Covid-19 Guidelines: ಹೆಚ್ಚುತ್ತಿರುವ ಕೊರೊನಾ ಪ್ರಕರಣ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Covid-19 Guidelines: ಇತ್ತೀಚೆಗೆ ದೇಶದೆಲ್ಲೆಡೆ ದೀರ್ಘಕಾಲಿಕ ಕೆಮ್ಮು ಮತ್ತು ಜ್ವರದ(Health Problems) ಲಕ್ಷಣಗಳು ಗೋಚರಿಸುತ್ತಿದ್ದು ಈ ಲಕ್ಷಣಗಳು (H3N2 Virus)ಸೋಂಕು ಉಲ್ಬಣವಾಗುತ್ತಿದೆ. ಈ ನಡುವೆ ಕೊರೋನಾ(Covid) ಪ್ರಕರಣಗಳು ಕೂಡ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು(Union Ministry of Health and Family Welfare guidlines) ಕೋವಿಡ್ -19 ನಿಯಂತ್ರಣಕ್ಕಾಗಿ ಹೊಸ (ಪರಿಷ್ಕೃತ) ಮಾರ್ಗಸೂಚಿಗಳನ್ನು (Covid-19 Guidlines) ಬಿಡುಗಡೆ ಮಾಡಿದೆ.

ಕೋರೋನಾ ಮಹಾಮಾರಿಯು ಕೊಂಚ ತಗ್ಗಿದ್ದೆ ಎಂದು ನಿಟ್ಟುಸಿರು ಬಿಡುತ್ತಿದ್ದ ರಾಜ್ಯದ ಜನತೆಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತವು ಕೋವಿಡ್ -19 (Covid-19)ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆದರೂ ಕೂಡ, ಕಳೆದ ಕೆಲವು ವಾರಗಳಲ್ಲಿ ನಿರ್ದಿಷ್ಟವಾಗಿ ಕೆಲವು ರಾಜ್ಯಗಳಲ್ಲಿನ ಕೋವಿಡ್ ಪತ್ತೆ ಪ್ರಕರಣ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ. ಮಾರ್ಚ್ 8 ರ ವಾರದಲ್ಲಿ ಒಟ್ಟು 2,082 ಪ್ರಕರಣಗಳು ವರದಿಯಾಗಿದ್ದು, ಇದೇ ಸಂಖ್ಯೆ ಮಾರ್ಚ್ 15ರ ಸುಮಾರಿಗೆ 3,264 ಪ್ರಕರಣಗಳು ಹೆಚ್ಚಳವಾಗಿರವ ಕುರಿತು ಸಚಿವಾಲಯವು ಪತ್ರದಲ್ಲಿ ಮಾಹಿತಿ ನೀಡಿದೆ.

ಪರಿಷ್ಕೃತ (Covid-19) ಮಾರ್ಗಸೂಚಿಗಳ (Covid-19 Guidelines) ಅನುಸಾರ, ಉಸಿರಾಟದ ತೊಂದರೆ (Breathing Problems), ಅಧಿಕ ಜ್ವರ ಅಥವಾ ತೀವ್ರ ಕೆಮ್ಮು, ವಿಶೇಷವಾಗಿ 5 ದಿನಗಳಿಗಿಂತ ಹೆಚ್ಚಿನ ಕಾಲ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದೈಹಿಕ ಅಂತರ, ಒಳಾಂಗಣ ಮಾಸ್ಕ್ ಬಳಕೆ, ಕೈ ಸ್ವಚ್ಛಗೊಳಿಸುವುದು, ರೋಗಲಕ್ಷಣದ ನಿರ್ವಹಣೆ (ಜಲೀಕರಣ, ಆಂಟಿಪೈರೆಟಿಕ್ಸ್, ಆಂಟಿಟಸ್ಸಿವ್) ತಾಪಮಾನ ಪರಿಶೀಲನೆ ಮಾಡಿಸಿಕೊಳ್ಳಬೇಕು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಗೆ ಕೋವಿಡ್ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆಗಳ ಕಾರ್ಯತಂತ್ರವನ್ನು ಅನುಸರಿಸಲು ಸೂಚನೆ ನೀಡಿ ಪತ್ರ ಬರೆದಿದೆ. ಒಂದು ವೇಳೆ, ಮಧ್ಯಮ ಅಥವಾ ತೀವ್ರತರವಾದ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ರೆಮ್‌ಡೆಸಿವಿರ್ ಲಸಿಕೆಯನ್ನು (Remdesivir injection)5 ದಿನಗಳವರೆಗೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ.

ಗುಜರಾತ್​ನಲ್ಲಿ ಮಾರ್ಚ್ 8ರ ವಾರದಲ್ಲಿ 105 ಕೋವಿಡ್ ಪ್ರಕರಣಗಳ ಸಂಖ್ಯೆ ವರದಿಯಾಗಿದ್ದು, ಆದರೆ ಒಂದೇ ವಾರದಲ್ಲಿ 279 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಶೇಕಡಾವಾರು ಗಮನಿಸಿದರೆ, ಮಾರ್ಚ್ 15 ಕ್ಕೆ ಕೊನೆಗೊಂಡ ವಾರದಲ್ಲಿ ರಾಜ್ಯವು 1.11 ರಷ್ಟು ಪಾಸಿಟಿವ್ ಕೇಸ್​ ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ ಭಾರತದ ಪಾಸಿಟಿವಿಟಿ ದರ ಶೇ.0.61 ರಲ್ಲಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

Leave A Reply

Your email address will not be published.