KMF ನೇಮಕ: 487 ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ ಏನು ಹೇಳಿತು? ಶಾಕಿಂಗ್‌ ನ್ಯೂಸ್‌ ನಿಮಗಾಗಿ

KMF :ಈಗಾಗಲೇ ಕರ್ನಾಟಕ (Karnataka ) ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು (job ) ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆ.ಎಂ.ಎಫ್) ಇಲಾಖೆಯು ಡೈರಿ ಮೇಲ್ವಿಚಾರಕರು, ಲೆಕ್ಕ ಸಹಾಯಕರು, ಕಿರಿಯ ತಾಂತ್ರಿಕ ಸಹಾಯಕರು ಹಾಗೂ ವಿವಿಧ 487 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌’ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಎಂಎಫ್‌ (KMF) ಸದರಿ 487 ಹುದ್ದೆಗಳ ಭರ್ತಿಗೆ 2022 ರ ಅಕ್ಟೋಬರ್ 20 ರಂದು ಅಧಿಸೂಚನೆ ಬಿಡುಗಡೆ ಮಾಡಿತ್ತು. ಅರ್ಜಿ ಸಲ್ಲಿಸಿದವರಿಗೆ ನೇಮಕ ಪ್ರಕ್ರಿಯೆಗಳನ್ನು ನಡೆಸಲು ಗುಜರಾತ್‌ನ ಆನಂದ ಜಿಲ್ಲೆಯ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಏಜೆನ್ಸಿಯನ್ನು ನೇಮಕ ಮಾಡಿಕೊಂಡಿತ್ತು. ಪರೀಕ್ಷೆಯ ನಂತರ 2023 ರ ಫೆಬ್ರವರಿ ತಿಂಗಳ 2 ರಿಂದ 28 ರವರೆಗೆ ಸಂದರ್ಶನ ನಡೆಸಿ, ಅಂತಿಮ ಆಯ್ಕೆಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿತ್ತು.

ಆದರೆ ಈ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಚಾರ ನಡೆದಿದೆ. ಅಭ್ಯರ್ಥಿಗಳ ಅಂಕಗಳನ್ನು ತಿದ್ದಲು ಪ್ರತಿ ಹುದ್ದೆಗೆ 30 – 50 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂದು ಅರ್ಜಿದಾರರು ಆರೋಪ ಮಾಡಿದ್ದಾರೆ.

ಈ ಆರೋಪದ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘವು (Karnataka Milk Federation) ಕಳೆದ ವರ್ಷ ಅಧಿಸೂಚಿಸಿದ್ದ 487 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ ತಡೆ ನೀಡಿದ್ದು, ಸದ್ಯ ಈ ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ ವಿಚಾರಣೆ ಕೈಗೊಂಡಿರುವ ಕರ್ನಾಟಕ ಉಚ್ಚನ್ಯಾಯಾಲಯವು, ಮುಂದಿನ ವಿಚಾರಣೆವರೆಗೆ ಆಯ್ಕೆಪಟ್ಟಿ ಪ್ರಕಟಿಸದಂತೆ ಆದೇಶ ನೀಡಿದೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಒಟ್ಟು 5 ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿದ ನಂತರ ಈ ಮಧ್ಯಂತರ ಆದೇಶ ನೀಡಲಾಗಿದೆ.

ಈಗಾಗಲೇ ಅರ್ಜಿದಾರರ ಪರ ವಾದ ಮಂಡಿಸಿದ, ಹಿರಿಯ ವಕೀಲ- ಡಿ ಆರ್‌ ರವಿಶಂಕರ್ ವಾದ ಆಲಿಸಿದ ಬಳಿಕ, ನ್ಯಾಯಪೀಠವು – ಪ್ರತಿವಾದಿಗಳಾದ ರಾಜ್ಯ ಸಹಕಾರ ಇಲಾಖೆ, ಕೆಎಂಎಫ್‌, ಇನ್‌ಸ್ಟಿಟ್ಯೂಟ್ ಆಫ್‌ ರೂರಲ್ ಮ್ಯಾನೇಜ್ಮೆಂಟ್ ಮತ್ತು ಸಿಐಡಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಈ ಮೇಲಿನಂತೆ ಹೆಚ್ಚಿನ ವಿಚಾರಣೆ ನಂತರ ಸತ್ಯಾ ಸತ್ಯತೆಗಳು ತಿಳಿದು ಬರಬೇಕಿದ್ದು, ನಂತರ ಅರ್ಹ ಅಭ್ಯರ್ಥಿಗಳು ಈ ಉದ್ಯೋಗ ಪಡೆಯಬಹುದಾಗಿದೆ.

Leave A Reply

Your email address will not be published.