Workers Salary Increased by 25 %: ಕಾರ್ಮಿಕರ ಕನಿಷ್ಠ ವೇತನ ಶೇ. 24 ರಷ್ಟು ಹೆಚ್ಚಿಸಿದ ಅಲ್ಲಿನ ಸರ್ಕಾರ !
Workers Salary Increased by 25 %: ನುರಿತ, ಅರೆ-ಕುಶಲ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ನೀಡಲಾಗುವ ಕನಿಷ್ಠ ವೇತನವನ್ನು ಸುಮಾರು ಶೇಕಡಾ 25 ರಷ್ಟು ಹೆಚ್ಚಿಸಲಾಗುವುದು ಎಂದು ಅಲ್ಲಿನ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.
ಒಟ್ಟು ಒಂಬತ್ತು ವರ್ಷಗಳ ನಂತರ ಗುಜರಾತ್ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿದೆ (Salary Hike). ಅಧಿಸೂಚನೆ ಹೊರಡಿಸಿದ ನಂತರ ಹದಿನೈದು ದಿನಗಳೊಳಗೆ ಜಾರಿಗೆ ಬರಲಿದೆ ಎಂದು ಗುಜರಾತ್ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಲ್ವಂತಸಿಂಗ್ ರಜಪೂತ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಈಗಿನ ವೇತನ ಹೆಚ್ಚಳದಿಂದ ಸುಮಾರು 2 ಕೋಟಿ ಜನರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.
1948ರ ಕನಿಷ್ಠ ವೇತನ ಕಾಯ್ದೆಯಲ್ಲಿ ಪಟ್ಟಿ ಮಾಡಲಾದ 46 ವಿವಿಧ ಕ್ಷೇತ್ರಗಳಲ್ಲಿ ಮುನ್ಸಿಪಲ್ ಕಾರ್ಪೊರೇಶನ್, ಪುರಸಭೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನುರಿತ ಕಾರ್ಮಿಕರಿಗೆ ವೇತನ ಹೆಚ್ಚಳ ಆಗಿದೆ. ಸರ್ಕಾರವು ಕನಿಷ್ಠ ಮಾಸಿಕ ವೇತನವನ್ನು ರೂ 9,887.80 ರಿಂದ ರೂ 12,324 ರೂ.ಗೆ ಹೆಚ್ಚಿಸಿದೆ. ಒಟ್ಟು 2,436.20 ರೂ. ಅಥವಾ ಶೇ. 24.63 ರಷ್ಟು ಹೆಚ್ಚಿಸಲಾಗಿದೆ.
ಅಲ್ಲದೆ ಅರೆ-ಕುಶಲ ಕಾರ್ಮಿಕರ ಕನಿಷ್ಠ ಮಾಸಿಕ ವೇತನವನ್ನು ರೂ 9,653.80 ರಿಂದ ರೂ. 11,986 ರೂ.ಗೆ ಹೆಚ್ಚಿಸಿದೆ. ಒಟ್ಟು 2,332.20 ರೂ. ಅಥವಾ ಶೇಕಡಾ 24.15 ರಷ್ಟು ಹೆಚ್ಚಾಗಿದೆ. ಅದಲ್ಲದೆ, ಕೌಶಲ್ಯರಹಿತ ಕಾರ್ಮಿಕರಿಗೆ, ಮಾಸಿಕ ವೇತನವನ್ನು 9,445.80 ರಿಂದ ರೂ 11,752 ರೂ.ಗೆ ಹೆಚ್ಚಿಸಲಾಗಿದೆ. ಇದು ಒಟ್ಟು ಶೇ. 24.41 ರಷ್ಟು ಏರಿಕೆಯಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಲ್ವಂತಸಿಂಗ್ ರಜಪೂತ್ ಅವರು ತಿಳಿಸಿದ್ದಾರೆ.