Chhattisgarh: ಈ ಊರ ಜನರಿಗೆ ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು? ಕೇಳಿದ್ರೆ ನೀವೂ ಶಾಕ್ ಆಗ್ತೀರಾ!
Earn money: ಇಂದು ನಮ್ಮ ದೇಶದ ಲಕ್ಷಾಂತರ ಯುವಕರು ಉದ್ಯೋಗ(Job)ವಿಲ್ಲದೆ ಖಾಲಿ ಕೂತಿದ್ದಾರೆ. ವಿದ್ಯೆ ಇದೆ ಉದ್ಯೋಗ ಇಲ್ಲ. ಒಂದು ವೇಳೆ ಕೆಲಸ ಸಿಕ್ಕರೂ ನೆಮ್ಮದಿ ಜೀವನ ನಡೆಸಲು ಸಾಲದ ಸಂಬಳ(Salry) ತಿಂಗಳ ಕೊನೆಗೆ ಕೈ ಸೇರುತ್ತದೆ. ಲಕ್ಷ ಲಕ್ಷ ಫೀಸು ಕಟ್ಟಿ ಓದಿ, ಈಗ ಬರೀ ಸಾವಿರದ ಸಂಬಳಕ್ಕೆ ದುಡಿಯೋದಂದ್ರೆ ಹೇಗೆ ಹೇಳಿ. ಹೀಗಾಗಿ ಎಲ್ಲರೂ ಸರ್ಕಾರಿ ಉದ್ಯೋಗದ ಬೆನ್ನು ಬಿದ್ದಿದ್ದಾರೆ. ಆದರೆ ಇದು ಸ್ಪರ್ಧಾತ್ಮಕ ಯುಗ. ಬದುಕಲು ನೂರಾರು ದಾರಿಗಳಿವೆ. ಏನೂ ಓದದೆ ಲಕ್ಷ, ಕೋಟಿ ದುಡಿಯುವವರೂ ಇಲ್ಲಿದ್ದಾರೆ. ಅಂತೆಯೇ ಇಲ್ಲೊಂದು ಗ್ರಾಮದ ಜನರು ಯಾವ ಕೆಲಸವನ್ನೂ ಮಾಡೋಲ್ಲ. ಆದರೆ ತಿಂಗಳ ಕೊನೆಗೆ ಲಕ್ಷ ಲಕ್ಷ ದುಡಿಯುತ್ತಾರೆ (earn money). ಅರೆ! ಅದು ಹೇಗೆ ಸಾಧ್ಯ?
ಹೌದು, ಛತ್ತೀಸ್‌ಗಢದ(Chattisghad) ರಾಯ್‌ಪುರ(Raypura) ದಲ್ಲಿ ತುಳಸಿ(Tulasi) ಎಂಬ ಗ್ರಾಮವಿದೆ. ಈ ತುಳಸಿ ಗ್ರಾಮದಲ್ಲಿ ಸುಮಾರು 432 ಕುಟುಂಬಗಳು ವಾಸಿಸುತ್ತಿವೆ. ಗ್ರಾಮದ ಜನಸಂಖ್ಯೆ 3000-4000 ನಡುವೆ ಇದೆ. ಅವರಲ್ಲಿ 1000 ಜನರು ಮನೆಯಲ್ಲಿಯೇ ಕೂತು ಲಕ್ಷ ಲಕ್ಷ ಸಂಪಾದಿಸುತ್ತಾರೆ. ಇವರು ಈ ರೀತಿ ಕೈತುಂಬಾ ಆದಾಯ ಗಳಿಸೋದು ಯೂಟ್ಯೂಬ್(You tube) ಮೂಲಕ!
ಆರಂಭದಲ್ಲಿ ಹೇಳಿದಂತೆ ಇಂದು ಬದುಕಲು ಬೇಕಾದಷ್ಟು ಅವಕಾಶಗಳಿವೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಅವನ್ನೆಲ್ಲ ನಾವು ಬಳಸಿಕೊಂಡು ನಮ್ಮ ದಾರಿ ನಾವು ಹಿಡಿಯಬೇಕಷ್ಟೆ. ಅದರಲ್ಲಿಯೂ ಇಂದು ಯೂಟ್ಯೂಬ್ ಅನ್ನು ದೊಡ್ಡ ಆದಾಯದ ಮೂಲವನ್ನಾಗಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂತೆಯೇ ಇಲ್ಲಿನ ಯುವಕರು ಯೂಟ್ಯೂಬ್ ಮೇಲೆ ಅವಲಂಬಿತರಾಗಿದ್ದಾರೆ. ಈ ತುಳಸಿ ಗ್ರಾಮದಲ್ಲಿ ವಾಸಿಸುವ 5 ವರ್ಷದ ಮಗುವಿನಿಂದ 85 ವರ್ಷದ ಅಜ್ಜಿಯವರೆಗೆ ಅವರು ಯೂಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದಾರೆ.
ಈ ಗ್ರಾಮದ ಜನರು ಹೇಗೆ ಇಂತಹ ದಾರಿ ಕಂಡುಕೊಂಡ್ರು, ಯೂಟ್ಯೂಬ್ ಗೀಳು ಇವರಿಗ್ಯಾಕೆ ಹಿಡಿಯಿತು ಎಂದು ನೋಡ ಹೋದರೆ, ಈ ಗ್ರಾಮದಲ್ಲಿ ಜೈ ವರ್ಮಾ(Jai Varma) ಮತ್ತು ಜ್ಞಾನೇಂದ್ರ(Jnanendra) ಎಂಬ ಇಬ್ಬರು ಗೆಳೆಯರು 2016ರಲ್ಲಿ ತಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಅದರಲ್ಲಿ ಕಾಮಿಡಿ ವಿಡಿಯೋಗಳು ಅಪ್ಲೋಡ್ ಮಾಡಲು ಶುರುಮಾಡಿದರು. ಜೈವರ್ಮ ಅವರಿಗೆ ಬಾಲ್ಯದಿಂದಲೂ ನಟನೆಯಲ್ಲಿ ಒಲವು. ಮೊದಲು ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಅವರು 11ನೇ ತರಗತಿಯಿಂದ ಬಿಎಸ್ಸಿವರೆಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದರು.
ನಂತರ ಅವರಿಗೆ ಸ್ನೇಹಿತ ಹಾಗೂ ಎಸ್‌ಬಿಐನಲ್ಲಿ ಎಂಜಿನಿಯರ್ ಆಗಿರುವ ಜ್ಞಾನೇಂದ್ರ ಜೊತೆಯಾದರು. ಇದಾದ ಬಳಿಕ ಇನ್ನೂ ಹೆಚ್ಚಿನ ಕಾಮಿಡಿ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಇಬ್ಬರಿಂದಲೂ ಯೂಟ್ಯೂಬ್ ವೀಡಿಯೋಗಳು ಶುರುವಾದವು. ಹೀಗೆ ಅವರ ತಂಡ ಬೆಳೆಯುತ್ತಾ ಹೋಯಿತು. ಗ್ರಾಮದ ಆಸಕ್ತರೆಲ್ಲರೂ ಇವರಿಗೆ ಒಟ್ಟಾದರು, ಜೊತೆಯಾದರು.
ಸದ್ಯ ತುಳಸಿ ಗ್ರಾಮದ ಬಹುತೇಕ ಪ್ರತಿಯೊಂದು ಕುಟುಂಬವೂ YouTube ವೀಡಿಯೊಗಳಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ತುಳಸಿ ಈ ಗ್ರಾಮದಿಂದ 40-50 ಚಾನಲ್‌ಗಳನ್ನು ಮಾಡಲಾಗಿದೆ. ಮೊದಲು ಎಲ್ಲರೂ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದರು. ಆದರೆ ಈಗ ಕ್ಯಾಮೆರಾಗಳು ಮತ್ತು ಇತರ ಶೂಟಿಂಗ್ ಸಾಧನಗಳು ಲಭ್ಯವಿದೆ. ವೀಕ್ಷಕರ ಸಂಖ್ಯೆ ಹೆಚ್ಚಾದಂತೆ ಆದಾಯವೂ ಹೆಚ್ಚಾಗಿದೆ.
ಒಟ್ಟಿನಲ್ಲಿ ಇವರೆಲ್ಲ ಯೂಟ್ಯೂಬ್ ನಿಂದ ಭಾರೀ ಆದಾಯ ಪಡೆಯುತ್ತಿದ್ದಾರೆ. ಸರ್ಕಾರಿ ಕೆಲಸದ ಬಗ್ಗೆ ಟೆನ್ಷನ್ ಇಲ್ಲ. ಖಾಸಗಿ ಉದ್ಯೋಗದ ಕಲ್ಪನೆ ಇಲ್ಲ. ತಮ್ಮದೇ ಚಾನೆಲ್ ನಡೆಸುತ್ತಿದ್ದಾರೆ. ತಮಗೆ ಇಷ್ಟವಾದದ್ದನ್ನು ಮಾಡುತ್ತಿದ್ದಾರೆ. ಯಾವುದೇ ಒತ್ತಡವಿಲ್ಲದೆ ತುಂಬಾ ಖುಷಿಯಿಂದ ಬದುಕುತ್ತಿದ್ದಾರೆ. ಒಗ್ಗಟ್ಟಿನಿಂದ ಎಲ್ಲರೂ ಮುನ್ನಡೆಯುತ್ತಿದ್ದಾರೆ. ಸಾಧಿಸಿದರೆ ಸಬಳ ನುಂಗಬಹುದು ಎಂಬುದಕ್ಕೆ ಈ ತುಳಸಿ ಗ್ರಾಮದ ಯುವಕರೇ ಸಾಕ್ಷಿ.
ಇದನ್ನೂ ಓದಿ: Best Selling Scooters: ಓಲಾ ಅಥವಾ ಟಿವಿಎಸ್ ಜುಪಿಟರ್ ಅಲ್ಲ! ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಯಾವುದು ಗೊತ್ತಾ?