NIA ಚಾರ್ಜ್‌ಶೀಟ್‌ನಲ್ಲಿ ಶಾರೀಕ್‌ ಸಂಚು ಬಯಲು! ಶಾಕಿಂಗ್‌ ಮಾಹಿತಿ ಬಹಿರಂಗ, ಎಲ್ಲಾ ವಿವರ ಇಲ್ಲಿದೆ!

NIA: ದೇಶದಲ್ಲಿ ತೆರೆಮರೆಯಲ್ಲಿ ದೇಶ ವಿರೋಧಿ ಚಟುವಟಿಕೆಗಳು ಗರಿಗೆದರಿ ಎಗ್ಗಿಲ್ಲದೆ ನಡೆಯುತ್ತಿದ್ದು ಖಾಕಿ ಪಡೆ ಜೊತೆಗೆ ಎನ್​ಐಎ ತಂಡಗಳು ಈ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಹೆಡೆ ಮುರಿ ಕಟ್ಟುವಲ್ಲಿ ನಿರತರಾಗಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ( Mangalore Bomb Blast) ಈ ಪ್ರಕರಣದ ಕುರಿತಂತೆ ಈಗಾಗಲೇ ಅನೇಕ ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಈ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ(Shivamogga Case)ಕಳೆದ ಆಗಸ್ಟ್ 15ರಂದು ಆರೋಪಿ ಜಮೀವುಲ್ಲಾ ಮತ್ತು ಇತರರು ಪ್ರೇಮ್ ಸಿಂಗ್ (Prem Singh) ಎಂಬ ವ್ಯಕ್ತಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಸಂದರ್ಭ ಶಿವಮೊಗ್ಗದ ತುಂಗಾನದಿ(Tunga river bomb blast case) ತಟದಲ್ಲಿ ಬಾಂಬ್ ಸ್ಫೋಟದ ಟ್ರಯಲ್ ನಡೆಸಿದ ಮಾಹಿತಿ ಹೊರ ಬಿದ್ದಿತ್ತು. ಈ ಬಳಿಕ, ರಾಷ್ಟ್ರೀಯ ತನಿಖಾ ಸಂಸ್ಥೆ ಈ ಪ್ರಕರಣದ ತನಿಖೆಯನ್ನು ಆರಂಭಿಸಿ ಈ ಕೃತ್ಯದಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ಶಂಕಿತ ಉಗ್ರರು ವಿದೇಶಿ ಐಎಸ್‌ ಭಯೋತ್ಪಾದಕ(ISIS Terrorist) ಗುಂಪಿನ ಚಟುವಟಿಕೆಗಳನ್ನು ತೊಡಗಿಸಿಕೊಂಡು ಈ ಕೃತ್ಯಗಳನ್ನೂ ಹೆಚ್ಚಿಸಲು ಸಂಚು ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇದೆ ವೇಳೆ, ಪ್ರಕರಣದ ಅನೇಕ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.

ಶಿವಮೊಗ್ಗ ತುಂಗಾ ನದಿ (Tunga River) ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣದ ಜೊತೆಗೆ ಕಾನೂನುಬಾಹಿರ ಚಟುವಟಿಕೆ, ರಾಷ್ಟ್ರಧ್ವಜಕ್ಕೆ ಅವಮಾನ, ವಿಧ್ವಂಸಕ ಕೃತ್ಯದ ಜೊತೆಗೆ ಅನೇಕ ದೇಶ ವಿರೋಧಿ ಚಟುವಟಿಕೆಯಲ್ಲಿ ಶಾಮೀಲಾಗಿರುವ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ಇಬ್ಬರು ಆರೋಪಿಗಳ ವಿರುದ್ಧ ಕೋರ್ಟ್ನಲ್ಲಿ ( Court) ಆರೋಪಪಟ್ಟಿ (Chargesheet)ಸಲ್ಲಿಸಲಾಗಿದೆ. ಶಿವಮೊಗ್ಗ ಮಾಜ್‌ ಮುನೀರ್‌ ಅಹಮದ್‌ (23) ಮತ್ತು ಸೈಯದ್‌ ಯಾಸಿನ್‌ (22) ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಐಪಿಸಿ 120ಬಿ, 121ಎ ಮತ್ತು 122, 1860, ಯುಎಪಿಎ ಕಾಯ್ದೆ 18, 18ಬಿ, 20 ಮತ್ತು 38 ರ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ಜೊತೆಗೆ ಇಬ್ಬರು ಆರೋಪಿಗಳು ಬಿ ಟೆಕ್ ಪದವೀಧರರು ಎಂದು ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಎನ್ಐಎ( NIA)ವಿಶೇಷ ತಂಡ ನ್ಯಾಯಾಲಯಕ್ಕೆ (Court) ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಐಎಸ್‌ ಭಯೋತ್ಪಾದಕ ಗುಂಪುಗಳಿಂದ ಪ್ರೇರೇಪಿತರಾಗಿದ್ದ ಆರೋಪಿಗಳು ಮಾಜ್ ವಿದೇಶಿ ಹ್ಯಾಂಡ್ಲರ್​​ಗಳಿಂದ ಸರಿ ಸುಮಾರು 1.5 ಲಕ್ಷ ಮೌಲ್ಯ ಬೆಲೆ ಬಾಳುವ ಕ್ರಿಪ್ಟೋ ಕರೆನ್ಸಿಯನ್ನು ಗೆಳೆಯರ ಖಾತೆಯ ಮುಖಾಂತರ ಪಡೆದುಕೊಂಡಿದ್ದು, ಸೈಯದ್ ಯಾಸಿನ್ ಸ್ನೇಹಿತನ ಖಾತೆಗೆ 62 ಸಾವಿರ ಹಣ ಜಮೆಯಾಗಿದೆ. ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶಕ್ಕೆ ಚಾರಣ ಮತ್ತು ಅಡಗು ತಾಣಗಳಿಗೆ ತೆರಳಿದ್ದು,ವಾರಾಹಿ ನದಿ ದಡದಲ್ಲಿ ಐಇಡಿ ಪ್ರಾಯೋಗಿಕ ಸ್ಫೋಟ ಮಾಡಿದ್ದು, ಈ ವೇಳೆ ಭಾರತದ ರಾಷ್ಟ್ರೀಯ ಧ್ವಜವನ್ನು ಸುಟ್ಟು ಹಾಕಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು ಎನ್ನಲಾಗಿದೆ.

ಇದರ ಮುಂದುವರಿದ ಭಾಗವಾಗಿ ಶಾರಿಕ್ ಬಾಂಬ್ ಬ್ಲಾಸ್ಟ್ ಗೆ ಯೋಜನೆ ಹಾಕಿಕೊಂಡಿದ್ದ ಎಂದು ತಿಳಿದುಬಂದಿದೆ. ಆದರೆ, ಶಾರಿಕ್ ಯೋಜನೆ ಹಾಕಿದಂತೆ ಆಗದೇ ಮಾರ್ಗ ಮಧ್ಯೆದಲ್ಲಿಯೇ ಸ್ಫೋಟಗೊಂಡಿದ್ದು ಗೊತ್ತಿರುವ ವಿಚಾರವೇ!ಈ ನಡುವೆ ಶಂಕಿತ ಆರೋಪಿಗಳಿಬ್ಬರು ಐಸಿಸ್ ಚಟುವಟಿಕೆಗಳನ್ನು ರಾಜ್ಯದಲ್ಲಿ ವಿಸ್ತರಿಸಲು ಯೋಜನೆ ಹಾಕಿ,ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳು ಹಾಗೂ ಹಿಂಸಾಚಾರ ನಡೆಸುವ ಸಂಚು ಮಾಡಿದ್ದರು. ಮಾಜ್ ಮತ್ತು ಯಾಸೀನ್ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಹಚ್ಚಿದ್ದು ಮಾತ್ರವಲ್ಲದೇ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಕುರಿತು ರೋಚಕ ಮಾಹಿತಿ ಬಹಿರಂಗವಾಗಿದೆ. ವಿದೇಶಿ ಮೂಲದ ಹ್ಯಾಂಡ್ಲರ್ ಗಳಿಂದ ಪ್ರೇರೇಪಿತರಾಗಿದ್ದ ಶಂಕಿತರು ಗೋದಾಮುಗಳು, ಮದ್ಯದ ಮಳಿಗೆಗಳು, ಹಾರ್ಡ್ವೇರ್ ಅಂಗಡಿಗಳು, ವಾಹನಗಳು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿ ಮಾಡಲು ಮುಂದಾಗಿದ್ದರು. ಸದ್ಯ, ಈ ಪ್ರಕರಣದ ಕುರಿತಾಗಿ ಆರು ಆರೋಪಿಗಳ ವಿರುದ್ಧ ಎನ್​ಐಎ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಡಬ:ಕಾಡಾನೆ ಸೆರೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಕೊಲೆಗೆ ಯತ್ನ ಪ್ರಕರಣ,ಬಂಧಿತ ಆರೋಪಿಗಳಿಗೆ ಜಾಮೀನು

Leave A Reply

Your email address will not be published.