Acidity : ಆ್ಯಸಿಡಿಟಿ ಚಿಂತೆ ನಿಮಗೂ ಇದೆಯೇ!! ಇಲ್ಲಿದೆ ಸುಲಭ ಪರಿಹಾರ

Acidity Home Remedies : ಇತ್ತೀಚೆಗೆ ಎಲ್ಲರ ಸಮಸ್ಯೆ ಆ್ಯಸಿಡಿಟಿ ಆಗಿದೆ. ತಿನ್ನುವ ಆಹಾರದಿಂದ ಕೆಲವೊಮ್ಮೆ ಅನೇಕ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಆದರೆ ಆ್ಯಸಿಡಿಟಿ ಅನ್ನುವುದು ಇದು ದೊಡ್ಡವರಿಂದ ಹಿಡಿದು ಮಕ್ಕಳನ್ನೂ ಆವರಿಸುತ್ತಿದೆ. ಅಜೀರ್ಣ, ಹೊಟ್ಟೆ ಉಬ್ಬುವುದು, ವಾಕರಿಕೆ ಬಂದಂತಾಗುವುದು, ಹೊಟ್ಟೆನೋವು, ಎದೆಯಲ್ಲಿ ಉರಿ ಮುಂತಾದ ಲಕ್ಷಣಗಳಿಂದ ಬೇಸತ್ತು ಹೋಗುತ್ತೇವೆ.

 

ಸಾಮಾನ್ಯವಾಗಿ ಆಹಾರಗಳನ್ನು ತಿಂದಮೇಲೆ ಹೆಚ್ಚಿನವರಿಗೆ ಆ್ಯಸಿಡಿಟಿ ಇದ್ದೇ ಇರುತ್ತದೆ. ಅನೇಕ ಜನರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೈದ್ಯರ ಬಳಿ ಹೋಗುತ್ತಾರೆ. ಆದರೆ ಕೆಲವೊಂದು ಮನೆಮದ್ದುಗಳ ( Acidity Home Remedies) ಮೂಲಕ ಇದನ್ನು ಸುಲಭದಲ್ಲಿ ನಿವಾರಿಸಿಕೊಳ್ಳಬಹುದು.

ಜೀರಿಗೆ:
ಜೀರಿಗೆಯು ಹೊಟ್ಟೆಯುರಿಯನ್ನು ಶಮನಗೊಳಿಸಲು ಮತ್ತು ಆಮ್ಲೀಯತೆಯನ್ನು ನಿವಾರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ನಿಮ್ಮ ಆಹಾರಗಳಲ್ಲಿ ಜೀರಿಗೆಯನ್ನು ಸೇರಿಸಬಹುದು ಅಥವಾ ಜೀರಿಗೆ ಚಹಾವನ್ನು ಕುಡಿಯಬಹುದು. ಅಥವಾ ಚಿಟಿಕೆ ಜೀರಿಗೆ ಜಗಿಯಬಹುದು.

ಅಂಜೂರದ ಹಣ್ಣು:
ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಪೋಟ್ಯಾಷಿಯಂ, ಕಾಪರ್, ಜಿಂಕ್ ಕಬ್ಬಿಣದಂಶ ಹೇರಳವಾಗಿದೆ. ಇದು ಆ್ಯಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೇ, ಮಲಬದ್ಧತೆ, ಆಲ್ಸರ್, ಹೊಟ್ಟೆಯ ಇತರೆ ಸಮಸ್ಯೆಗಳನ್ನುನಿವಾರಿಸುತ್ತದೆ. ಎರಡು ಒಣ ಅಂಜೂರದ ಹಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನು ಜಗಿದು ತಿನ್ನಿ.

ಚಕ್ಕೆ:
ಚಿಟಿಕೆ ಚಕ್ಕೆ ಪುಡಿ ಯನ್ನು ಸೇವಿಸುವುದರಿಂದ ಆ್ಯಸಿಡಿಟಿ ನಿವಾರಣೆಯಾಗುತ್ತದೆ. ಜತೆಗೆ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.

ಎಳನೀರು :
ನೈಸರ್ಗಿಕ ವಿಧಾನದಲ್ಲಿ ಅಸಿಡಿಟಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಎಳನೀರು ಒಂದು ಒಳ್ಳೆಯ ಮನೆಮದ್ದು ಆಗಿದೆ.

ತಣ್ಣಗಿನ ಹಾಲು:
ಹಾಲು ಕೂಡ ಆ್ಯಸಿಡಿಟಿ ಸಮಸ್ಯೆಯನ್ನು ಸುಲಭದಲ್ಲಿ ಕಡಿಮೆ ಮಾಡುತ್ತದೆ. ತಣ್ಣಗಿನ ಹಾಲಿಗೆ ಕಲ್ಲು ಸಕ್ಕರೆ ಮಿಕ್ಸ್ ಮಾಡಿಕೊಂಡು ಕುಡಿದರೆ ಆ್ಯಸಿಡಿಟಿ ಕಡಿಮೆಯಾಗುತ್ತದೆ.

ಶುಂಠಿ:
ಶುಂಠಿಯು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಇದು ಆಮ್ಲೀಯತೆಯಿಂದ ಉಂಟಾಗುವ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಒಂದು ಸಣ್ಣ ಶುಂಠಿಯನ್ನು ಅಗಿಯಬಹುದು ಅಥವಾ ಚಹಾಕ್ಕೆ ಸೇರಿಸಿ ಕುಡಿಯಬಹುದು.

ಅಲೋವೆರಾ ಜ್ಯೂಸ್:
ಅಲೋವೆರಾ ಜ್ಯೂಸ್ ಆ್ಯಸಿಡಿಟಿಯಿಂದ ಉಂಟಾಗುವ ಊರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟಕ್ಕೆ 20 ನಿಮಿಷಗಳ ಮೊದಲು 1/4 ಕಪ್ ಅಲೋವೆರಾ ಜ್ಯೂಸ್ ಕುಡಿಯಿರಿ.

ಬಾಳೆಹಣ್ಣು:
ಬಾಳೆಹಣ್ಣು ದೇಹದ ಮೇಲೆ ನೈಸರ್ಗಿಕ ಆಂಟಿಸಿಡ್ ಪರಿಣಾಮವನ್ನು ಒದಗಿಸುತ್ತದೆ. ಇದು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆ್ಯಸಿಡಿಟಿಯಿಂದ ತ್ವರಿತ ಪರಿಹಾರವನ್ನು ಪಡೆಯಲು ಬಾಳೆಹಣ್ಣು ತಿನ್ನಿರಿ ಅಥವಾ ಬಾಳೆಹಣ್ಣು ಸ್ಮೂಥಿ ಕುಡಿಯಿರಿ.

ಸೋಂಪು ಕಾಳು:
ಸೋಂಪು ಅನೆಥೋಲ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯಲ್ಲಿ ಉಂಟಾಗುವ ಆ್ಯಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟದ ನಂತರ ಸ್ವಲ್ಪ ಸೋಂಪುಕಾಳುಗಳನ್ನು ಅಗಿಯಿರಿ.

ಅಜ್ವಾನ ಅಥವಾ ಓಂ ಕಾಳು:
ಅಜ್ವಾನ ಅಥವಾ ಓಂ ಕಾಳು ಅನ್ನು ನಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡುವುದರಿಂದ ಅಸಿಡಿಟಿ ಸಮಸ್ಯೆ ನಿವಾರಿಸಬಹುದು. ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಓಂ ಕಾಳನ್ನು ಬಳಸುವುದು ಉತ್ತಮ. ಅಲ್ಲದೆ ಮಜ್ಜಿಗೆಗೆ ಸಲ್ಪ ಪ್ರಮಾಣದಲ್ಲಿ ಈ ಕಾಳನ್ನು ಬೆರೆಸಿ ಸೇವನೆ ಮಾಡುವುದು ಬಹಳ ಒಳ್ಳೆಯದು.

ತೆಂಗಿನ ನೀರು:
ತೆಂಗಿನ ನೀರು ಇದು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಒಂದು ಲೋಟ ತೆಂಗಿನ ನೀರು ಕುಡಿಯಿರಿ.

ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಆಮ್ಲೀಯವಾಗಿದ್ದರೂ, ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂದು ಚಮಚ ಆಪಲ್ ಸೈಡರ್ ವಿನೆಗರ್‌ನ್ನು ಒಂದು ಲೋಟ ನೀರಿನಲ್ಲಿ ಬೆರಿಸಿ ಊಟಕ್ಕೆ ಮೊದಲು ಕುಡಿಯಿರಿ.

ಬಾದಾಮಿ:
ಬಾದಾಮಿಯು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಕೆಲವು ಬಾದಾಮಿಗಳನ್ನು ರಾತ್ರಿಯಿಡಿ ನೆನೆಸಿ ಮತ್ತು ಬೆಳಗ್ಗೆ ಅವುಗಳನ್ನು ತಿನ್ನಿರಿ.

ಅರಶಿನ:
ಅರಶಿನವು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಇದು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ತಯಾರಿಸುವ ಆಹಾರಕ್ಕೆ ಅರಶಿನವನ್ನು ಸೇರಿಸಿ.

ಮಜ್ಜಿಗೆ :
ಎಸಿಡಿಟಿ ಆಗದಂತೆ ತಡೆಯಲು ಊಟದ ಬಳಿಕ ಮಜ್ಜಿಗೆ ಕುಡಿಯುವ ಪದ್ದತಿ ಈಗಲೂ ಇದೆ. ಎಸಿಡಿಟಿ ಆದಲ್ಲಿ, ತಂಪಾದ ಮಜ್ಜಿಗೆ ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

ಇವೆಲ್ಲದರ ಹೊರತು ಅತ್ಯಂತ ಸರಳ ವಿಧಾನ ಎಂದರೆ ಸಾಕಷ್ಟು ನೀರನ್ನು ಸೇವಿಸುವುದು. ದಿನ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಸೇವಿಸುವುದರಿಂದ ಅಸಿಟಿಡಿ ನಿವಾರಣೆಯಾಗುತ್ತದೆ. ಕೇವಲ ಬೆಳಿಗ್ಗೆ ಮಾತ್ರವಲ್ಲದೆ ದಿನವಿಡಿ ಆಗಾಗ ಸಾಕಷ್ಟು ನೀರನ್ನು ಸೇವನೆ ಮಾಡುವುದರಿಂದ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Neem Leaves : ನಿಮ್ಮ ಮುಖದಲ್ಲಿನ ಕಲೆ ಮಾಯಮಾಡುತ್ತೆ ಈ ಬೇವಿನ ಎಲೆ!

Leave A Reply

Your email address will not be published.