PradhanMantri Jan Dhan Yojana :ಪ್ರಧಾನ ಮಂತ್ರಿ ಜನ್ ಧನ್ ಯೋಜನೆ : ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ನೀಡುತ್ತೆ 10 ಸಾವಿರದವರೆಗೆ ಹಣ!
PradhanMantri Jan Dhan Yojana :ದೇಶದ ಜನತೆಗೆ ಸಹಾಯವಾಗುವ ನಿಟ್ಟಿನಿಂದ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದ್ದು, ಈ ಮೂಲಕ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಇಂತಹ ಉತ್ತಮ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PradhanMantri Jan Dhan Yojana) ಕೂಡ ಒಂದು.
ಈ ಯೋಜನೆ ಖಾತೆದಾರರಿಗೆ ವಿವಿಧ ಪ್ರಯೋಜನಗಳನ್ನ ನೀಡುತ್ತಿದೆ. ಆದರೆ ಮಾಹಿತಿ ಕೊರತೆಯಿಂದ ಜನರಿಗೆ ಇದರ ಪ್ರಯೋಜನ ತಿಳಿಯದೆ ಹೋಗಿದೆ. ಹೌದು. ಜನ್ ಧನ್ ಖಾತೆದಾರರಿಗೆ 10,000 ರೂಪಾಯಿಯನ್ನು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿಲ್ಲವಾದರೂ ನೀಡುತ್ತದೆ.
ಖಾತೆದಾರರು ರುಪೇ ಡೆಬಿಟ್ ಕಾರ್ಡ್ ಒದಗಿಸಿ, ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ಖಾತೆಯಲ್ಲಿ 10,000 ಓವರ್‌ಡ್ರಾಫ್ಟ್ ತೆಗೆದುಕೊಳ್ಳಬಹುದು. ಇದುವರೆಗೆ ಈ ಮೊತ್ತ 5 ಸಾವಿರ ರೂಪಾಯಿ ಆಗಿದ್ದು, ಇದೀಗ ಅದನ್ನ 10 ರೂಪಾಯಿ ಸಾವಿರಕ್ಕೆ ಹೆಚ್ಚಿಸಲಾಗಿದೆ.
ಖಾತೆದಾರರು ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮೊತ್ತದವರೆಗೆ ಹಣವನ್ನ ಹಿಂಪಡೆಯಬಹುದು. ಇತರ ಕ್ರೆಡಿಟ್ ಸೌಲಭ್ಯಗಳಂತೆ, ಓವರ್‌ಡ್ರಾಫ್ಟ್ ಸೌಲಭ್ಯದ ಮೂಲಕ ಹಣವನ್ನ ಹಿಂಪಡೆಯುವಾಗ ಗ್ರಾಹಕರು ಸ್ವಲ್ಪ ಬಡ್ಡಿಯನ್ನ ಪಾವತಿಸಬೇಕಾಗುತ್ತದೆ. ಜನ್ ಧನ್ ಖಾತೆದಾರರು ಅಲ್ಪಾವಧಿ ಸಾಲದ ರೂಪದಲ್ಲಿ 10 ಸಾವಿರದವರೆಗೆ ಹಣವನ್ನ ಹಿಂಪಡೆಯಬಹುದು.
ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು PMJDY ಖಾತೆದಾರರು ಕನಿಷ್ಟ ಆರು ತಿಂಗಳ ಕಾಲ ಅದನ್ನು ನಿರ್ವಹಿಸಿರಬೇಕು. ಅದೇ ರೀತಿ ನಿರ್ದಿಷ್ಟ ಕುಟುಂಬದ ಒಬ್ಬ ಸದಸ್ಯ ಮಾತ್ರ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು. ಸಾಮಾನ್ಯವಾಗಿ ಮಹಿಳಾ ಸದಸ್ಯರು ಅರ್ಹರಾಗಿರುತ್ತಾರೆ. ಇದಲ್ಲದೆ, ಕ್ಲೈಂಟ್ ಉತ್ತಮ CIBIL ಸ್ಕೋರ್ ಅನ್ನು ಹೊಂದಿರಬೇಕು.
ಅಷ್ಟೇ ಅಲ್ಲದೆ, ಜನ್ ಧನ್ ಗ್ರಾಹಕರಿಗೆ, 30 ಸಾವಿರ ರೂಪಾಯಿಗಳವರೆಗೆ ಜೀವ ವಿಮೆಯನ್ನೂ ನೀಡುತ್ತಿದೆ. ಖಾತೆದಾರರು ಅಪಘಾತದಲ್ಲಿ ಸಾವನ್ನಪ್ಪಿದರೆ, ಖಾತೆದಾರರ ಕುಟುಂಬಕ್ಕೆ ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದರೆ ವಿಮಾ ರಕ್ಷಣೆಯಾಗಿ ರೂ.30,000 ನೀಡುತ್ತದೆ.