Actor Ahimsa Chetan : ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿದ ಪ್ರಕರಣ: ನಟ ಚೇತನ್ ಗೆ 14 ದಿನ ನ್ಯಾಯಾಂಗ ಬಂಧನ!

Actor Chetan Judicial Custody : ಹಿಂದುತ್ವದ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಟ ಚೇತನ್‌ ಗೆ 14 ದಿನ ನ್ಯಾಯಾಂಗ ಬಂಧನ(Actor Chetan Judicial Custody) ಮಾಡಲಾಗಿದೆ.

 

ಬೆಂಗಳೂರಿನ 32ನೇ ಎಸಿಎಂಎಂ ಕೋರ್ಟ್‌ ನಿಂದ ಆದೇಶ ಹೊರಡಿಸಿದ್ದಾರೆ. ನಟ ಚೇತನ್‌ ಪರ ವಕೀಲರಿಂದ ಜಾಮೀನು ಕೋರಿ ಅರ್ಜಿ ಕೋರಿದ್ದಾರೆ. ಬಂಧಿತ ನಟ ಚೇತನ್‌ ಗೆ 14ದಿನ ನ್ಯಾಯಾಂಗ ಬಂಧನ ನೀಡಲಾಗಿದೆ.

ನಟ ಚೇತನ ಹೊಸ ವಿವಾದವನ್ನು ಸೃಷ್ಟಿಸಿದ್ದು, ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಿಂದುತ್ವದನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಅಷ್ಟೇ ಅಲ್ಲದೇ ಸಾವರ್ಕರ್‌ ಹೇಳಿಕೆ ಪ್ರಸ್ತಾಪಿಸಿದ್ದು, ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು.

ಇದು ಒಂದು ಸುಳ್ಳು 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮ ಭುಮಿ ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇ ಗೌಡರು ಟಿಪ್ಪುವನ್ನು ಕೊಂದರು ಇದು ಕೂಡ ಒಂದು ಸುಳ್ಳು ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು ಸತ್ಯವೇ ಸಮಾನತೆ ಎಂದು ವಿವಾದಾತ್ಮಕ ಪೋಸ್ಟ್‌ ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಹಂಚಿಕೊಂಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಹಿಂದುತ್ವದ ಬಗ್ಗೆ ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡ ಬೆನ್ನಲ್ಲೆ ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟ ಚೇತನನ್ನು ಕೋರ್ಟ್‌ ಗೆ ಪೊಲೀಸರು ಹಾಜರುಪಡಿಸಿದ್ದಾರೆ. ನಟ ಚೇತನ್‌ ವಿರುದ್ಧ ಹಿಂದೂಪರ ಸಂಘಟನೆ ದೂರು ನೀಡಿತ್ತು. ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿತ್ತು. ಐಪಿಸಿ ಸೆಕ್ಷನ್‌ 295A ಹಾಗೂ 505 Bರಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಬಳಿಕ ಬೆಂಗಳೂರಿನ 32ನೇ ಎಸಿಎಂಎಂ ಕೋರ್ಟ್‌ ನಿಂದ ನಟ ಚೇತನ್‌ ಗೆ 14 ದಿನ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದ್ದರು.

ಇನ್ನು ಹಿಂದುತ್ವ ವಿರೋಧಿ ಪೋಸ್ಟ್ ಅನ್ನು ನಟ ಚೇತನ್ ಅವರೇ ಬರೆದಿದ್ದಾರೆ ಅನ್ನೋದಕ್ಕೆ‌ ಸಾಕ್ಷಿ ಇಲ್ಲ. ಈ ಬಗ್ಗೆ ಪೊಲೀಸರು ಸುಳ್ಳು ಕೇಸ್‌ ಅನ್ನು ದಾಖಲಿಸಿಕೊಂಡಿದ್ದಾರೆ. ಹೀಗಾಗಿ, ಚೇತನ್‌ ಅವರನ್ನು ಬಿಡುಗಡೆ ಮಾಡಬೇಕು ಎಂದು ಎಂದು ವಾದ ಮಂಡಿಸಿದ್ದಾರೆ. ಆದರೆ, ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸುವ ಉದ್ದೇಶದಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ :  ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ವಿಚಾರಕ್ಕೆ ನಟ ಚೇತನ್‌ ಅರೆಸ್ಟ್‌

Leave A Reply

Your email address will not be published.