Bihar: ಪಾಟ್ನಾ ರೈಲು ನಿಲ್ದಾಣದಲ್ಲೊಂದು ಮಹಾ ಎಡವಟ್ಟು! ಪ್ಲಾಟ್ ಫಾರ್ಮ್ ಟಿವಿಗಳಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ: ಕಕ್ಕಾಬಿಕ್ಕಿಯಾದ ಜನ!

Share the Article

Bihar : ಬಸ್ಸು(Bus) ಹಾಗೂ ರೈಲ್ವೆ(Train) ನಿಲ್ದಾಣಗಳಲ್ಲಿ ಪ್ರತಿ ಪ್ಲಾಟ್‌ ಫಾರ್ಮ್‌ನಲ್ಲೂ ಬೇರೆ ಬೇರೆ ಮಾಹಿತಿಗಳನ್ನು ನೀಡಲು, ಆಗಮನ ಹಾಗೂ ನಿರ್ಗಮನದ ಬಗ್ಗೆ ತಿಳಿಸಲು
ಹಲವು ಟಿವಿಗಳನ್ನು ಅಳವಡಿಕೆ ಮಾಡಲಾಗಿರುತ್ತದೆ. ಬಿಹಾರದ (Bihar) ಪಟ್ನಾ ರೈಲು ನಿಲ್ದಾಣದಲ್ಲೂ ಇದೇ ರೀತಿ ಟಿವಿಗಳನ್ನು ಅಳವಡಿಸಲಾಗಿದೆ. ಆದ್ರೆ, ಭಾನುವಾರ(Sunday) ಸಂಜೆ ಈ ಟಿವಿಗಳಲ್ಲಿ ನೀಲಿ ಚಿತ್ರ ಪ್ರದರ್ಶನವಾಗಿ ಮಹಾ ಎಡವಟ್ ಆಗಿದೆ. ಆಡಿಯೋ ಸಮೇತ ವಿಡಿಯೋ ಪ್ಲೇ ಆಗಿದ್ದೇ ತಡ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ!

ಹೌದು, ಪಟ್ನಾ(Patna) ರೈಲ್ವೆ ಜಂಕ್ಷನ್ ನ ಪ್ಲಾಟ್‌ ಫಾರ್ಮ್‌ 10ರಲ್ಲಿ ಭಾನುವಾರ ಸಂಜೆ ದೇಶದ ಬೇರೆ ಬೇರೆ ನಗರಗಳಿಗೆ ಪ್ರಯಾಣಿಸಲು ಸಾವಿರಾರು ಮಂದಿ ಸೇರಿದ್ದರು. ಈ ಪೈಕಿ ಮಹಿಳೆಯರು ಹಾಗೂ ಮಕ್ಕಳು ದೊಡ್ಡ ಪ್ರಮಾಣದಲ್ಲಿದ್ದರು. ಇನ್ನು ರೈಲಿನಲ್ಲಿ ಬರುವ ತಮ್ಮ ಸಂಬಂಧಿಕರನ್ನು ಬರಮಾಡಿಕೊಳ್ಳಲು ಹಲವು ಮಂದಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದರು. ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಿದ್ದ ಹಲವು ಟಿವಿಗಳಲ್ಲಿ ಏಕಕಾಲಕ್ಕೆ ಆಡಿಯೋ ಸಮೇತ ಬ್ಲೂ ಫಿಲ್ಮ್(Blue film) ವಿಡಿಯೋ ಪ್ಲೇ ಆಗಿದೆ..!

ರೈಲ್ವೆ ಇಲಾಖೆಯು ಪಟ್ನಾ ಜಂಕ್ಷನ್ ರೈಲು ನಿಲ್ದಾಣದ ಟಿವಿಗಳ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದೆ. ಈ ಸಂಸ್ಥೆಯ ಸಿಬ್ಬಂದಿಯ ಎಡವಟ್ಟಿನಿಂದ ನೀಲಿ ಚಿತ್ರ ಪ್ರದರ್ಶನವಾಗಿದೆ. ಸುಮಾರು 3 ನಿಮಿಷಯಗಳ ಕಾಲ ನೀಲಿಚಿತ್ರ ಪ್ರಸಾರವಾಗಿದ್ದು, ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ರೈಲ್ವೆ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಹಿಳಾ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿದೆ. ಕೆಲವರು ಇದನ್ನು ವೀಡಿಯೋ ಮಾಡಿಕೊಂಡಿದ್ದು, ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಖಾಸಗಿ ಸಂಸ್ಥೆ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಈ ರೀತಿ ವಿಡಿಯೋ ಪ್ಲೇ ಆದ ಕೂಡಲೇ ಗೊಂದಲಕ್ಕೆ ಒಳಗಾದ ಪ್ರಯಾಣಿಕರು ಕೂಡಲೇ ರೈಲ್ವೆ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸ್ ಅಧಿಕಾರಿಗಳು (RPF) ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ತಪಾಸಣೆ ಆರಂಭಿಸಿದ್ದಾರೆ. ಇಷ್ಟಾಗುವ ವೇಳೆಗೆ 3 ನಿಮಿಷಗಳ ಕಾಲ ಪ್ಲೇ ಆದ ಪೋರ್ನ್ ವೀಡಿಯೋ ನಂತರ ಬಂದ್ ಆಯಿತು. ಬಳಿಕ ಎಂದಿನಂತೆ ರೈಲುಗಳ ಆಗಮನ, ನಿರ್ಗಮನ ಮಾಹಿತಿ ಪ್ರಸಾರವಾಯಿತು.

ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು ಕೋಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಟಿವಿಗಳ ನಿರ್ವಹಣೆ ಗುತ್ತಿಗೆ ನೀಡಿರೋದನ್ನು ಖಚಿತಪಡಿಸಿಕೊಂಡು ಆ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ. ಈ ಕುರಿತ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

Leave A Reply

Your email address will not be published.