Home latest Patna: ಪಾಟ್ನಾ ರೈಲು ನಿಲ್ದಾಣದಲ್ಲಿ ಪ್ರಸಾರವಾದ `ಬ್ಲೂ ಫಿಲ್ಮ್’ ನನ್ನದೇ ಎಂದಳು ಈ ಖ್ಯಾತ ‘ಪೋರ್ನ್...

Patna: ಪಾಟ್ನಾ ರೈಲು ನಿಲ್ದಾಣದಲ್ಲಿ ಪ್ರಸಾರವಾದ `ಬ್ಲೂ ಫಿಲ್ಮ್’ ನನ್ನದೇ ಎಂದಳು ಈ ಖ್ಯಾತ ‘ಪೋರ್ನ್ ಸ್ಟಾರ್’

Patna Railway Station

Hindu neighbor gifts plot of land

Hindu neighbour gifts land to Muslim journalist

Patna railway station :ಮಾರ್ಚ್ 19 ಭಾನುವಾರ ಸಂಜೆ ಜನನಿಬಿಡವಾಗಿದ್ದ ಪಾಟ್ನಾ ರೈಲು ನಿಲ್ದಾಣದ (Patna railway station) ಪ್ಲಾಟ್ ಫಾರ್ಮ್ 10ರಲ್ಲಿ ಅಳವಡಿಸಿದ್ದ ಟಿವಿಯೊಂದರಲ್ಲಿ ಬ್ಲೂ ಫಿಲ್ಮ್ ಪ್ರಸಾರ ಆಗಿದ್ದು, ಪ್ರಯಾಣಿಕರೆಲ್ಲರೂ ಕಕ್ಕಾಬಿಕ್ಕಿಯಾಗಿದ್ದರು. ಈ ಸಂಬಂಧ ಖಾಸಗಿ ಸಂಸ್ಥೆ ವಿರುದ್ದ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದೀಗ ಪೋರ್ನ್ ಸ್ಟಾರ್ ಲಸ್ಟ್ ಇದು ನನ್ನದೇ ವಿಡಿಯೋ ಎಂದು ಹೇಳಿ ಟ್ವೀಟ್ ಕೂಡ ಮಾಡಿದ್ದಾರೆ.

ಹೌದು, ಟಿವಿ ಪರದೆಯ ಮೇಲೆ ನೀಲಿ ಚಿತ್ರ ಪ್ರಸಾರದ ದೃಶ್ಯವನ್ನು ಕೆಲವರು ವೀಡಿಯೋ ಮಾಡಿ, ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ನೆಟ್ಟಿಗನೊಬ್ಬ ಇದು ನಿಮ್ಮ ವೀಡಿಯೋ, ನಿಮಗೆ ತಿಳಿದಿದೆಯೇ? ಎಂದು ಪೋರ್ನ್ ಸ್ಟಾರ್ ಕೇಂದ್ರ ಲಸ್ಟ್ಗೆ ಟ್ಯಾಗ್ ಮಾಡಿದ್ದಾನೆ. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಲಸ್ಟ್ ಹೌದು, ಅದು ನನ್ನದೇ ಎಂದು ಭಾವಿಸುತ್ತೇನೆ’ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾಳೆ.

ಇದರೊಂದಿಗೆ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಂಡಿಯಾ ಎಂದು ಟೈಪ್ ಮಾಡಿದ್ದು ರಾಷ್ಟ್ರಧ್ವಜದ ಸಿಂಬಲ್ ಹಾಗೂ ಬಿಹಾರ್ ರೈಲ್ವೆಸ್ಟೇಷನ್ ಹ್ಯಾಶ್‌ಟ್ಯಾಗ್‌ನೊಂದಿಗೆ (#BiharRailwayStation) ತನ್ನ ಹಾಟ್‌ಫೋಟೋವನ್ನ ಹಂಚಿಕೊಂಡಿದ್ದಾಳೆ. ಸದ್ಯ ಈ ಚಿತ್ರ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ಅಂದಹಾಗೆ, ಪಟ್ನಾ(Patna) ರೈಲ್ವೆ ಜಂಕ್ಷನ್ ನ ಪ್ಲಾಟ್‌ ಫಾರ್ಮ್‌ 10ರಲ್ಲಿ ಭಾನುವಾರ ಸಂಜೆ ದೇಶದ ಬೇರೆ ಬೇರೆ ನಗರಗಳಿಗೆ ಪ್ರಯಾಣಿಸಲು ಸಾವಿರಾರು ಮಂದಿ ಸೇರಿದ್ದರು. ಈ ಪೈಕಿ ಮಹಿಳೆಯರು ಹಾಗೂ ಮಕ್ಕಳು ದೊಡ್ಡ ಪ್ರಮಾಣದಲ್ಲಿದ್ದರು. ಇನ್ನು ರೈಲಿನಲ್ಲಿ ಬರುವ ತಮ್ಮ ಸಂಬಂಧಿಕರನ್ನು ಬರಮಾಡಿಕೊಳ್ಳಲು ಹಲವು ಮಂದಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದರು. ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಿದ್ದ ಹಲವು ಟಿವಿಗಳಲ್ಲಿ ಏಕಕಾಲಕ್ಕೆ ಆಡಿಯೋ ಸಮೇತ ಬ್ಲೂ ಫಿಲ್ಮ್(Blue film) ವಿಡಿಯೋ ಪ್ಲೇ ಆಗಿದೆ. 3 ನಿಮಿಷಯಗಳ ಕಾಲ ನೀಲಿಚಿತ್ರ ಪ್ರಸಾರವಾಗಿದ್ದು, ಪ್ರಯಾಣಿಕರು ತಬ್ಬಿಬ್ಬಾಗಿದ್ದರು. ರೈಲ್ವೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳಾ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿತ್ತು.

ಈ ರೀತಿ ವಿಡಿಯೋ ಪ್ಲೇ ಆದ ಕೂಡಲೇ ಗೊಂದಲಕ್ಕೆ ಒಳಗಾದ ಪ್ರಯಾಣಿಕರು ಕೂಡಲೇ ರೈಲ್ವೆ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸ್ ಅಧಿಕಾರಿಗಳು (RPF) ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ತಪಾಸಣೆ ಆರಂಭಿಸಿದ್ದಾರೆ. ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು ಕೋಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಟಿವಿಗಳ ನಿರ್ವಹಣೆ ಗುತ್ತಿಗೆ ನೀಡಿರೋದನ್ನು ಖಚಿತಪಡಿಸಿಕೊಂಡು ಆ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ.

https://twitter.com/KendraLust/status/1637863680443310080?t=yN0dYM10hQNuVCje3LQpgQ&s=08