Indian SUV & Foreign Police : ಭಾರತೀಯ ಬ್ರಾಂಡ್‌ಗಳು ವಿದೇಶದಲ್ಲಿ ಶೈನಿಂಗ್‌! ನಮ್ಮ ಈ SUV ಗಳು ಅಲ್ಲಿನ ಪೊಲೀಸರಿಗೆ ತುಂಬಾ ಇಷ್ಟ!

Indian SUV  Car : ಏಷ್ಯಾದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ಭಾರತವು ಪ್ರಬಲ ಶಕ್ತಿಯಾಗಿ ಬೆಳೆದಿದೆ. ಭಾರತದ ನೆರೆಹೊರೆ ದೇಶಗಳು ಭಾರತದಲ್ಲಿ ಉತ್ಪಾದನೆಯಾಗುವ ವಾಹನಗಳನ್ನು(Indian SUV Car) ಅದರಲ್ಲಿಯೂ, SUVಗಳನ್ನು ತಮ್ಮ ದೇಶಗಳಿಗೆ ಆಮದು ಮಾಡಿಕೊಳ್ಳುತ್ತಿವೆ. SUV ಗಳು ನೆರೆಹೊರೆ ದೇಶಗಳ ಪೊಲೀಸ್ ಸಿಬ್ಬಂದಿಗಳನ್ನು ಆಕರ್ಷಿಸುತ್ತಿವೆ.

 

ಹಲವಾರು ದೇಶಗಳಿಗೆ ನಮ್ಮ ಭಾರತೀಯ ಹೆಮ್ಮೆಯ ಬ್ರಾಂಡ್‌ಗಳಾದ ಟಾಟಾ ಹಾಗೂ ಮಹೀಂದ್ರಾ ಕಂಪನಿಗಳ ಕಾರುಗಳನ್ನು ಆಮದು ಮಾಡಲಾಗುತ್ತಿದೆ. ಅಲ್ಲಿನ ದೇಶಗಳ ಜನರಿಗೂ ಕೂಡ ಭಾರತೀಯ ಗಾಡಿಗಳ ಹೆಚ್ಚು ಪ್ರಿಯವಾಗಿವೆ. ಯಾವೆಲ್ಲಾ ದೇಶಗಳಲ್ಲಿ ತಮ್ಮ ದೇಶದ ಗಾಡಿಗಳನ್ನು ಪೊಲೀಸ್ ಹಾಗೂ ಮಿಲಿಟರಿ ಸಿಬ್ಬಂದಿಗಳು ಬಳಸುತ್ತಿವೆ ತಿಳಿಯಿರಿ.

ಅಲ್ಜೀರಿಯಾ ಅಲ್ಲಿ ಟಾಟಾ ಸಫಾರಿ ಸ್ಟೋರ್ಮ್

ಇದು ಒಂದೊಳ್ಳೆ ಆಂತರಿಕ ಸೌಕರ್ಯವಾನ್ನು, ಆಫ್-ರೋಡಿಂಗ್ ಸಾಮರ್ಥ್ಯವನ್ನು ಹಾಗೂ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟಾಟಾ ಸಫಾರಿ ಸ್ಟೋರ್ಮ್ ಯೂ ಅಲ್ಜೀರಿಯಾದಲ್ಲಿ ಉತ್ತಮವಾದ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಅಲ್ಲಿನ ಪೊಲೀಸ್ ಪಡೆ ಈ ವಾಹನವನ್ನು ಆಯ್ಕೆ ಮಾಡಿದೆ.

ಭೂತಾನ್ ನಲ್ಲಿ ಮಹೀಂದ್ರಾ ಎನ್ಫೋರ್ಸರ್

ಭೂತಾನ್ ನಲ್ಲಿ ಹಲವಾರು ಭಾರತದ ಎಸ್ ಯು ವಿ ಗಳನ್ನು ರಫ್ತು ಮಾಡಿಕೊಳ್ಳುತ್ತಾಲ್ಲೆ ಇವೆ. ವಿಶ್ವರ್ಧತೆ ಹೊಂದಿರುವ ಮಹೀಂದ್ರಾ ಎನ್ಫೋರ್ಸರ್ ಅನ್ನು ಭೂತಾನ್‌ನ ಭದ್ರತಾ ಪಡೆಗಳು ಬಳಸುತ್ತಿವೆ. ಈ ಗಾಡಿಯೂ 2.5-ಲೀಟರ್ ಟರ್ಬೋಡೀಸೆಲ್ ಎಂಜಿನ್ 100 ಹೆಚ್‌ಪಿ 4-ಸಿಲಿಂಡರ್, ಮತ್ತು 240 Nm ಟಾರ್ಕ್ ಗಳನ್ನು ಉತ್ಪಾದಿಸುತ್ತದೆ. ಇದರಲ್ಲಿ 4-ವೀಲ್ ಡ್ರೈವ್ ಕಾನ್ಫಿಗರೇಶನ್‌ನ ಆಯ್ಕೆಯೂ ಇದೆ.

ಬಾಂಗ್ಲಾದೇಶದಲ್ಲಿ ಟಾಟಾ ಹೆಕ್ಸಾ

ನೆರೆಯ ದೇಶಗಳಿಗೆ ಟಾಟಾ ಮೋಟಾರ್ಸ್ ಗಳ 200 MPV ಗಳನ್ನು ಪೂರೈಸುಲು ಸಿದ್ಧವಾದ ಭಾರತವು ಟಾಟಾ ಹೆಕ್ಸಾ ಗಳನ್ನು ಬಾಂಗ್ಲಾದೇಶ ಗಳಿಗೆ ಆಮದು ಮಾಡಿತು, ನಂತರ ಈ ವಾಹನಗಳೂ ಅಲ್ಲಿನ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ವಾಹನವಾಗಿತು .ಪೊಲೀಸ್ ಸಿಬ್ಬಂದಿಗಳಿಗೆ ವಾಹನ ವಾಗಲೂ ಟಾಟಾ ಮೋಟಾರ್ಸ್ ಹೆಕ್ಸಾ ಹಲವಾರು ಕಠಿಣ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣಗೊಳಿವಾಗಿತು. ಈ ಮಾದರಿಯ ವಾಹನಗಳು ಆಲಿವ್ ಹಸಿರು ಬಣ್ಣದಲ್ಲಿರುತ್ತದೆ.

ಫಿಲಿಪೈನ್ಸ್ ನಲ್ಲಿ ಮಹೀಂದ್ರಾ ಎನ್ಫೋರ್ಸರ್

ಮಹೀಂದ್ರಾ ಕಂಪನಿಯು ಹಿಂದೂ ಮಹಾಸಾಗರದಲ್ಲಿರುವ ದ್ವೀಪಸಮೂಹವಾಗಿರುವ ಫಿಲಿಪೈನ್ಸ್‌ಗೆ ಕೂಡ ತಮ್ಮ ವಾಹನವನ್ನು ರಫ್ತು ಮಾಡಿದೆ. ಮಹೀಂದ್ರಾ ಎನ್‌ಫೋರ್ಸರ್ ಗಳನ್ನು ಪೊಲೀಸ್ ಸಿಬ್ಬಂದಿಗಳು ಪೋಲೀಸ್ ಕಾರಾನ್ನಾಗಿ ಬಳಸಲಾಗುತ್ತಿವೆ. ಇದು ಮುಂಭಾಗದಲ್ಲಿ ಬೊಲೆರೊದಂತೆ ಕಾಣುತ್ತದೆ ಹಾಗೂ ಒಂದು ಮಹೀಂದ್ರಾ ಎನ್‌ಫೋರ್ಸರ್ ನ ಬೊಲೆರೋ ಕಾರು ಇದಾಗಿದೆ. ಭಾರತದಲ್ಲಿ ತಯಾರಿಸಿ ಫಿಲಿಪೈನ್ಸ್‌ಗೆ ಆಮದು ಮಾಡಲಾಗುತ್ತದೆ. 2015 ರಲ್ಲಿಎಸ್‌ಯುವಿಗಳಿಗಾಗಿ P1.3 ಬಿಲಿಯನ್ ಖರ್ಚು ಮಾಡಿರುವ ಅಲ್ಲಿನ ಸರ್ಕಾರ ಸುಮರು 1,470 ಎನ್‌ಫೋರ್ಸರ್ ಗಳನ್ನು ತಂದಿತ್ತು.

ದಕ್ಷಿಣ ಆಫ್ರಿಕಾ ದಲ್ಲಿ ಮಹೀಂದ್ರಾ XUV500

ದಕ್ಷಿಣ ಆಫ್ರಿಕಾ ದಲ್ಲಿ ಹೆಚ್ಚೂ ಜನಪ್ರಿಯ ಆಗಿರುವ ಮಹೀಂದ್ರಾದ XUV500 SUV ಇದಾಗಿದೆ. ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆಯು ಹಿಂದಿನ ಈ ಮಾದರಿಯ ವಾಹನಗಳನ್ನು ಬಳಸುತ್ತಲೇ ಇವೆ.

ಮಾಲ್ಡೀವ್ಸ್ ನಲ್ಲಿ ಮಹೀಂದ್ರಾ ಸ್ಕಾರ್ಪಿಯೋ

ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಮಾಲ್ಡೀವ್ಸ್ ನಲ್ಲಿಯೂ ಜನಪ್ರಿಯ ಅಗಿದೆ. ಮಾಲ್ಡೀವ್ಸ್‌ನ ರಾಜಧಾನಿಯಾಗಿರುವ ಮಾಲೆಯ ಪೊಲೀಸ್ ಅಧಿಕಾರಿಗಳು ಕೂಡ ಭಾರತದ ಜನಪ್ರಿಯ ಸ್ಕಾರ್ಪಿಯೋ SUV ಅನ್ನು ಬಳಸುತ್ತಿದ್ದಾರೆ. ಈ ವಾಹನ ಅಲ್ಲಿನ ಸುರಕ್ಷತೆಗೆ ಹೆಸರಾಗಿದೆ.

ಫಿಲಿಪೈನ್ಸ್‌ನಲ್ಲಿಯೂ ಮಹೀಂದ್ರಾ ಸ್ಕಾರ್ಪಿಯೋ

ಮಾಲ್ಡೀವ್ಸ್ ಪೊಲೀಸರಂತೆ ಫಿಲಿಪೈನ್ಸ್ ಪೊಲೀಸರು ಕೂಡ ಮಹೀಂದ್ರಾ ಎನ್‌ಫೋರ್ಸರ್ ಮತ್ತು ಮಹೀಂದ್ರಾ ಸ್ಕಾರ್ಪಿಯೊವನ್ನು ಬಳಸುತ್ತಿದ್ದಾರೆ. ಅಲ್ಲಿರುವ ಭದ್ರತಾ ಪಡೆಗಳು 2016 ರಲ್ಲಿ P394 ಮಿಲಿಯನ್‌ಗಿಂತಲೂ ಹೆಚ್ಚು ಈ 4-ವೀಲ್ ಡ್ರೈವ್-ಸಜ್ಜಿತ SUV ಯ 398 ಎಸ್‌ಯುವಿಗಳನ್ನು ಖರೀದಿಸಿದ್ದರು. ಇಂದಿಗೂ ಕೂಡ ಈ ಗಾಡಿಗಳೇ ಹೆಚ್ಚು ಜನಪ್ರಿಯವಾಗಿದೆ.

ಶ್ರೀಲಂಕಾದಲ್ಲಿಯೂ ಕೂಡ ಮಹೀಂದ್ರಾ ಸ್ಕಾರ್ಪಿಯೋ

ಎಲ್ಲೆಡೆ ಜನಪ್ರಿಯ ಪಡೆದು ಹೆಸರು ಮಾಡಿರುವ ಸ್ಕಾರ್ಪಿಯೋ ನಮ್ಮ ನೆರೆಯ ರಾಷ್ಟ್ರವಾದ ಶ್ರೀಲಂಕದ ಭದ್ರತಾ ಪಡೆಗಳು ಕೂಡ ಈ ವಾಹನವನ್ನೇ ಬಳಸುತ್ತಿದ್ದಾರೆ. ಶ್ರೀಲಂಕಾ ಹಳೆಯ ಪೀಳಿಗೆಯ ಸ್ಕಾರ್ಪಿಯೊವನ್ನು ಕೂಡ ಇಂದಿಗೂ ಬಳಸುತ್ತಿದೆ ಮತ್ತು LX-ಟ್ರಿಮ್‌ನಲ್ಲಿ ಸ್ಕಾರ್ಪಿಯೊದ 485 ಯುನಿಟ್‌ಗಳನ್ನು ಕೂಡ ಪೊಲೀಸ್ ಪಡೆ ಖರೀದಿಸಿದೆ.

ಭಾರತದ ಉನ್ನತ ವಾಹನಗಳೂ ಎಲ್ಲೆಡೆ ಜನಪ್ರಿಯ ಹಾಗೂ ಹೆಸರುವಾಸಿ ಆಗಿರುವುದು ನಮ್ಮ ದೇಶಕ್ಕೆ ಒಂದು ಹೆಮ್ಮೆ ಆಗಿದೆ.

Leave A Reply

Your email address will not be published.