Sony Reon Pocket Ac 2 : ಸೋನಿ ಬಿಡುಗಡೆ ಮಾಡಿದೆ ಅತಿ ಚಿಕ್ಕದಾದ ಏರ್ ಕೂಲರ್ ; ನೀವು ಇದನ್ನು ಜೇಬಿನಲ್ಲೇ ಇಟ್ಟುಕೊಂಡು ಓಡಾಡಬಹುದು!!
Sony Reon Pocket Ac2 : ಈಗಾಗಲೇ ಬೇಸಿಗೆ ಆರಂಭವಾಗಿದ್ದು ಜನರು ಬಿಸಿಲಿನ ತಾಪ ತಡೆಯಲಾಗದೆ ತಂತ್ರಜ್ಞಾನ ಮೊರೆ ಹೋಗುತ್ತಿದ್ದಾರೆ. ದಿನದ 24ಗಂಟೆಯಲ್ಲಿ ಎಸಿ, ಕೂಲರ್ (cooler) ಇಲ್ಲದೆ ಸಾಧ್ಯವಿಲ್ಲಾ ಎಂಬ ಮಟ್ಟಿಗೆ ಬಿಸಿಲಿನ ಬೇಗೆ ಸುಡುತಿದೆ. ಈ ಬೇಸಿಗೆಯಲ್ಲಿ ಮನೆ ಅಥವಾ ಆಫೀಸ್‌ನಲ್ಲಿ ಮಾತ್ರ ಎಸಿ (Air conditioner) ಬಳಕೆಯನ್ನು ಮಾಡಬಹುದು. ಆದರೆ ಇದೀಗ ಅನಾವರಣವಾದ ಎಸಿಯನ್ನು ನೀವು ಹೋದ ಕಡೆಯೆಲ್ಲಾ ಕೊಂಡೊಯ್ಯಬಹುದು.
ಹೌದು, ಪ್ರಮುಖ ಸ್ಮಾರ್ಟ್‌ಗ್ಯಾಜೆಟ್ ತಯಾರಿಕಾ ಸಂಸ್ಥೆಯಾದ ಸೋನಿ (Sony) ಹೊಸ ಡಿವೈಸ್ ಅನ್ನು ಅನಾವರಣ ಮಾಡಿದ್ದು, ಇದರ ಹೆಸರು ಸೋನಿ ರಿಯಾನ್ ಪಾಕೆಟ್ ಎಸಿ 2 (Sony Reon Pocket Ac2) ಎಂದಾಗಿದೆ. ಇದು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು, ನೀವು ಜೇಬಿನಲ್ಲಿ ಇಟ್ಟುಕೊಂಡು ಓಡಾಡಬಹುದು. ಈ ಮೂಲಕ ನಿಮ್ಮ ದೇಹವನ್ನು ಬಿಸಿಲಿನಿಂದ ರಕ್ಷಿಸಿ, ತಂಪಾಗಿಡಲಿದೆ.
ಈ ಸೋನಿ ರಿಯಾನ್ ಪಾಕೆಟ್ ಎಸಿ 2 ಅನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಂಡಾಗ ನಿಮ್ಮ ದೇಹದ ಶಾಖವನ್ನು ತೊಡೆದುಹಾಕುತ್ತದೆ. ಈ ಡಿವೈಸ್ ಮೊಬೈಲ್ ಗಿಂತ ಚಿಕ್ಕದಾಗಿದ್ದು, ಇದನ್ನು ನೀವು
ಜೇಬಿನಲ್ಲಿ ಇಟ್ಟುಕೊಂಡು ಓಡಾಡಬಹುದು. ಇದನ್ನು ಪೆಲ್ಟಿಯರ್ ಎಲಿಮೆಂಟ್ಸ್ ನಿಂದ ತಯಾರಿಸಲಾಗಿದ್ದು, ಈ ಮೂಲಕ ಈ ಡಿವೈಸ್ ಬಳಕೆದಾರರಿಗೆ ಅತ್ಯಂತ ವೇಗವಾಗಿ ತಣ್ಣನೆಯ ಅನುಭವವನ್ನು ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇದು ಪ್ಯಾನೆಲ್ ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಇದನ್ನು ಸ್ಮಾರ್ಟ್‌ಫೋನ್‌ಗೆ (smartphone) ಕನೆಕ್ಟ್ ಮಾಡಬಹುದು. ಹಾಗೆಯೇ ಇದು ಬೇಸಿಗೆಗೆ ಮಾತ್ರವಲ್ಲದೆ ಚಲಿಗಾಲದಲ್ಲಿ ಬೆಚ್ಚನೆಯ ಅನುಭವವನ್ನೂ ನೀಡುತ್ತದೆ. ತುಂಬಾ ಅನುಕೂಲಕಾರಿಯಾಗಿದೆ. ಸದ್ಯ ಇದರ ಬೆಲೆ ಮೂಲ ಬೆಲೆ 10,300 ರೂ. ಆಗಿದೆ.