Men health tips : ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವವರೇ ಇತ್ತ ಗಮನಿಸಿ! ವೀರ್ಯಾಣುಗಳ ಸಂಖ್ಯೆ ಕಡಿಮೆಗೆ ಕಾರಣ, ಇನ್ನಿತರ ಸಮಸ್ಯೆ ಇಲ್ಲಿದೆ!
Men Health and Sperm : ಪುರುಷರ ಲೈಂಗಿಕ ಜೀವನ ಹದಗೆಡಲು (Men Health) ಕೆಲವೊಮ್ಮೆ ಸ್ವತಃ ಅವರೇ ಕಾರಣವಾಗಿರುತ್ತಾರೆ. ಆದರೆ ಆ ವಿಚಾರ ಅವರಿಗೆ ಗೊತ್ತಿರುವುದಿಲ್ಲ. ಇತ್ತೀಚಿಗಿನ ಜೀವನ ಶೈಲಿಗೂ ಹಿಂದಿನ ಕಾಲದ ಜೀವನ ಶೈಲಿಗೂ ಹಲವಾರು ವ್ಯತ್ಯಾಸಗಳಿವೆ. ಇದಕ್ಕೆಲ್ಲಾ ಕಾರಣ ತಂತ್ರಜ್ಞಾನ ಮುಖ್ಯ ಕಾರಣ ಆಗಿದೆ.
ಆಧುನಿಕ ಜೀವನದಲ್ಲಿ ಪುರುಷರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒತ್ತಡ ಮತ್ತು ಉದ್ವೇಗದಿಂದ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳ ಹೆಚ್ಚಳ ಮತ್ತು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಪುರುಷರ ವೀರ್ಯಾಣುಗಳ ಸಂತತಿಯನ್ನು (Men Health and Sperm ) ಕಡಿಮೆ ಮಾಡುವ ಕೆಲವೊಂದು ತಪ್ಪು ಹವ್ಯಾಸಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮುಖ್ಯವಾಗಿ ಅನೇಕ ಪುರುಷರು ತಮ್ಮ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುತ್ತಾರೆ. ಆದರೆ, ಇದರಿಂದ ಹೊರಸೂಸುವ ವಿಕಿರಣವು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಯಾರು ಕುಳಿತಲ್ಲೇ ಕುಳಿತು ಹೆಚ್ಚು ಕಾಲ ಟಿವಿ ನೋಡುತ್ತಾರೆ ಅಂತಹವರಿಗೆ ಕೂಡ ವೀರ್ಯಾಣು (sperm)ಗಳ ಸಂತತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ವ್ಯಾಯಾಮ ಇರುವುದಿಲ್ಲ. ದೇಹ ಹುರುಪಿನಿಂದ ಕೂಡಿರುವುದಿಲ್ಲ. ಯಾವುದೇ ಚಟುವಟಿಕೆ ಇಲ್ಲದ ಕಾರಣ ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ವೀರ್ಯಾಣುಗಳ ಉತ್ಪತ್ತಿ ನಡೆಯುವುದಿಲ್ಲ.
ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಪುರುಷರು ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದ ನೀವು ಲೈಂಗಿಕ ಸಮಸ್ಯೆಗಳನ್ನು ಎದುರಿಸಬಹುದು. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಇದೂ ಒಂದು ಕಾರಣ ಎಂದು ಹೇಳಲಾಗುತ್ತದೆ.
ಅದಲ್ಲದೆ ಬಹಳಷ್ಟು ಟೀ ಅಥವಾ ಕಾಫಿ ಕುಡಿಯುವ ಪುರುಷರು ಕಳಪೆ ಫಲವತ್ತತೆಯನ್ನು ಹೊಂದಿರುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಟೀ, ಕಾಫಿ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ
ಮದ್ಯಪಾನ (alcohol ) ಮತ್ತು ಧೂಮಪಾನ (smoking ) ಆರೋಗ್ಯಕ್ಕೆ ಹಾನಿಕರ. ಆದರೆ ಇದು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ.
ನಿದ್ರಾಹೀನತೆಯು ಪುರುಷರಲ್ಲಿ ಕಡಿಮೆ ವೀರ್ಯಾಣುಗಳ ಸಂಖ್ಯೆಯನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ತಜ್ಞರು ಹೆಚ್ಚು ನಿದ್ದೆ ಮಾಡಲು ಸಲಹೆ ನೀಡುತ್ತಾರೆ.
ಇನ್ನು ಇತರೆ ಚೀಸ್, ಸಕ್ಕರೆ ಪಾನೀಯ, ಅತಿಯಾದ ಸೋಯಾ ಉತ್ಪನ್ನಗಳು ಇವುಗಳ ಅತಿಯಾದ ಸೇವನೆ ಕೂಡ ಪುರುಷರ ವೀರ್ಯಾಣು ಕಡಿಮೆ ಆಗಲು ಕಾರಣ ಆಗುತ್ತದೆ.
ಇದನ್ನೂ ಓದಿ : ಮಕ್ಕಳ ಬಿಹೇವಿಯರ್ ಬದಲಾವಣೆಗೆ ಪೋಷಕರೇ ಕಾರಣ