನಿಮ್ಮ ಮನೆಯನ್ನು ನವೀಕರಣ ಮಾಡಲು ಕೂಡಾ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ. ವಸತಿ ಆಸ್ತಿಯು ಪಿಎಫ್ ಖಾತೆಯನ್ನು ಹೊಂದಿರುವವರು, ಅವನ ಅಥವಾ ಅವಳ ದಂಪತಿಯಿಂದ(couples) ಅಥವಾ ಅವರಿಬ್ಬರ ಹೆಸರಿನಲ್ಲಿ ಇರಬೇಕಾಗುತ್ತದೆ ಒಬ್ಬ ವ್ಯಕ್ತಿಯು ವಸತಿ (house)ಆಸ್ತಿಯನ್ನು ಪೂರ್ಣಗೊಳಿಸಿದ 5 ವರ್ಷಗಳ ನಂತರ 2ನೇ ಬಾರಿ ಮೊತ್ತ ವಿತ್‌ಡ್ರಾ ಮಾಡಬಹುದು. ಹಾಗೆಯೇ ಹೂಡಿಕೆ ಆರಂಭಿಸಿದ ಬಳಿಕ 10 ವರ್ಷದಲ್ಲಿ ಮೊತ್ತ ಹಿಂಪಡೆಯಬಹುದು. ಜನರು ಈ ರೀತಿ ಹಣವನ್ನು ವಿತ್ ಡ್ರಾ(withdraw) ಮಾಡುವ ಮೂಲಕ ತನಗೆ ಬಂದ ಸಮಸ್ಯೆಗಳಿಂದ ಪಾರಾಗಬಹುದು.

Leave A Reply

Your email address will not be published.