Neem Leaves : ನಿಮ್ಮ ಮುಖದಲ್ಲಿನ ಕಲೆ ಮಾಯಮಾಡುತ್ತೆ ಈ ಬೇವಿನ ಎಲೆ!

Neem Leaves : ಯುಗಾದಿ ಎಂದಾಗ ನಮಗೆ ಸಾಮಾನ್ಯವಾಗಿ ಬೇವು ಬೆಲ್ಲ ನೆನಪಾಗುತ್ತದೆ. ಆದರೆ ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ತಿಳಿದರೆ ಆಶ್ಚರ್ಯ ಪಡುವುದರಲ್ಲಿ ಒಂದು ಮಾತಿಲ್ಲ. ಬನ್ನಿ, ಬೇವು ಅಥವಾ ಕಹಿ ಬೇವಿನ (Neem Leaves) ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಯುಗಾದಿ ದಿನ ಸಿಹಿ – ಕಹಿ ಸಮನಾಗಿ ಸೇವಿಸುವುದು ಕೇವಲ ಒಂದು ಆಚರಣೆ ಮಾತ್ರವಲ್ಲ. ಇನ್ನುಳಿದಂತೆ ಬೇವು ಆರೋಗ್ಯದ ದೃಷ್ಟಿಯಿಂದಲೂ ಉಪಯೋಗ ಆಗಲಿದೆ.

ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಿರುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಇದಕ್ಕಿದೆ.

ಬೇವಿನ ಎಲೆಗಳಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿವೆ. ಇದು ಸೋಂಕುಗಳು, ಉರಿಯೂತ ಮತ್ತು ಯಾವುದೇ ರೀತಿಯ ಚರ್ಮದ ಸಮಸ್ಯೆಗಳಿಗೆ ಅದ್ಭುತವಾದ ಶಮನ ನೀಡುತ್ತದೆ. ಅದಲ್ಲದೆ ಈ ಎಲೆಯಲ್ಲಿ ಎಲ್ಲ ನೋವುಗಳನ್ನು ನಿವಾರಿಸುವ ಶಕ್ತಿಯಿದೆ.

ಇನ್ನು ಸಿಡುಬು, ದದ್ದು ಮೊದಲಾದ ಕಾಯಿಲೆಗಳು ಬಂದ ಬಳಿಕ ಈ ಸೊಪ್ಪಿನ ರಸವನ್ನು ಹಚ್ಚಿ ಸ್ನಾನ ಮಾಡಿದರೆ ತ್ವಚೆಯಲ್ಲಿ ಉಳಿದ ಕಲೆಗಳು ಮಾಯವಾಗುತ್ತವೆ.

ಬೇವಿನ ಎಲೆಗಳನ್ನು ಸೇವಿಸುವುದರಿಂದ ಲಿವರ್ ಸಂಬಂಧಿ ಸಮಸ್ಯೆಗಳು ಇಲ್ಲವಾಗುತ್ತವೆ. ಈ ಸೊಪ್ಪು ದೇಹದಲ್ಲಿ ಸೇರಿದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಶ್ವಾಸಕೋಶದ ಕಾರ್ಯವೈಖರಿಯನ್ನು ಉತ್ತಮಗೊಳಿಸುತ್ತದೆ.

ಚರ್ಮದ ಹಲವಾರು ಸಮಸ್ಯೆಗಳಿಗೆ ಬೇವಿನ ಸೊಪ್ಪು ಹಾಕಿದ ನೀರಿನ ಸ್ನಾನ ಇಲ್ಲವೇ ಇದನ್ನು ಅರೆದು ಹಚ್ಚುವುದರಿಂದ ವಾಸಿ ಮಾಡಿಕೊಳ್ಳಬಹುದು. ತ್ವಚೆಯ ಮೇಲೆ ಉಳಿದ ಮೊಡವೆಯ ಕಲೆ ನಿವಾರಣೆಗೂ ಇದು ಉಪಕಾರಿ.

ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕಿಮಿನಾಶಕ ಗುಣವಿದೆ. ಎಳೆಯ ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.

ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೊಂದಿರುವವರು ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅವುಗಳನ್ನು ಪ್ರತಿ ದಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆ ದೂರವಾಗುತ್ತದೆ.

ಬೇವಿನ ಎಲೆಗಳನ್ನು ಕುದಿಸಿ, ಆ ನೀರನ್ನು ಪ್ರತಿದಿನ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹುಳುಗಳು ನಾಶವಾಗುತ್ತದೆ. ಜ್ವರ ಮತ್ತು ಇತರ ಕಾಯಿಲೆಗಳನ್ನು ಕೂಡ ಬೇವು ಗುಣಪಡಿಸುತ್ತದೆ.

ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ಕಲ್ಪಿಸುತ್ತದೆ. ಬೇವು ಕಹಿಯಾದದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ. ಯಾಕೆಂದರೆ ಬೇವಿನ ಮರದ ಪ್ರತಿ ಭಾಗ ಕೂಡ ಉಪಯೋಗಕಾರಿಯಾಗಿದೆ.

Leave A Reply

Your email address will not be published.