Himachala: ಅಬ್ಬಬ್ಬಾ! ಈ ಹಳ್ಳಿಯ ಸಂಪ್ರದಾಯಗಳನ್ನ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಿ! ಇಲ್ಲಿ ಆ ಒಂದು ಕಾರಣಕ್ಕೆ ಹೆಂಗಸರು ಬಟ್ಟೇಯನ್ನೇ ಧರಿಸೋಲ್ವಂತೆ!
Himachala :ಹೆಚ್ಚು ಹಳ್ಳಿಗಳಿಂದ ಕೂಡಿರುವ ಭಾರತ ಅನೇಕ ಸಂಪ್ರದಾಯಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ದೇಶ. ಇಲ್ಲಿ ಹೆಜ್ಜೆ ಹೆಜ್ಜೆಗೂ ಆಚಾರ, ವಿಚಾರಗಳು, ಮಾತು ನಡವಳಿಕೆಗಳು ಬದಲಾದಂತೆ ಸಂಪ್ರದಾಯಗಳೂ ಬದಲಾಗುತ್ತವೆ. ಈ ರೀತಿ ತಲೆಯಿಂದ ತಲೆಗೆ ಹಲವಾರು ಬದಲಾವಣೆಗಳನ್ನು ನಾವು ಕಾಣಬಹುದು. ಅಂತೆಯೇ ಉತ್ತರ ಭಾರತದ(North India) ಈ ಒಂದು ಗ್ರಾಮದಲ್ಲಿ ನಡೆಸಲಾಗುವ ಸಂಪ್ರದಾಯದ ಬಗ್ಗೆ ನೀವು ಕೇಳಿದ್ರೆ ಆಘಾತಕ್ಕೊಳಗಾಗೋದ ಮಾತ್ರ ಪಕ್ಕಾ!
ಹೌದು, ಹಿಮಾಚಲದ(Himachala) ಕುಲ್ಲು(Kullu) ಜಿಲ್ಲೆಯಲ್ಲಿ ಪಿನಿ(Pini) ಎಂಬ ಗ್ರಾಮದಲ್ಲಿ ಚಾಲ್ತಿಯಲ್ಲಿರುವ ಆ ಒಂದು ಸಂಪ್ರದಾಯ ನಿಮಗೆಲ್ಲರಿಗೂ ಅಚ್ಚರಿ ಉಂಟುಮಾಡಬಹುದು. ಅದೇನಪ್ಪಾ ಅಂದ್ರೆ, ಇಲ್ಲಿ ಮಹಿಳೆಯರು ಐದು ದಿನಗಳ ಕಾಲ ನಗ್ನವಾಗಿ ಇರುತ್ತಾರೆ. ಮೈ ಮೇಲೆ ಒಂದು ತುಂಡು ಬಟ್ಟೆ ಇರೋದಿಲ್ಲ. ಅದೂ ಕೂಡ ಈ ಹಬ್ಬದ ಸಂದರ್ಭದಲ್ಲಿ ಇಂತಹ ಆಚರಣೆ ಇಲ್ಲಿ ನಡೆಯುತ್ತೆ. ಅಯ್ಯೋ ಈ ಆದುನಿಕ ಕಾಲದಲ್ಲೂ ಹೀಗೇನಾ? ಅಂತ ನಿಮಗನಿಸಬಹುದು. ಆದರೆ ಈ ಗ್ರಾಮದಲ್ಲಿ ಈಗಲೂ ಇಂತಹ ಅನೇಕ ವಿಚಿತ್ರ ನಿಯಮಗಳಿವೆ.
ಈ ವಿಚಿತ್ರವಾದ ಹಬ್ಬವನ್ನು ಪ್ರತಿ ವರ್ಷ ಆಗಸ್ಟ್(August) 17 ರಿಂದ ಆಗಸ್ಟ್ 21 ರವರೆಗೆ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಲ್ಲಾ ವಿವಾಹಿತ ಮಹಿಳೆಯರು (married women) 5 ದಿನಗಳ ಕಾಲ ನಗ್ನವಾಗಿರುತ್ತಾರೆ. ಹೀಗೆ ಮಾಡಲಿಲ್ಲವೆಂದರೆ ಗ್ರಾಮ ದೇವತೆಗಳು ಕೋಪಗೊಳ್ಳುತ್ತಾರೆ ಎಂದು ಸ್ಥಳೀಯರು ನಂಬುತ್ತಾರೆ. ಅಂದಹಾಗೆ ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಪುರುಷರಿಗೂ ಒಂದು ಸಂಪ್ರದಾಯವಿದೆ. ಮಹಿಳೆಯರು ಬೆತ್ತಲಾಗಿದ್ದಾಗ, ಪುರುಷರೆಲ್ಲರು ಮದ್ಯಪಾನ (No alcohol) ಮಾಡುವಂತಿಲ್ಲ. ಹೆಂಡ ತುಂಡುಗಳನ್ನು ಮುಟ್ಟುವಂತಿಲ್ಲ. ಇಡೀ ಗ್ರಾಮವು ಈ ಹಬ್ಬವನ್ನು ಬಹಳ ಕಟ್ಟುನಿಟ್ಟಿನಿಂದ ಆಚರಿಸುತ್ತದೆ.
ಈ ಹಬ್ಬದ ಸಮಯದಲ್ಲಿ ಮತ್ತೊಂದು ಸಂಪ್ರದಾಯವನ್ನು ನಡೆಸಲಾಗುತ್ತದೆ. ಗಂಡ ಮತ್ತು ಹೆಂಡತಿ ಯಾವುದೇ ರೀತಿಯಲ್ಲಿ ಪರಸ್ಪರ ಮಾತನಾಡುವುದಿಲ್ಲ. ಈ ಇಬ್ಬರು ಪರಸ್ಪರ ಪ್ರತ್ಯೇಕವಾಗಿ ಉಳಿಯಬೇಕು. ಗಂಡನು ತನ್ನ ಹೆಂಡತಿಯನ್ನು ಈ ಸ್ಥಿತಿಯಲ್ಲಿ ನೋಡಲು ಸಹ ಸಾಧ್ಯವಿಲ್ಲ. ಹಳ್ಳಿಯ ಎಲ್ಲಾ ಮಹಿಳೆಯರು ಈ ಪದ್ಧತಿಯನ್ನು ಅನುಸರಿಸುತ್ತಾರೆ.
ಅಂದಹಾಗೆ ಈ ಹಬ್ಬವನ್ನು ಆಚರಿಸುವುದರ ಹಿಂದೆ ರಾಕ್ಷಸರಿಗೆ ಸಂಬಂಧಿಸಿದ ನಂಬಿಕೆ ಇದೆ. ಹಿಂದೆ ರಾಕ್ಷಸರು ಈ ಗ್ರಾಮಕ್ಕೆ ನುಗ್ಗಿ ಸುಂದರವಾದ ಬಟ್ಟೆಗಳನ್ನು ಧರಿಸಿದ ಮಹಿಳೆಯನ್ನು ಎತ್ತಿಕೊಂಡು ಹೋಗುತ್ತಿದ್ದರಂತೆ. ನಂತರ ಗ್ರಾಮಸ್ಥರು ಲಹುವಾ ಘೋಂಡ್ ದೇವರ ಬಳಿ ಆಶ್ರಯ ಪಡೆಯುತ್ತಾರೆ. ಕೊನೆಗೆ ದೇವತೆಗಳು ಪಿನಿ ಗ್ರಾಮಕ್ಕೆ ಬಂದು ಗ್ರಾಮಸ್ಥರನ್ನು ರಾಕ್ಷಸರಿಂದ ರಕ್ಷಿಸಿದರು. ಅಂದಿನಿಂದ, ಮಹಿಳೆಯರ ಬಟ್ಟೆಗಳನ್ನು ಧರಿಸದ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಇನ್ನು ಈ ಪದ್ಧತಿಯನ್ನು ಅನುಸರಿಸದಿದ್ದರೆ, ಅದನ್ನು ಮಾಡಲು ನಿರಾಕರಿಸುವ ಮಹಿಳೆಯರಿಗೆ ಜೀವನದಲ್ಲಿ ಅಶುಭ (bad luck) ಏನಾದರೂ ಸಂಭವಿಸುತ್ತದೆ ಎಂದು ಗ್ರಾಮವು ನಂಬುತ್ತದೆ. ಇದರೊಂದಿಗೆ ತನ್ನ ಮನೆಗೆ ಸಂಬಂಧಿಸಿದ ಕೆಲವು ಕೆಟ್ಟ ಸುದ್ದಿಗಳನ್ನು ಪಡೆಯುತ್ತಾರೆ, ಏನಾದರೂ ಒಂದು ಅಮಂಗಳ ಕಾರ್ಯಕ್ಕೆ ಇದು ಎಡೆಮಾಡುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: Research : ಮಂಗಳ ಗ್ರಹದಲ್ಲಿ ಬದುಕಲು ಈ ಮೂರು ವಸ್ತು ಇದ್ರೆ ಸಾಕು!