Assembly Election 2023: ಸಿದ್ದರಾಮಯ್ಯನ ಸೋಲಿಸಲು ಕಾಂಗ್ರೆಸ್‌ನಲ್ಲೇ ನಡೀತಿದೆ ಮಾಸ್ಟರ್ ಪ್ಲ್ಯಾನ್: ಸ್ಫೋಟಕ ವಿಚಾರ ಬಿಚ್ಚಿಟ್ಟ ಶಾಸಕ ಹೇಳಿದ್ದೇನು?

Siddaramaiah and Congress : ಪ್ರತೀ ವಿಧಾನಸಭೆ ಚುನಾವಣೆಯಲ್ಲೂ ಕ್ಷೇತ್ರ ಬದಲಾಯಿಸುತ್ತಿರೋ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah and congress) ಈ ಬಾರಿ ಕೋಲಾರ(Kolara) ಕ್ಷೇತ್ರದಿಂದ ಸ್ಪರ್ಧಿಸೋದಾಗಿ ಘೋಷಣೆ ಮಾಡಿ, ಪ್ರಚಾರಗಳನ್ನು ಕೈಗೊಂಡು ಗೆಲುವಿನ ಕನಸು ಕಂಡಿದ್ದರು. ಆದರೆ ಮೊನ್ನೆ ನಡೆದ AICC ಸಭೆಯಲ್ಲಿ ಸಿದ್ಧು ಕೋಲಾರದಿಂದ ಸ್ಪರ್ಧಿಸೋದು ಬೇಡ, ವರುಣಾದಿಂದಲೇ ಕಣಕ್ಕಿಳಿಯಲಿ ಎಂದು ಕಾಂಗ್ರೆಸ್(Congress) ಹೈಕಮಾಂಡ್ ಹೇಳಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಿದ್ದರಾಮಯ್ಯರನ್ನ ಸೋಲಿಸಲು ಕಾಂಗ್ರೆಸ್‌ನಲ್ಲೇ ಹುನ್ನಾರ ನಡೆಯುತ್ತಿದೆ ಅಂತ ಬಿಜೆಪಿ ಶಾಸಕ ರಾಜೂಗೌಡ(Raju Gowda) ಹೊಸ ಬಾಂಬ್‌ ಸಿಡಿಸಿದ್ದಾರೆ.

 

ಹೌದು, ಸಿದ್ದರಾಮಯ್ಯಗೆ ಕೋಲಾರದಲ್ಲಿ (Kolar) ಸ್ಪರ್ಧಿಸುವುದು ಬೇಡ ಎಂದು ರಾಹುಲ್ ಗಾಂಧಿ(Rahul Gandhi) ಹೇಳುವುದು ತಪ್ಪು. ಸಿದ್ದರಾಮಯ್ಯ ಎಲ್ಲಾ ಪ್ಲಾನ್‌ ಹಾಕಿಕೊಂಡೇ ಕೋಲಾರಕ್ಕೆ ಹೋಗಿದ್ರು, ಅವರನ್ನ ಪಕ್ಷದವರೇ ಸೋಲಿಸಲು ಪ್ಲಾನ್‌ ಹಾಕ್ತಿದ್ದಾರೆ. ಸಿದ್ದರಾಮಯ್ಯ ಸ್ವತಃ ಕೋಲಾರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ರು, ಅವರೊಬ್ರು ಕಾಂಗ್ರೆಸ್ಸಿನ ಪ್ರಮುಖ ನಾಯಕರು, ಅವರಿಗೆ ಇಂತ ಪರಿಸ್ಥಿತಿ ಬರಬಾರದು. ಘೋಷಣೆಗೂ ಮುನ್ನ ಬೇಡ ಅಂದಿದ್ರೆ ಸರಿಯಿತ್ತು, ಅವರೇ ಘೋಷಣೆ ಮಾಡಿದ ಬಳಿಕ ಈಗ ಬೇಡ ಅನ್ನೋದು ತಪ್ಪು, ಇಲ್ಲಿನ ಕೆಲ ಕೈಗಳು ರಾಹುಲ್‌ ಗಾಂಧಿಗೆ ಮೆಸೇಜ್‌ ಕಳುಹಿಸಿ ಸಿದ್ದು ಸ್ಪರ್ಧಿಸೋದು ಬೇಡ ಅನಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯವಾಗಿ ಎತ್ತರಕ್ಕೆ ಬೆಳೆದಾಗ ಸ್ವಪಕ್ಷದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅವರ ಪಕ್ಷದವರೇ ಸೋಲಿಸಲು ಪ್ಲ್ಯಾನ್‌ ಮಾಡುತ್ತಿರಬಹುದು. ಇದು ರಾಹುಲ್ ಗಾಂಧಿಗೆ ಮೆಸೇಜ್ ತಲುಪಿ ಈ ರೀತಿ ಹೇಳಿರಬಹುದು. ಆದರೆ ಕೋಲಾರದಲ್ಲಿ ಸ್ಪರ್ಧೆ ಬೇಡ ಅನ್ನೋದು ತಪ್ಪು, ಅವರೊಬ್ಬ ದೊಡ್ಡ ನಾಯಕರು. ದೇವೆಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇಂತವರಿಗೆ ಕ್ಷೇತ್ರದ ಬಗ್ಗೆ ನಿರ್ಧಾರ ಮೊಡೋದಕೆ ಯಾರೂ ಹೇಳುವಂತಿಲ್ಲ. ನಿಂತರೂ ಬೇಡ ಎನ್ನುವುದು ತಪ್ಪು ಎಂದಿದ್ದಾರೆ.

ಒಟ್ಟಿನಲ್ಲಿ ಇದನ್ನೆಲ್ಲ ಗಮನಿಸಿದರೆ ಸಿದ್ದರಾಮಯ್ಯನನ್ನು ಸೋಲಿಸಲು ಕಾಂಗ್ರೆಸ್ ನವರೇ ಪ್ಲಾನ ಮಾಡಿದಂತಿದೆ. ಈ ಎಲ್ಲಾ ಬೆಳವಣಿಗೆಗಳನ್ನೆಲ್ಲ ಗಮನಿಸಿದ್ರೆ ಏನೋ ಕುತಂತ್ರ ನಡೆದಂತಿದೆ. ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬರಬಾರದಿತ್ತು ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ :  Free Medical College: MBBS ಕನಸು ಕಂಡ ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿ!

Leave A Reply

Your email address will not be published.