Govt Scheme For Marriage : ಗಮನಿಸಿ, ಪೋಷಕರೇ, ನಿಮ್ಮ ಮಗಳಿಗೆ ಸರ್ಕಾರ ನೀಡುತ್ತೇ 51,000 ರೂ.ಗಳು! ಹೇಗೆ ಅಂತೀರಾ ಇಲ್ಲಿದೆ ಸಂಪೂರ್ಣ ವಿವರ

Govt Scheme For Marriage : ಪೋಷಕರೇ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ, ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ನಿಮ್ಮ ಹೆಣ್ಣು ಮಕ್ಕಳ ಮದುವೆಗೆ ಸರ್ಕಾರ ನೀಡುತ್ತಿದೆ ರೂ.50,000. ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.

ಸರ್ಕಾರವು ಈ ಯೋಜನೆಯನ್ನು (Govt Scheme For Marriage) ಹೆಣ್ಣು ಮಕ್ಕಳ ಮದುವೆಗಾಗಿ (Marriage) ಮಾಡಿದೆ. ಈ ಯೋಜನೆಯನ್ನು ಪಡೆಯಲು ಹುಡುಗಿಯ ವಯಸ್ಸು 18 ವರ್ಷ ಆಗಿರಬೇಕು, ಅಥವಾ ಅದಕ್ಕಿಂತ ಹೆಚ್ಚಿರು ಬೇಕು. ಮತ್ತು ಮದುವೆಯಾಗುವ ಹುಡುಗನ ವಯಸ್ಸು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಈ ಯೋಜನೆಯನ್ನು ಎಲ್ಲಾ ವರ್ಗದ ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮತ್ತು ಒಂದು ಕುಟಂಬದ ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆವನ್ನು ಪಡೆಯಬಹುದು. ಈ ಯೋಜನೆಯನ್ನು ಉತ್ತರ ಪ್ರದೇಶ(Uttara Pradesh) ಸರಕಾರ ಅಲ್ಲಿನ ಬಡ ಹೆಣ್ಣುಮಕ್ಕಳಿಗೋಸ್ಕರ ನೀಡಿದೆ.

ಈ ಯೋಜನೆಯಲ್ಲಿ ಕೆಲವೊಂದು ಷರತ್ತುಗಳಿವೆ. ಮೊದಲ ಷರತ್ತು ಅರ್ಜಿದಾರರು ಉತ್ತವಾದ ಪ್ರದೇಶದಲ್ಲಿ ಖಾಯಂ ನಿವಾಸಿಯಾಗಿರಬೇಕು, ಎರಡನೆಯದ್ದು ಗ್ರಾಮೀಣ ಪ್ರದೇಶದವರು ವಾರ್ಷಿಕ ಆದಾಯವು ರೂ. 46800 ಹಾಗೂ ನಗರ ಪ್ರದೇಶದವರಿಗೆ ಆದಾಯವು ರೂ 56400 ಇರಬೇಕು. ಮೂರನೇಯದ್ದು  ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯಾಗಿರಬೇಕು.

ಅರ್ಜಿದಾರರು  ಯುಪಿಯ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. ಅರ್ಜಿದಾರರು ತಮ್ಮ ಆದಾಯ ಪ್ರಮಾಣಪತ್ರವನ್ನು ಹೊಂದಿರಬೇಕು, ಮತ್ತು ಅರ್ಜಿ ಸಲ್ಲಿಸುವಾಗ ಮದುವೆಯಾಗುವ ದಂಪತಿಗಳ ವಯಸ್ಸಿನ ಪ್ರಮಾಣಪತ್ರವನ್ನು ತೋರಿಸಬೇಕು.

ಅರ್ಜಿದಾರರು ಯಾವುದಾದರು ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರಬೇಕು, ಯಾಕೆಂದರೆ ಈ ಬ್ಯಾಂಕ್ ಖಾತೆಗೆ ಅನುದಾನದ ಮೊತ್ತವನ್ನು ಸರ್ಕಾರ ವರ್ಗಾಯಿಸುತ್ತದೆ. ಅರ್ಜಿದಾರರು ಕೇವಲ ಸರ್ಕಾರಿ ಬ್ಯಾಂಕ್ ಖಾತೆ ಹೊಂದಿರಬೇಕು.

ಯೋಜನೆಯ ಲಾಭವನ್ನು ಪಡೆಯಲು ಅರ್ಜಿದಾರ ಯುಪಿ ಸರ್ಕಾರದ ವೆಬ್‌ಸೈಟ್ shadianudan.upsdc.gov.in ನಲ್ಲಿ ನೋಂದಣಿಯನ್ನು ಮಾಡಬೇಕಾಗುತ್ತದೆ. ವೆಬ್‌ಸೈಟ್‌ನ ಮುಖಪುಟದಲ್ಲಿ ಹೊಸ ನೋಂದಣಿಯ ಆಯ್ಕೆಯ ಅಡಿಯಲ್ಲಿ, ನೀವು ನಿಮ್ಮ  ಜಾತಿಗೆ ಅನುಗುಣವಾಗಿ ಕೆಳಗೆ ನೀಡಲಾದ ಆಯ್ಕೆಗಳಲ್ಲಿ ಸರಿಯಾದ ಒಂದು ಅಯ್ಕೆ ಅನ್ನು ಆರಿಸಬೇಕಾಗುತ್ತದೆ. ಅರ್ಜಿದಾರರು OBC / SC / ST ವರ್ಗದವರಾಗಿದ್ದರೆ, ಅವರು ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು. ಇದು ಇತರೆ ವರ್ಗಗಳಿಗೆ ಜಾತಿ ಪ್ರಮಾಣ ಪತ್ರ ಅಗತ್ಯವಿಲ್ಲ.

ಮದುವೆಗೆ 90 ದಿನಗಳ ಮೊದಲು ಅಥವಾ 90 ದಿನಗಳ ನಂತರ ಇದಕ್ಕೆ ಅರ್ಜಿ ಸಲ್ಲಿಸಬಹುದು. ಮತ್ತು ಅರ್ಜಿದಾರರು ತಮ್ಮ ಮಗಳ ಮದುವೆ ಇದ್ದಾಗ ಮಾತ್ರ ಸರ್ಕಾರ ನೀಡುವ ಈ ಹಣವನ್ನು ವಿತ್ ಡ್ರಾ ಮಾಡಬೇಕು.

Leave A Reply

Your email address will not be published.