Siddaramaiah: ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸಬೇಕೆಂದು ಹೈಕಮಾಂಡ್ ಹೇಳಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ!
Congress Leader : ಕಾಂಗ್ರೆಸ್ ನಾಯಕ (Congress Leader ) ಸಿದ್ದರಾಮಯ್ಯ (Siddaramaiah) ಈ ಬಾರಿ ಎಲೆಕ್ಷನ್ ಅಲ್ಲಿ ಕೋಲಾರದಿಂದ ಸ್ಪರ್ಧಿಸೋದಾಗಿ ಘೋಷಣೆ ಮಾಡಿ ಪ್ರಚಾರವನ್ನೂ ಶುರುಮಾಡಿದ್ದರು. ಆದರೆ ಈ ನಡುವೆ ಸಿದ್ದುಗೆ ಹೈಕಮಾಂಡ್ (High Command) ಕೋಲಾರದಿಂದ ಸ್ಪರ್ಧೆ ಮಾಡೋದು ಬೇಡವೆಂದು, ವರುಣಾದಿಂದಲೇ ಸ್ಪರ್ಧಿಸಿ ಎಂದು ಟ್ವಿಸ್ಟ್ ನೀಡಿದೆ. ಆದರೆ ಇಷ್ಟು ದಿನ ಸುಮ್ಮನಿದ್ದ ಹೈಕಮಾಂಡ್ ಇದೀಗ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧೆ ಮಾಡಬೇಕೆಂದು ಹೇಳಿದ್ಯಾಕೆ?
ಹೌದು, ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಹೈಕಮಾಂಡ್ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಕೋಲಾರದಿಂದ (Kolara) ಸ್ಪರ್ಧಿಸಲು ಸಿದ್ದರಿದ್ದರೂ ಹೈಕಮಾಂಡ್ ನಾಯಕರು ಮಾತ್ರ ರೆಡ್ ಸಿಗ್ನಲ್ ತೋರಿಸಿದ್ದಾರೆ. ನೀವು ವರುಣಾದಿಂದಲೇ (Varuna) ಸ್ಪರ್ಧಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಟಿ ನರಸೀಪುರದಿಂದ ಸುನೀಲ್ ಬೋಸ್ ಬೇಡ. ಹೆಚ್‍ಸಿ ಮಹದೇವಪ್ಪ ಕಣಕ್ಕಿಳಿಯಲಿ ಎಂದು ಹೈಕಮಾಂಡ್ ಹೇಳಿದೆ. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಅನ್ಯಮಸ್ಕರಾಗಿಯೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ ಹೈಕಮಾಂಡಿನ ಈ ನಡೆಯ ಉದ್ದೇಶ ಏನು?
ಅಂದಹಾಗೆ ಬಲ್ಲ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ‘ಕೋಲಾರದಲ್ಲಿ ನಡೆಸಿದ ಸರ್ವೇ ವರದಿ ನಿಮಗೆ ಪೂರಕವಾಗಿಲ್ಲ. ಅಲ್ಲಿ ಸುಲಭವಾಗಿ ಗೆಲುವು ದಕ್ಕುವ ಸ್ಥಿತಿ ಇಲ್ಲ. ಕೋಲಾರ ನಾಯಕರ ಒಳ ಜಗಳ ನಿಮಗೆ ಸಮಸ್ಯೆಯಾಗುವ ಸಾಧ್ಯತೆ ಇದ್ದು ಕಠಿಣ ಶ್ರಮದ ಅಗತ್ಯವಿದೆ. ನಿಮ್ಮ ಪರ ಇಲ್ಲಿ ಕೆಲಸ ಮಾಡಲು ಗಟ್ಟಿ ನಾಯಕರ ಅಗತ್ಯವಿದೆ. ಆದರೆ ಕೋಲಾರದಲ್ಲಿ ಅಂತಹ ಮಹಾನ್ ನಾಯಕರು ಯಾರೂ ಇಲ್ಲ’ ಎಂದು ರಾಷ್ಟ್ರೀಯ ನಾಯಕರು ಸಿದ್ದುಗೆ ತಿಳಿಸಿದ್ದಾರಂತೆ.
ಅಲ್ಲದೆ ‘ಕೋಲಾರ ನಗರದಲ್ಲಿ ನಿಮ್ಮ ಪರ ಅಲೆ ಇದ್ದರೆ ಗ್ರಾಮೀಣ ಭಾಗದಲ್ಲಿ ಆ ಅಲೆ ಇಲ್ಲ. ಹಳ್ಳಿ ಭಾಗದಲ್ಲಿ ಜೆಡಿಎಸ್, ಬಿಜೆಪಿ ಪರ ಅಲೆಯಿದೆ. ಒಂದು ವೇಳೆ ನೀವು ಕೋಲಾರದಿಂದ ಸ್ಪರ್ಧಿಸಿದರೆ ಬಿಜೆಪಿ, ಜೆಡಿಎಸ್ ಒಂದಾಗಿ ನಿಮ್ಮನ್ನು ಕಟ್ಟಿ ಹಾಕಲು ಪ್ರಯತ್ನಿಸಬಹುದು. ಆಗ ನೀವು 15, 20 ದಿನ ಅಲ್ಲೇ ಪ್ರಚಾರ ನಡೆಸಬೇಕಾಗುತ್ತದೆ. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮ ಸೇವೆ ಅಗತ್ಯವಾಗಿದೆ. ಈ ಕಾರಣಕ್ಕೆ ನೀವು ಕೋಲಾರ ಬದಲು ವರುಣಾದಿಂದಲೇ ಕಣಕ್ಕಿಳಿಯಬೇಕು. ಕೊನೆಯ ಚುನಾವಣೆಯ ಸಮಯದಲ್ಲಿ ಜಾಸ್ತಿ ರಿಸ್ಕ್ ತೆಗೆದುಕೊಳ್ಳುವುದು ಬೇಡ. ನಿಮ್ಮ ಪುತ್ರ ಯತೀಂದ್ರಗೆ ಮುಂದೆ ಸೂಕ್ತ ಅವಕಾಶ ನೀಡುತ್ತೇವೆ’ ಎಂದು ಭರವಸೆಯನ್ನೂ ಹೈಕಮಾಂಡ್ ಕೊಟ್ಟಿದೆಯಂತೆ.
ಈ ಬೆನ್ನಲ್ಲೇ ಕೋಲಾರ ಪ್ರವಾಸ ರದ್ದು ಮಾಡಿದ ಸಿದ್ದರಾಮಯ್ಯ ತುರ್ತಾಗಿ ಕೋಲಾರ ನಾಯಕರನ್ನು ಮನೆಗೆ ಕರೆಸಿ ಗೌಪ್ಯ ಸಭೆ ಮಾಡಿದ್ದಾರೆ. ಆದರೆ ಈ ಸಭೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಶ್ರೀನಿವಾಸಗೌಡ ಸೇರಿ ಕೋಲಾರದ ಪ್ರಮುಖರೇ ಗೈರಾಗಿದ್ದರು. ಈ ಮೂಲಕ ಹೈಕಮಾಂಡ್ ತೀರ್ಮಾನವನ್ನು ವಿರೋಧಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಮಧ್ಯೆ, ಮಾರ್ಚ್ 24ರಿಂದ 31ರವರೆಗೆ ಏಳು ಜಿಲ್ಲೆಗಳಲ್ಲಿ ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ಕೂಡ ಸಿದ್ದರಾಮಯ್ಯ ದಿಢೀರ್ ಆಗಿ ರದ್ದು ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಾನಾ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಆದರೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತ್ರ ಏನೂ ಪ್ರತಿಕ್ರಿಯಿಸದೆ ಇರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲೇ ಬಿಜೆಪಿ ಶಾಸಕ ರಾಜೂ ಗೌಡ ಮಾತನಾಡಿ ಸಿದ್ದರಾಮಯ್ಯನ ಸೋಲಿಸಲು ಕಾಂಗ್ರೆಸ್ ಒಳಗೆ ಹುನ್ನಾರ ನಡೆಯುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯನನ್ನು ಪ್ರಶ್ನಿಸಿದರೆ ನಿಮಗೆ ಈ ರೀತಿ ಹೇಳಿದ್ದು ಯಾರು? ಅಭ್ಯರ್ಥಿಗಳ ಹಂಚಿಕೆ ಸಭೆಯಲ್ಲಿ ನನ್ನ ಬಗ್ಗೆ ಚರ್ಚೆಯೇ ನಡೆದಿಲ್ಲ. ವರುಣಾದಲ್ಲಿ ಪುತ್ರ ಯತೀಂದ್ರ ನಿಲ್ಲುತ್ತಾನೆ. ಹೈಕಮಾಂಡ್ ಹೇಳಿದ ಕಡೆ ನಾನು ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.