Yash-Srinidhi Shetty : ರಾಕಿಂಗ್‌ ಸ್ಟಾರ್‌ ಯಶ್‌ ಕುರಿತು ಟ್ವೀಟ್‌ ಗೆ ಶ್ರೀನಿಧಿ ಶೆಟ್ಟಿ ಕೊಟ್ರು ಸ್ಪಷ್ಟನೆ !

Srinidhi Shetty: ಸಿನಿಮಾ ಎಂಬ ದುನಿಯಾ ಪ್ರಪಂಚದಲ್ಲಿ ಎತ್ತರದ ಮೆಟ್ಟಿಲನ್ನು ಹತ್ತುವುದು ಸುಲಭದ ಮಾತಲ್ಲ. ತನ್ನ ನಟನೆಯ ಮೂಲಕ ಮನ ಗೆದ್ದ ರಾಕಿಭಾಯ್ ಯಶ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತು ಶ್ರೀನಿಧಿ ಶೆಟ್ಟಿ(Srinidhi Shetty) ಸ್ಪಷ್ಟನೆ ನೀಡಿದ ಘಟನೆ ನಡೆದಿದೆ.

 

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್‌ ಮೇಲೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಆರೋಪ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿ ರಾಕಿಭಾಯ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ, ಈ ಕುರಿತು ಶ್ರೀನಿಧಿಯವರು ಸ್ಪಷ್ಟನೆ ನೀಡಿದ್ದಾರೆ.

ಕೆಜಿಎಫ್‌ ಸಿನಿಮಾದ (KGF Cinema) ಶೂಟಿಂಗ್‌ (Shooting)ಸೆಟ್‌ನಲ್ಲಿ ನಟ ಯಶ್‌ ಶ್ರೀನಿಧಿ ಶೆಟ್ಟಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಉಮೈರ್‌ ಸಂಧು ಈ ಕುರಿತು ಟ್ವೀಟ್ (Tweet)ಮಾಡಿದ್ದಾರೆ. ಕೆಜಿಎಫ್‌ ಚಾಪ್ಟರ್‌ 2 ( KGF – 2)ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸಿದ್ದು, ಇನ್ಮುಂದೆ ನಾನು ಯಶ್‌ ಜೊತೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಉಮೈರ್‌ ಸಂಧು ಶ್ರೀನಿಧಿ ಹೇಳಿದ್ದಾರೆಂದು ಹೇಳಿಕೊಂಡು ಟ್ಟಿಟರ್‌ನಲ್ಲಿ ಯಶ್ ವಿಷಕಾರಿ, ಕಿರುಕುಳ ನೀಡುವ ವ್ಯಕ್ತಿತ್ವದವರು ಎಂದು ಹೇಳಿದ ಪೋಸ್ಟ್ (Post) ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗಿ ರಾಕಿಭಾಯ್ ಅವರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.

ಕೆಜಿಎಫ್’ ಎರಡು ಭಾಗಗಳಲ್ಲಿ ಕನ್ನಡದ ತಾರೆಯಾಗಿ ನಟಿಸಿದ ಶ್ರೀನಿಧಿ ಶೆಟ್ಟಿಗೆ ದೊಡ್ದ ನೇಮ್ ಫೇಮ್ ದೊರೆತಿದ್ದು ಸುಳ್ಳಲ್ಲ. ಶ್ರೀನಿಧಿ ಶೆಟ್ಟಿ ಯಶ್ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 3 (KGF – 3)ಗಾಗಿ ಅಭಿಮಾನಿಗಳು ಎದುರು ನೋಡುತ್ತಿರುವಾಗ ರಾಕಿಂಗ್ ಸ್ಟಾರ್ ಯಶ್‌ ಮೇಲೆ ಬಹುದೊಡ್ಡ ಆರೋಪ ಕೇಳಿ ಬಂದಿದ್ದು, ಯಶ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಟ್ವೀಟ್ ಯಶ್ ಮತ್ತು ಶ್ರೀನಿಧಿ ಇಬ್ಬರ ಅಭಿಮಾನಿಗಳನ್ನು ಕೆರಳಿಸಿದೆ. ಸದ್ಯ, ಈ ಕುರಿತು ಶ್ರೀ ನಿಧಿ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪೋಸ್ಟ್ ಗಮನಿಸಿ, (Srinidhi Shetty Clarification on Umair Sandhu Tweet )”ಕೆಲವರು ಸಾಮಾಜಿಕ ಮಾಧ್ಯಮದ ಬಳಸಿಕೊಂಡು ಗಾಳಿಸುದ್ದಿ ಹರಡಲು ಯತ್ನಿಸಿದ್ದು, ನಾನು ಪ್ರೀತಿ, ಸಂತೋಷವನ್ನು ಹರಡಲು ಮತ್ತು ನನ್ನ ಜೀವನದಲ್ಲಿ ಮಹತ್ವದ ವ್ಯಕ್ತಿಗಳಿಗೆ ನನ್ನ ಆಳವಾದ ಮೆಚ್ಚುಗೆಯನ್ನು ತೋರಿಸಲು ಅದನ್ನು ಬಳಕೆ ಮಾಡುತ್ತೇನೆ. KGF ನ ವೈಭವದ ಜಗತ್ತು ಸೃಷ್ಟಿಯಾದಾಗ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಕೆಲಸ ಮಾಡಿರುವುದು ನಿಜವಾಗಿಯೂ ಒಂದು ಸಂಪೂರ್ಣ ಗೌರವ ಅವಕಾಶ ನೀಡಿದೆ. ಯಶ್‌ ಜತೆ ಕೆಲಸ ಮಾಡಲು ನಾನು ನಿಜಕ್ಕೂ ಅದೃಷ್ಟ ಮಾಡಿದೆ. ಅವರೊಬ್ಬ ರಿಯಲ್‌ ಜೆಂಟಲ್‌ಮ್ಯಾನ್ ಅಷ್ಟೆ ಅಲ್ಲದೆ ಒಬ್ಬ ಮೆಂಟರ್‌ ಜೊತೆಗೆ ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದಾರೆ. ಯಶ್‌ ನನ್ನ ಸ್ಫೂರ್ತಿ” ಎಂದು ಶ್ರೀ ನಿಧಿ ಶೆಟ್ಟಿ ಹೇಳಿಕೊಂಡಿದ್ದಾರೆಇದೆಲ್ಲದರ ನಡುವೆ ನಾನು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬಹುದೊಡ್ಡ ಅಭಿಮಾನಿಯೆಂದು ಹೇಳಿದ್ದು, ಜಾಲತಾಣದಲ್ಲಿ ಹರಿದಾಡಿದ ಊಹಾಪೋಹ ಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: Death threat to Salman khan: ಸಲ್ಮಾನ್ ಖಾನ್ ಸಾಯಿಸೋದೇ ನನ್ನ ಅಂತಿಮ ಗುರಿ: ಗ್ಯಾಂಗ್ ಸ್ಟರ್ ಸ್ಫೋಟಕ ಹೇಳಿಕೆ

Leave A Reply

Your email address will not be published.