Tirupati Balaji : ತಿರುಪತಿ ಬಾಲಾಜಿ ಪ್ರವಾಸ ಕೈಗೊಳ್ಳುವವರೇ ಇತ್ತ ಗಮನಿಸಿ! ಇಲ್ಲಿದೆ ಪ್ಯಾಕೇಜ್‌ ವಿವರ

Tirupati Temple Trip : ಚಿತ್ತೂರು ಜಿಲ್ಲೆಯ (Chittoor district)ಆಂಧ್ರಪ್ರದೇಶದಲಿರುವ (Andhra Pradesh) ತಿರುಪತಿಯು (Tirupati)ಹಿಂದೂ ಧರ್ಮದವರು (Hindu religion) ಮೊದಲಿನಿಂದಲು ಆರಾಧನೆ ಮಾಡಿಕೊಂಡು ಬಂದ ಬೃಹತ್ ದೇವಾಲಯವಾಗಿದೆ(temple). ಭಕ್ತಿಯಿಂದ ಶ್ರೀ ವೆಂಕಟರಮಣ ದೇವರ ಆಶೀರ್ವಾದವನ್ನು (blessings) ಪಡೆದುಕೊಳ್ಳಲು ಇಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತಾಭಿಮಾನಿಗಳು ಭೇಟಿ ನೀಡುತ್ತಾರೆ. ತಿರುಮಲ ಬೆಟ್ಟದ ಮೇಲಿರುವ ಈ ದೇವಾಲಯವು ಬೆಟ್ಟದ ಕೆಳಗೆ ನೋಡಿದರೆ ತಿರುಪತಿ ಪಟ್ಟಣದ ಸಂಪೂರ್ಣ ದೃಶ್ಯವನ್ನು ನೋಡಲು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಇಲ್ಲಿಗೆ ಅನೇಕ ಪ್ರವಾಸಿಗರು ದೇವರ ದರ್ಶನಕ್ಕಾಗಿ ಭೇಟಿ ನೀಡುತ್ತಲೇ ಇರುತ್ತಾರೆ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಭಾರತೀಯ ರೈಲ್ವೆ(railway) ತಿರುಪತಿ ಬಾಲಾಜಿ ಪ್ರವಾಸ(Tirupati Temple Trip) ಪ್ಯಾಕೇಜ್ ಅನ್ನು ಆರಂಭ ಮಾಡಿದ್ದು ಇದು ಪ್ರವಾಸಿಗರಿಗೆ ಸಂತಸದ ವಿಷಯವೆನಿಸಿದೆ.

 

ತಿರುಪತಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಹಲವಾರು ದೇವಾಲಯಗಳು ಮೊದಲಿನಿಂದಲೂ ಪ್ರಸಿದ್ಧಿಯನ್ನು (famous) ಪಡೆದುಕೊಂಡು ಬಂದಿದೆ. ಹಾಗೆಯೇ  ಸುತ್ತಮುತ್ತ ಇರುವ ಪರಿಸರಗಳನ್ನು ನೋಡಿ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ.

ತಿರುಪತಿಯಿಂದ 5 ಕಿಮೀ ದೂರದಲ್ಲಿರುವ ಅತ್ಯಂತ ಹಳೆಯ ಪ್ರವಾಸಿ ಸ್ಥಳಗಳಲ್ಲಿ ತಿರುಚಾನೂರ್(tiruchanur) ಕೂಡಾ ಒಂದಾಗಿದೆ. ಇದು ವೆಂಕಟರಮಣ ದೇವರ ಪತ್ನಿ ಶ್ರೀ ಪದ್ಮಾವತಿ (Padmavati)ದೇವಿಯ ವಾಸಸ್ಥಾನವಾಗಿದೆ. ತಿರುಚಾನೂರ್ ಪಟ್ಟಣವನ್ನು “ಅಲರ್ಮೆಲ್ಮಂಗಪುರಂ”ಅಥವಾ ಅಲಿಮೇಲುಮಂಗಪುರಂ ಎಂದೂ ಕರೆಯಲಾಗುತ್ತದೆ. ದೇವಾಲಯದ ದಂತಕಥೆಯ ಪ್ರಕಾರ, ಮಹಾಲಕ್ಷ್ಮಿ ದೇವಿಯು ಚಿನ್ನದ ಕಮಲದ ಮೇಲೆ ಪದ್ಮಾವತಿ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈ ಸ್ಥಳವು “ಅಲರ್ಮೇಲ್ಮಂಗಪುರಂ” ಎಂದು ಪ್ರಸಿದ್ಧವಾಗಿದೆ. ಇಂತಹ ಅನೇಕ  ಗತಕಾಲಗಳಿಂದ ನಂಬಿಕೊಂಡು ಬಂದಂತಹ ಕಲೆಗಳ ಬಗ್ಗೆ ನೋಡಲು ಪ್ರವಾಸಿಗರಿಗೆ ಐಆರ್ ಸಿಟಿಸಿ(IRCTC) ಹೊಸ ಪ್ರವಾಸ ಪ್ಯಾಕೇಜ್ ನ ಅವಕಾಶವನ್ನು ನೀಡಿದೆ.

ತಿರುಪತಿ ಬಾಲಜಿ ಪ್ರವಾಸದ ಪ್ಯಾಕೇಜ್ ನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ತಿರುಪತಿ ಬಾಲಕಿ ದರ್ಶನ ಭಕ್ತಾಭಿಮಾನಿಗಳಿಗೆ ಮೂರು ದಿನಗಳ ಪ್ಯಾಕೇಜ್ ಆಗಿದೆ. ತಿರುಮಲ, ಕಲಹಾಸ್ತಿ ದೇವಾಲಯ(kalahasti temple), ಪದ್ಮಾವತಿ ದೇವಾಲಯ ಪ್ಯಾಕೇಜ್‌ನ ಸ್ಥಳವಾಗಿದೆ. ತ್ರಿವಾಡ್ರಮ್ ಸೆಂಟ್ರಲ್, ಕೊಲ್ಲಂ, ಕೊಟ್ಟಯಂ, ಎರ್ನಾಕುಲಂ ಟೌನ್, ಆಲುವ, ತ್ರಿಶೂರ್, ಶೋರನೂರ್, ಒಟ್ಟಪ್ಪಲಂ, ಪಾಲಕ್ಕಾಡ್, ಕೋಯಂಬುತ್ತೂರ್, ಇರೋಡ್ ಬೋರ್ಡಿಂಗ್ ಸ್ಟೇಷನ್‌ಗಳಾಗಿದೆ. 31.03.2023ರಂದು ಪ್ರವಾಸ ಆರಂಭವಾಗಲಿದೆ. 69 ಆಸನಗಳ ಸ್ಪೀಪರ್ ಕ್ಲಾಸ್ ರೈಲು ಇದಾಗಿದೆ. ಪ್ರತಿ ವ್ಯಕ್ತಿಗೆ 5,920 ರೂಪಾಯಿಯಿಂದ 8,770 ರೂಪಾಯಿವರೆಗೆ ಟಿಕೆಟ್ ಹಣವಿದೆ. ಹಾಗೆಯೇ ವಿಮಾ ಸುರಕ್ಷತೆಯನ್ನು ಬಳಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ಪ್ಯಾಕೇಜ್ ಹೆಸರು ತಿರುಪತಿ ಬಾಲಜಿ ದರ್ಶನ,ಒಟ್ಟು ಮೂರು ದಿನದ ಪ್ರವಾಸ. ಪ್ರವಾಸಿಗರು ಭೇಟಿ ನೀಡುವ ಸ್ಥಳ ತಿರುಮಲ, ಕಲಹಾಸ್ತಿ ದೇವಾಲಯ, ಪದ್ಮಾವತಿ ದೇವಾಲಯ. ಪ್ರವಾಸಿಗರು ಪ್ರವಾಸ ಮಾಡಲು ಇರುವ ಸಂಖ್ಯೆ – ರೈಲು ಸಂಖ್ಯೆ 17229 (ಆರಂಭ) ಮತ್ತು ರೈಲು ಸಂಖ್ಯೆ 17230 (ವಾಪಾಸ್) ಅದರಲ್ಲಿ ಸಿಂಗಲ್  8,770 ರೂಪಾಯಿ,ಡಬಲ್ 7,100 ರೂಪಾಯಿ,ಟ್ರಿಪಲ್ 7,000 ರೂಪಾಯಿ.

ತಿರುಪತಿ ದೇವಸ್ಥಾನವು ಶ್ರೀಮಂತಿಕೆಗೆ(rich) ಹೆಸರಾದ ದೇವಾಲಯ ಎಂದೇ ಪ್ರಸಿದ್ಧಿಯಾಗಿದೆ.ತಿರುಮಲ ಬೆಟ್ಟದಲ್ಲಿನ ವೆಂಕಟರಮಣ ದೇವಾಲಯವು ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ(Hindu religion)ಒಂದಾಗಿದೆ ಎನ್ನಬಹುದು. ಶ್ರೀಮಂತಿಕೆಗೆ(rich) ಹಾಗೂ ಭಾರೀ ಹುಂಡಿ ಹಣ ಸಂಗ್ರಹದ ಮೂಲಕವೇ ಹೆಸರುವಾಸಿಯಾದ ಈ ದೇವಾಲಯದಲ್ಲಿ 2022ರಲ್ಲಿ 1450 ಕೋಟಿ ರೂಪಾಯಿಯ ಹುಂಡಿ ಸಂಗ್ರಹವು ಭಾರೀ ಪ್ರಮಾಣದಲ್ಲಿ ಆಗಿದೆ. 2022ರಲ್ಲಿ ತಿರುಮಲ ದೇವಾಲಯಕ್ಕೆ 2.37 ಕೋಟಿ ಭಕ್ತ ಅಭಿಮಾನಿಗಳು ಆಗಮಿಸಿದ್ದಾರೆ.

ದೇವಾಲಯಕ್ಕೆ ಹುಂಡಿಗೆ ಭಕ್ತರು ಹಾಕಿದ ಹಣದ ಮೂಲಕ ಸುಮಾರು 853.41 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಹಾಗೆಯೇ ಸುಮಾರು 1.04 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವರ್ಷ ಭಕ್ತರ ಸಂಖ್ಯೆಯು ದುಪ್ಪಟ್ಟಾಗಿದೆ. ಹುಂಡಿ ಸಂಗ್ರಹವೂ ಕೂಡಾ ಅಧಿಕವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ದೇವರ ದರ್ಶನವನ್ನು ಪಡೆದುಕೊಳ್ಳಲು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಈ ವರ್ಷದ ತಿರುಪತಿ ಬಾಲಾಜಿ ಪ್ಯಾಕೇಜ್ ಪ್ರವಾಸವನ್ನು ಕಲ್ಪಿಸಿಕೊಟ್ಟಿದೆ.

Leave A Reply

Your email address will not be published.