Hindu : ಹಿಂದೂ ಧರ್ಮದ ಹೆಣ್ಣುಮಕ್ಕಳನ್ನು ಅವಮಾನಿಸುವವರ ಕೈಗಳನ್ನು ಕಡಿಯುವುದಾಗಿ ಬಿಜೆಪಿಯ ನಾಯಕ ಘೋಷಣೆ

Share the Article

Sanatana Dharm : ಸನಾತನ ಹಿಂದೂ ಧರ್ಮಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಅವಮಾನಿಸುವವರ ಕೈಗಳನ್ನು ಕಡಿಯುವುದಾಗಿ ಬಿಜೆಪಿಯ ಲೋಕಸಭಾ ಸಂಸದ ಹಾಗೂ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ (Ashwini Kumar Chaubey) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಮ್ಮಸನಾತನ ಧರ್ಮದ (Sanatana Dharm) ಹೆಣ್ಣುಮಕ್ಕಳು ನಮ್ಮ ದೇಶದ ಹೆಣ್ಣುಮಕ್ಕಳು. ಯಾರೆಲ್ಲ ಅವರ ಗೌರವ ಮತ್ತು ಘನತೆಯೊಂದಿಗೆ ಆಟವಾಡುತ್ತಾರೋ ಅಂತವರ ಕೈಗಳನ್ನು ಕತ್ತರಿಸುತ್ತೇನೆ. ಒಂದು ವೇಳೆ, ಆರ್‌ಜೆಡಿ ನಾಯಕರು ತಮ್ಮ ಹೆಣ್ಣು ಮಕ್ಕಳನ್ನು ಮದುವೆಗಾಗಿ ಇತರ ಸಮುದಾಯದ ಜನರಿಗೆ ನೀಡುವುದಾದರೆ, ಅವರು ಹಾಗೆ ಮಾಡಲು ಸ್ವತಂತ್ರರು. ಭಾರತವು ಹಿಂದೂ ರಾಷ್ಟ್ರವಾಗಿದೆ. ಮತ್ತು ಅದು ಹಾಗೆಯೇ ಉಳಿಯುತ್ತದೆ ಎಂದು ಚೌಬೆ ಶನಿವಾರ ಹೇಳಿದ್ದಾರೆ.

ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಪುತ್ರಿಯರು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದಾರೆ. ಬಿಜೆಪಿ ನಾಯಕರು ಮೊದಲು ತಮ್ಮ ಪುತ್ರಿಯರನ್ನು ಮುಸ್ಲಿಮರಿಂದ ರಕ್ಷಿಸಬೇಕು ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಶಾಸಕ ಭಾಯಿ ವೀರೇಂದ್ರ ಹೇಳಿಕೆ ನೀಡಿದ ಒಂದು ದಿನದ ನಂತರ ಚೌಬೆ ಈ ಹೇಳಿಕೆ ಹೊರಬಿದ್ದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಮತ್ತೊಬ್ಬ ಎಂಎಲ್‌ಸಿ ಸಂತೋಷ್ ಸಿಂಗ್, ಆರ್‌ಜೆಡಿ ನಾಯಕರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ. ಯಾವುದೇ ಮುಸ್ಲಿಂ ಯುವಕರು ಹಿಂದೂ ಸಮುದಾಯದ ಹೆಣ್ಣುಮಕ್ಕಳ ಕಡೆಗೆ ಬೆರಳು ತೋರಿಸಿದರೆ, ನಾನು ಅವರ ಬೆರಳನ್ನು ಕತ್ತರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Leave A Reply