Career Options after Second PUC : ಸೆಕೆಂಡ್ ಪಿಯು ನಂತರ ಈ ಕೋರ್ಸ್ ಯುವತಿಯರಿಗೆ ಉತ್ತಮ! ಯಾವುದೆಲ್ಲ? ಇಲ್ಲಿದೆ ಮಾಹಿತಿ!

Career Options after Second PUC : ಎಲ್ಲಾ 2nd PUC ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ತಲೆಯಲ್ಲಿ ಇರುವುದು ಮುಂದೆ ಏನು ಮಾಡಬೇಕು (Career Options after Second PUC) ಎಂದು. ಅದರಲ್ಲಿಯೂ ಹೆಣ್ಣು ಮಕ್ಕಳ ಪೋಷಕರು ಮುಂದೆ ತಮ್ಮ ಮಕ್ಕಳಿಗೆ ಯಾವ ವೃತ್ತಿ ಗೆ ಸೇರಿಸ ಬೇಕು ಎಂದು ಯೋಚಿಸುತ್ತಿದ್ದಾರೆ.

 

ಹೆಣ್ಣುಮಕ್ಕಳಿಗೆ ಉತ್ತಮ ವೃತ್ತಿಗಾಗಿ ಹುಡುಕುತ್ತಿದ್ದಿರಾ? ಹಾಗಾದರೆ ಈ 4 ಉತ್ತಮ ವೃತ್ತಿ ಗೆ ನಿಮ್ಮ ಮಕ್ಕಳನ್ನು ಕಳಿಸಿ. ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಹೆಣ್ಣು ಮಕ್ಕಳಿಗೆ ವೃತ್ತಿಯಲ್ಲಿ ಉತ್ತಮವಾದ ಸ್ಥಾನವನ್ನು ಪಡೆಯಲು ಉತ್ತಮ ವೃತ್ತಿ ಜಾಹೀರಾತಿನ ವೃತ್ತಿ. ಇತ್ತಿಚಿನ ದಿನಗಳಲ್ಲಿ ಹೆಚ್ಚು ಲಾಭದಲ್ಲಿ ಹೆಸರಾಗಿರುವ ವೃತ್ತಿ ಇದಾಗಿದೆ. ಈ ವೃತ್ತಿಯಲ್ಲಿ ನೀವು ಸೃಜನಶೀಲತೆಯನ್ನು ಪಡೆದುಕೊಳ್ಳಬಹುದು ಮತ್ತು ಎಲ್ಲೆಡೆ ಖ್ಯಾತಿ ಗಳಿಸಬಹುದು. ಈ ವೃತ್ತಿಗೆ ಬೇಕಾದ ಸ್ಕಿಲ್ ಎಂದರೇ ನೀವು ಜನರಿಗೆ ಆಕರ್ಷಣೆ ಆಗುವಂತಹ ಜಾಹೀರಾತುಗಳನ್ನು ನೀಡಬೇಕು. ಹಾಗೂ ಪರಿಸರದ ಕಾಳಜಿ ಬಗ್ಗೆ ಮಾಹಿತಿ ನೀಡವ ರೀತಿ ತಿಳಿದಿರಬೇಕು.

ನಂತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ವೃತ್ತಿ ಆಗಿದೆ. ಟಿವಿಯಲ್ಲಿ ಬರುವ ನ್ಯೂಸ್ ಚಾನಲ್ ನ ಅಂಕರ್ ನೋಡಿ ತಮ್ಮ ಹೆಣ್ಣು ಮಕ್ಕಳು ಕೂಡ ಹೀಗೆ ಟಿವಿಯಲ್ಲಿ ಬರಬೇಕು ಎಂಬ ಆಸೆ ತಂದೆ ತಾಯಿಯರಲ್ಲಿ ಹೆಚ್ಚಾಗಿ ಇದ್ದೆ ಇರುತ್ತದೆ. ಇದಕ್ಕಾಗಿ, ತಮ್ಮ ಮಕ್ಕಳಿಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕೋರ್ಸ್ ಮಾಡಲು ತಿಳಿಸಿ, ಅದರಲ್ಲಿಯೇ ಕೆಲಸ ಮಾಡಲು ಹೇಳಿದರೆ ಉತ್ತಮ. ಆದರೆ ಈ ವೃತ್ತಿಯಲ್ಲಿ ಸವಾಲಿನ ಅಪಾಯದ ಮಟ್ಟ ಹೆಚ್ಚಾಗಿ ಇರುತ್ತದೆ. ನೀವು ಅದರಲ್ಲಿ ಧೈರ್ಯಗೆಡದೆ ಕೆಲಸ ಮಾಡಿದರೆ ನಿಜವಾದ ತೃಪ್ತಿ ಪಡೆಯಬಹುದು. ಇದೀಗ ಡಿಜಿಟಲ್ ಮಾಧ್ಯಮದ ಆಗಮನ ಆಗಿವೆ. ಅದರಲ್ಲಿಯೂ ಕೂಡ ಕೆಲಸ ಪಡೆಯಬಹುದು.

ಕೆಲವೊಂದು ಹೆಣ್ಣು ಮಕ್ಕಳಿಗೆ ಫ್ಯಾಷನ್ ಡಿಸೈನಿಂಗ್ ನ ತರಬೇತಿ ಪಡೆದು ಅದರಲ್ಲಿಯೇ ತಮ್ಮ ಜೀವನ ನಡೆಸಬೇಕು ಎಂಬ ಆಸೆ ಇರುತ್ತದೆ. ಈವಾಗ ಜನರು ಹೆಚ್ಚಾಗಿ ಫ್ಯಾಷನ್ ಡಿಸೈನಿಂಗ್ ಲೋಕಕ್ಕೆ ಕಾಲಿಡುತ್ತಿದ್ದಾರೆ. ಆದರಿಂದ ಇದರಲ್ಲಿ ಹೆಚ್ಚು ಜೀವನ ಪರ ವೃತ್ತಿ ನಡೆಸಬಹುದು. ಎಲ್ಲಿಯೂ ಹೋಗದೆ ತಾವು ಇರುವ ಕಡೆಯೇ ಫ್ಯಾಷನ್ ಡಿಸೈನಿಂಗ್ ವೃತ್ತಿ ಮಾಡಬಹುದು.

ಇನ್ನೂ ಕೆಲವು ಹೆಣ್ಣು ಮಕ್ಕಳಿಗೆ ಗಗನಸಖಿ ಆಗುವ ಆಸೆ ಇರುತ್ತದೆ. ಅಂಥವರಿಗಾಗಿ ಗಗನಸಖಿ ಕೋರ್ಸ್‌ಗಳಿವೆ. ನೀವು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದ್ದರೆ ಕೋರ್ಸ್ ಮೂಲಕ ಈ ವೃತ್ತಿಗೆ ಕಾಲಿಡಬಹುದು. ಗಗನಸಖಿಯಾಗಿ ಹಲವಾರು ದೇಶವನ್ನು ನೋಡುತ್ತಾ ಜೀವನ ನೆಡಸಬಹುದು. ವೃತ್ತಿಗೆ ಹೆಚ್ಚು ಧೈರ್ಯ ಇರಬೇಕು ಜೊತೆಗೆ ಕಠಿಣ ಪರಿಶ್ರಮವು ಕೂಡ ಅಗತ್ಯ.

ಈ ಎಲ್ಲಾ ಉದ್ಯೋಗಗಳು ನಿಮಗಾಗಿ, Puc ನಂತರ ನಿಮಗೆ ಉನ್ನತ ಸ್ಥಾನ ಪಡೆಯಲು ಈ ನಾಲ್ಕು ವೃತ್ತಿಗಳು, ಈ ವೃತ್ತಿಗಳಲ್ಲಿ ನೀವು ನಿಮ್ಮ ಜೀವನ ವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ.

ಇದನ್ನೂ ಓದಿ: Tax Benefits : SBI ನ ಎನ್ ಪಿಎಸ್ ಪಿಂಚಣಿ ಖಾತೆಯಲ್ಲಿ ತೆರಿಗೆ ಪ್ರಯೋಜನದ ಮಾಹಿತಿ!

Leave A Reply

Your email address will not be published.