Serial Kisser : ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮಹಿಳೆಗೆ ʼಕಿಸ್ʼ ನೀಡಿದ ವ್ಯಕ್ತಿ ಸೆರೆ ! ಈತನ ಹಿಸ್ಟ್ರಿ ಕೇಳಿದರೆ ನೀವು ಖಂಡಿತಾ ಶಾಕ್ ಆಗ್ತೀರ!!!
Serial kisser : ಕೆಲವು ದಿನಗಳ ಹಿಂದೆ ಬಿಹಾರದ ( Bihar ) ಸಾದರ್ ಆಸ್ಪತ್ರೆ ( sadar hospital ) ಆವರಣದಲ್ಲಿ ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ (women ) , ಯುವಕನೊಬ್ಬ ಬಲವಂತದಿಂದ ಚುಂಬಿಸಿ (kiss ), ಓಡಿಹೋಗಿದ್ದ ಘಟನೆ ನಡೆದಿತ್ತು. ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈ ಘಟನೆಯ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ.
ಬಿಹಾರದ ಸಾದರ್ ಆಸ್ಪತ್ರೆ ಆವರಣದಲ್ಲಿ ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ, ಯುವಕನೊಬ್ಬ ಬಲವಂತದಿಂದ ಚುಂಬಿಸಿದ ಈ ವಿಡಿಯೊ ಮಾರ್ಚ್ 13ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಆ ಮಹಿಳೆ ಸಾದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದವರು, ಅಲ್ಲೇ ಆಸ್ಪತ್ರೆ ಆವರಣದಲ್ಲಿ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದರು. ಹಿಂಬದಿಯಿಂದ ಬಂದ ಈತ ಏಕಾಏಕಿ ಆಕೆಯನ್ನು ತಬ್ಬಿಕೊಂಡು ಬಲವಂತದಿಂದ ಅವರ ಬಾಯಿಗೆ ಮುತ್ತುಕೊಟ್ಟಿದ್ದ. ಮಹಿಳೆ 2015ರಿಂದಲೂ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಮತ್ತು ಈ ವ್ಯಕ್ತಿ ಯಾರೆಂದು ತನಗೆ ಗೊತ್ತಿಲ್ಲ. ಆತನ ವಿರುದ್ಧ ಮಾನ ನಷ್ಟ ಮೊಕದ್ದಮೆ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು.
ಇನ್ನು ಮೊಹಮ್ಮದ್ ಅಕ್ರಮ್ ಮಾರ್ಚ್ ತಿಂಗಳಿನಲ್ಲಿ 10ಕ್ಕೂ ಹೆಚ್ಚು ಮಹಿಳೆಯರಿಗೆ ಈ ರೀತಿ ಕಿಸ್ (Serial kisser) ಕೊಟ್ಟಿದ್ದಾನೆ ಎಂದೂ ಸುದ್ದಿ ಆಗಿದ್ದು, ಜೊತೆಗೆ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆತನನ್ನು ಇದೀಗ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ.
ಆರೋಪಿಯ ಹೆಸರು ಮೊಹಮ್ಮದ್ ಅಕ್ರಮ್ ಎಂದು ತಿಳಿದು ಬಂದಿದ್ದು, ಈತ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವುದು ಮತ್ತು ಈತ ಕಳ್ಳತನ ಮಾಡುವ ಗ್ಯಾಂಗ್ನ ಮುಖ್ಯಸ್ಥ ಎಂದು ಪೊಲೀಸರರಿಗೆ ಮಾಹಿತಿ ತಿಳಿದು ಬಂದಿದೆ . ಇನ್ನು ಮೊಹಮ್ಮದ್ ಅಕ್ರಮ್ನೊಂದಿಗೆ, ಅವನ ಗ್ಯಾಂಗ್ನ ಸಹಚರರಾದ ನಾಲ್ವರನ್ನು ಬಂಧಿಸಲಾಗಿದೆ.
ಅಕ್ರಮ್ ಮತ್ತು ಅವನ ಗ್ಯಾಂಗ್ ಹಲವು ತಿಂಗಳುಗಳಿಂದಲೂ ಬಿಹಾರದ ಜಮುಯಿ ಜಿಲ್ಲೆ ಮತ್ತು ಇತರ ಹಲವು ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಈಗಾಗಲೇ ಅನೇಕ ಮಹಿಳೆಯರಿಗೆ ಈತ ಹೀಗೆ ಮುತ್ತಿಟ್ಟಿದ್ದಾನೆ. ಅಷ್ಟೇ ಅಲ್ಲ, ಸರಗಳ್ಳತನವನ್ನೂ ಇವರು ಮಾಡುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಹೆಣ್ಮಕ್ಕಳು/ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಸೀರಿಯಲ್ ಕಿಸ್ಸರ್ ನ ಬಂಧನ ಆಗಿರುವ ಹಿನ್ನೆಲೆ ಬಿಹಾರದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.