Women : ಮಹಿಳೆಯರಿಗೆ ಹೆಚ್ಚು ಸಂಬಳ ನೀಡುವ ಬೆಸ್ಟ್‌ ಉದ್ಯೋಗಗಳಿವು!

Job for Women : ಉದ್ಯೋಗ ಮಾರುಕಟ್ಟೆಯಲ್ಲಿ ಪುರುಷರಿಗೆ (gents) ಮಾತ್ರವಲ್ಲ, ಮಹಿಳೆಯರಿಗೂ ಸಹ ಅತಿ ಹೆಚ್ಚು ಸಂಬಳ ನೀಡುವ ದೊಡ್ಡಮಟ್ಟದ ಜಾಬ್‌ಗಳಿವೆ(job).ಮಹಿಳೆಯರು ಅಂತೂ ಎಲ್ಲಾ ಕಡೆಯಲ್ಲಿಯೂ ಸೇವೆ ಸಲ್ಲಿಸುವ ಅವಕಾಶ ಹೊಂದಿದ್ದಾರೆ. 2023 ರಲ್ಲಿ ಅಂತೂ ಎಲ್ಲಾ ಕಡೆಯಲ್ಲು ಮಹಿಳೆಯರೇ ಮೇಲು ಗೈ ಎನ್ನುವ ರೀತಿಯಲ್ಲಿ ಸೇವೆ ಅಥವಾ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಪಡೆಯುವ ಸಂಬಳದಲ್ಲಿ(salary) ಮಿಲಿಟರಿ(military)ಸೇವೆಯ ಜೊತೆಗೆ ಪೈಲೆಟ್(pilot) ಆಗುವವರೆಗೆ ಉತ್ತಮ ಸಂಬಳದ ಜಾಬ್ ಪಡೆಯಬಹುದು. ಮಹಿಳೆಯರು(Job for Women) ಯಾವ ರೀತಿ ಹೆಚ್ಚು ಸಂಬಳ ಪಡೆಯಬಹುದಾದ ಹುದ್ದೆಗಳು(job) ಇದೆ ಎಂದು ತಿಳಿಯೋಣ ಬನ್ನಿ.

 

2023 ರಲ್ಲಿ ಇರುವ ಮಹಿಳೆಯರಿಗೆ ಇಂದು ಎಲ್ಲ ಕ್ಷೇತ್ರದಲ್ಲಿಯೂ ಉದ್ಯೋಗ ಪಡೆಯುವ ಅವಕಾಶ ಇದೆ. ಮಹಿಳೆಯರು ಪೈಲಟ್‌ ಆಗಬಹುದು ಅಥವಾ ಮಿಲಿಟರಿಗೆ ಸೇರಬಹುದು. ಹೀಗೆ ಯಾವುದೇ ಕ್ಷೇತ್ರದಲ್ಲಿ ಮಹಿಳೆ ದುಡಿಯಲು(work) ಅರ್ಹತೆಯನ್ನು ಹೊಂದಿರುವವಳು. ಪುರುಷರಷ್ಟೇ ಕೆಲಸವನ್ನು ಮಾಡಲು ಮಹಿಳೆಯರು ಹಿಂದು ಮುಂದಾಗಿದ್ದಾರೆ.ಮಹಿಳೆಯರೇ ಬಾಸ್(Boss) ಆಗಿರುವ ಅದೆಷ್ಟೋ ಕಂಪನಿಗಳು(company) ಭಾರತದಲ್ಲಿ (India)ಇದೆ.

ಕಟ್ಟಡ ನಿರ್ಮಾಣ ಕಾರ್ಯ(construction work) ಎಷ್ಟು ಹೆಸರನ್ನು ಹೆಚ್ಚಿಸಿಕೊಂಡಿದೆ ಎಂದರೆ ಇತ್ತೀಚೆಗಂತೂ ಅದನ್ನು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಆರ್ಕಿಟೆಕ್ಚರ್ (architecture)ಪ್ರೊಫೇಶನಲ್‌ಗಳಿಗೂ(professional) ಖ್ಯಾತಿ(famous) ಹೆಚ್ಚಿದೆ. ಆರ್ಕಿಟೆಕ್ಚರ್‌ನಲ್ಲಿ ಡಿಗ್ರಿ ಮಾಡುವ ಮೂಲಕ ಕಲೆಗಳ ಯೋಜನೆ ರೂಪಿಸುವುದು, ಡಿಸೈನ್(design) ಮತ್ತು ಭೌತಿಕ ಸ್ಟ್ರಕ್ಚರ್‌ಗಳನ್ನು ರೂಪಿಸುವ ಕೆಲಸ ಇದು. ಈ ಹುದ್ದೆಗೆ 8.2 ಲಕ್ಷದಿಂದ 40 ಲಕ್ಷವರೆಗೆ ವರ್ಷಕ್ಕೆ ಹಣವನ್ನು ಪಡೆದುಕೊಳ್ಳುವಂತಹ ಹುದ್ದೆ ಆಗಿದೆ.

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್(influencer) ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾರ್ಕೆಟಿಂಗ್(social media marketing) ಮಾಡುವ ಹುದ್ದೆಗಳ ಮೂಲಕ ಹೆಚ್ಚು ಹಣವನ್ನು ಪಡೆಯಬಹುದು. ಹೇಗೆ ಎಂದರೆ ಈ ಹುದ್ದೆಗೆ ಯಾವುದೇ ವಯಸ್ಸಿನ ಮಿತಿ(age bar) ಇರುವುದಿಲ್ಲ. ಸ್ಕಿಲ್(skill) ಅಷ್ಟೆ ಮುಖ್ಯವಾಗುತ್ತದೆ. ಉತ್ತಮ ಕಂಟೆಂಟ್‌(content) ರಚಿಸುವ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ. ನೀವು ಎಷ್ಟು ಎತ್ತರಕ್ಕೆ ಬರುತ್ತೀರೋ ಹಾಗೆಯೇ ಎಷ್ಟು ಗಳಿಕೆಯನ್ನು ಪಡೆಯುತ್ತೀರಾ ಎಂಬುದು ನಿಮ್ಮ ಫಾಲೋವರ್ಸ್‌ಗಳ ಮೇಲೂ ಡಿಪೆಂಡ್ ಆಗಿರುತ್ತದೆ.

50 ಸಾವಿರ ಫಾಲೋವರ್ಸ್‌ ಅನ್ನು ಕೋರಾ.ಕಾಂ ನಲ್ಲಿ ಹೊಂದಿರುವ ಭಾರತೀಯ ಇನ್‌ಫ್ಲುಯೆನ್ಸರ್ ಒಬ್ಬರು ಕೇವಲ ಒಂದು ಪೋಸ್ಟ್‌ಗೆ(post) 25,000-50,000 ವರೆಗೆ ಹಣ ಪಡೆಯುತ್ತಾರಂತೆ.
ಇನ್ನು ಸೋಷಿಯಲ್ ಮೀಡಿಯಾ ಮ್ಯಾನೇಜರ್ ಹುದ್ದೆಗಳಿಗೆ(manager work) 4.5 ಲಕ್ಷದಿಂದ 12.1 ಲಕ್ಷದವರೆಗೆ ಹಣ ದೊರಕಲಿದೆ.

ಮಹಿಳೆಯರಿಗೆ ಹೆಚ್ಚು ಸಂಬಳ ಸಿಗುವ ಮತ್ತೊಂದು ಹುದ್ದೆ ಇದೆ. ಅದು ಯಾವುದೆಂದರೆ ಒಂದು ಪ್ರಾಡಕ್ಟ್‌ ನ ಪೂರ್ಣ ಲೈಫ್‌ ಸೈಕಲ್ ಅನ್ನು ಉತ್ತಮವಾಗಿ ನೋಡಿಕೊಳ್ಳುವುದು ಇವರ ಕೆಲಸ. ಈ ಕೆಲಸ ಮಾಡಲು UX, ಇತರೆ ಟೆಕ್ನಿಕಲ್ ಸ್ಕಿಲ್‌ಗಳು ಬೇಕು. ಅಲ್ಲದೇ ಬ್ಯುಸಿನೆಸ್‌ ಅನ್ನು ಉತ್ತಮವಾಗಿ ಲೀಡ್ ಮಾಡಲು ಮಾತನಾಡುವ ಕೌಶಲ್ಯ ಚೆನ್ನಾಗಿ ಗೊತ್ತಿರಬೇಕು. ಇದರಲ್ಲಿ 5.2 ಲಕ್ಷದಿಂದ 35 ಲಕ್ಷದವರೆಗೆ ಹಣವನ್ನು ದುಡಿಯಬಹುದು.

ಎಲ್ಲಾ ಸಮಯದಲ್ಲಿ ಬೇಡಿಕೆ ಇರುವ ಹುದ್ದೆ ಇದೆ ನೋಡಿ. ಕಂಪ್ಯೂಟರ್ ಸೈನ್ಸ್‌ ಅಥವಾ ಸಾಫ್ಟ್‌ವೇರ್‌ ಇಂಜಿನಿಯರ್ ಅನ್ನು ಓದಿರಬೇಕು. ಐಟಿ ಸೆಕ್ಟಾರ್‌ನಲ್ಲಿ(IT sector) ಸದಾ ಈ ಹುದ್ದೆಗೆ ಅವಕಾಶಗಳು ಜಾಸ್ತಿ ಆಗಿ ಇರುತ್ತವೆ. ಈ ಹುದ್ದೆಗೆ ವರ್ಷದಲ್ಲಿ13 ಲಕ್ಷದವರೆಗೆ ಸಂಬಳ ಭಾರತದಲ್ಲಿದೆ. ಆರಂಭದಲ್ಲಿಯೇ 4.8 ಲಕ್ಷವರೆಗೆ ವರ್ಷದ ಸಂಬಳ(salary) ಪಡೆಯಬಹುದು.

ಮಹಿಳೆಯರಿಗೆ (womens)ಹೆಚ್ಚು ಸಂಬಳ ನೀಡುವ ಹುದ್ದೆಗಳ ಬಗ್ಗೆ ನೋಡುವುದಾದರೆ ನಾವು ಮೇಲಿನ ವಿಷಯಗಳನ್ನು ಕೇವಲ ಬೆರಳೆಣಿಕೆಯಲ್ಲಿ ತೆಗೆದುಕೊಳ್ಳಬಹುದು. ಏಕೆಂದರೆ ನಾವು ನಮ್ಮ ಆಸಕ್ತಿಯನ್ನುಅಥವಾ ನಮ್ಮ ಹೊಸ ರೀತಿಯ ಬೆಳವಣಿಗೆಯನ್ನು ಸೃಷ್ಟಿಸಿಕೊಂಡರೆ ಆಸಕ್ತಿ ಕ್ಷೇತ್ರದಲ್ಲಿ ಬಾಸ್ ಆಗಲು ಸಾಧ್ಯವಾಗುತ್ತದೆ. ಇದರ ಬಗ್ಗೆ ಮಹಿಳೆಯರು ಹೆಚ್ಚು ತಿಳಿದುಕೊಂಡು ತಮ್ಮ ಕೈಗೆ ಹೆಚ್ಚಿನ ವೇತನವನ್ನು(salary) ಪಡೆದುಕೊಳ್ಳಬಹುದು.

Leave A Reply

Your email address will not be published.