Holi Festival : ಹೋಳಿ ಹಬ್ಬವೇ ಕಂಟಕವಾಯ್ತಾ?! ಹುಡುಗಿ ಮೇಲೆ ಯುವಕ ಬಣ್ಣ ಎರಚಿದಕ್ಕಾಗಿ ಕಿಡ್ನಾಪ್, ಹಿಗ್ಗಾಮುಗ್ಗಾ ಥಳಿತ.!
Holi Festival : ಭಾರತದಾದ್ಯಂತ ಹೋಳಿ ಹಬ್ಬವನ್ನು (Holi Festival) ಸಂಭ್ರಮ ಸಡಗರದಿಂದ ಎಲ್ಲಾ ಕಡೆ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವೇ ಹೋಳಿ ಎಂದರೆ ತಪ್ಪಗಲಾರದು. ಇದೀಗ ಹೋಳಿ ಸಂಭ್ರಮದ ಬಣ್ಣವೇ ಕಂಟಕ ಎದುರಾದ ಘಟನೆಯೊಂದು ರಾಜ್ಯದಲ್ಲಿ ಬೆಳಕಿಗೆ ಬಂದಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳಿಸುವಂತೆ ಮಾಡಿದಂತೂ ನಿಜ.
ಕೋಲಾರ ತಾಲೂಕಿನ ಬೆಳಮಾರನಹಳ್ಳಿ ಗ್ರಾಮದಲ್ಲಿ ಹೋಳಿ ಹಬ್ಬದಂದು ಹುಡುಗಿಯ ಮೇಲೆ ಬಣ್ಣವನ್ನು ಹಾಕಿದನೆಂದು ಯುವಕನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿದೆ. ಬಣ್ಣ ಅಂದಾಗ ಯಾರೆಂದು ಮುಖ ನೋಡದೆ ಬಣ್ಣವನ್ನು ಒಬ್ಬರಿಗೊಬ್ಬರು ಎರಚುವುದು ಸಹಜ. ಅದರಲ್ಲೂ ಹೋಳಿ ಹಬ್ಬದಲ್ಲಂತೂ ಗುರುತು ಪರಿಚಯ ಇದ್ದರು ಎದುರು ಸಿಕ್ಕಾಗ ಓಡಿ ಹೋಗಿ ಬಣ್ಣವನ್ನು ಅವರಿಗೆ ಮೆತ್ತುವುದು ವಾಡಿಕೆಯಾಗಿದೆ.
ಕೋಲಾರ ತಾಲೂಕಿನ ಬೆಳಮಾರನಹಳ್ಳಿ ಗ್ರಾಮದ ಕಾಲೇಜು ಓದುತ್ತಿದ್ದ ಯುವಕನೊಬ್ಬ ಕಾಲೇಜು ಮುಗಿಸಿ ಬಸ್‌ನಲ್ಲಿ ಬರುವಾಗ ತಮ್ಮದೇ ಗ್ರಾಮದ ಯುವತಿಯ ಮೇಲೆ ಬಣ್ಣವನ್ನು ಹಾಕಿದ್ದಾನೆ. ಇದರಿಂದ ಸಿಟ್ಟುಕೊಂಡ ಹುಡುಗಿಯ ಕುಟುಂಬಸ್ಥರು ಬಣ್ಣ ಹಾಕಿದ ಯುವಕನ್ನು ಕರೆಸಿ ಶೆಡ್‌ನಲ್ಲಿ, ಗ್ರಾಮದ ಹೊರಗಿರುವ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಬಿ.ಸಿ.ಮಧು ಎಂದು ಗುರುತಿಸಲಾಗಿದೆ. ಈತ ಎಷ್ಟೇ ಕ್ಷಮೆಯಚಿಸಿದ್ರು ಮಾನವೀಯತೆ ಮರೆತು ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯೂ ಮಾ.17ನೇ ನಡೆದಿದೆ. ಘಟನೆ ಸಂಬಂಧಿಸಿ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ